ಪುತ್ತೂರು: ಎಸ್.ಎಸ್.ಎಫ್, ಎಸ್.ವೈ.ಎಸ್ ಹಾಗೂ ಜೆ.ಸಿ.ಸಿ ಸುನ್ನೀ ಫ್ರೆಂಡ್ಸ್ ಬನ್ನೂರು ಇವುಗಳ ಸಂಯುಕ್ತ ಅಶ್ರಯದಲ್ಲಿ ಬನ್ನೂರು ಸುನ್ನೀ ಸೆಂಟರ್ ಇದರ ಅರ್ಧ ವಾರ್ಷಿಕದ ಪ್ರಯುಕ್ತ ಪುತ್ತೂರು ಸರಕಾರಿ ಆಸ್ಪತ್ರೆಯ ವಠಾರದಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರರಣಾ ಕಾರ್ಯಕ್ರಮ ಸಯ್ಯದ್ ಉಮ್ಮರ್ ತಂಙಳ್ ಬನ್ನೂರು ನೇತೃತ್ವದಲ್ಲಿ ನಡೆಯಿತು.
ಎಸ್.ವೈ.ಎಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಮುಸ್ಲಿಯಾರ್ ಬನ್ನೂರು ಮಾತನಾಡಿ ” ಆರು ತಿಂಗಳ ಅವಧಿಯಲ್ಲಿ ಬನ್ನೂರು ಸುನ್ನೀ ಸೆಂಟರ್ ಹಲವು ಸಾಂತ್ವನ, ಸಾಮಾಜೀಕ ಕಾರ್ಯಕ್ರಮವನ್ನು ನಡೆಸುತ್ತಾ ಹಲವಾರು ಬಡವರೀಗೆ ಆಶಾ ಕಿರಣವಾಗಿ ಮುನ್ನಡೆಯುತ್ತಿದೆ ಆರು ತಿಂಗಳ ಕಾರ್ಯ ಚಟುಟಿಕೆಯ ಸವಿ ನೆನಪಿಗಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ” ಎಂದರು.
ಈ ಸಂಧರ್ಭದಲ್ಲಿ ಬನ್ನೂರು ಜಮಾಅತ್ ಕಮಿಟಿ ಉಪಾಧ್ಯಕ್ಷರಾದ ಅಬ್ದುಲ್ ಹಮೀದ್ ಲಕ್ಕೀ ಸ್ಟಾರ್, ಸುನ್ನೀ ಸೆಂಟರ್ ಅಧ್ಯಕ್ಷರಾದ ಫಾರೂಕ್ ಬನ್ನೂರು, ಎಸ್.ಎಸ್.ಎಫ್ ಉಪಾಧ್ಯಕ್ಷರಾದ ಸಮೀರ್ ಬನ್ನೂರು, ಸಾಂತ್ವನ ವಿಭಾಗ ಅಧ್ಯಕ್ಷರಾದ ರಿಯಾಝ್ ಪಾಪ್ಲಿ ಬನ್ನೂರು, ಜೆ.ಸಿ.ಸಿ ಸದಸ್ಯರಾದ ಬಶೀರ್ ಬನ್ನೂರು, ಸುನ್ನೀ ಸೆಂಟರ್ ಸದಸ್ಯರುಗಳಾದ ಮುಹಮ್ಮದ್ ಅಕ್ಕರೆ, ಸ್ವದೀಕ್ ಬನ್ನೂರು ಉಪಸ್ಥಿತರಿದ್ದರು.