janadhvani

Kannada Online News Paper

ಸೆಪ್ಟೆಂಬರ್ 19 ಧ್ವಜ ದಿನ: ಕೊಣಾಜೆ ಸೆಕ್ಟರ್ ವ್ಯಾಪ್ತಿಯ ಪ್ರತಿ ಶಾಖೆಗಳಲ್ಲಿ ಧ್ವಜಾರೋಹಣ

ಕೊಣಾಜೆ : ಎಸ್ಸೆಸ್ಸೆಫ್ ಕೊಣಾಜೆ ಸೆಕ್ಟರ್ ವ್ಯಾಪ್ತಿಯ ಹದಿಮೂರು ಶಾಖೆಗಳಲ್ಲಿ ಧ್ವಜ ದಿನದ ಪ್ರಯುಕ್ತ ಧ್ವಜಾರೋಹಣ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ನಮ್ಮ ವ್ಯಾಪ್ತಿಯ ಇನೋಳಿ, ಬೈತಾರ್, ದೆಬ್ಬೇಲಚ್ಚಿಲ್, ಕೊಜಪಾಡಿ ಸೈಟ್, ಮಲಾರ್, ಬದ್ರಿಯಾ ನಗರ, ಅಕ್ಷರ ನಗರ, ನ್ಯೂಪಡ್ಪು, ಆಲಡ್ಕ, ಫರೀದ್ ನಗರ, ಪಜೀರ್ ಹಾಗೂ ತೋಕರಬೆಟ್ಟು ಶಾಖೆಗಳಲ್ಲಿ ಧ್ವಜಾರೋಹಣ ಮತ್ತು ಸಂದೇಶ ಭಾಷಣ ಕಾರ್ಯಕ್ರಮ ಬೆಳಗ್ಗೆ 7:30ಕ್ಕೆ ನಡೆಯಲಿದೆ.

ಸಂಘಟನೆಗೆ ನೇತೃತ್ವ ನೀಡಿ ಕಾರ್ಯಾಚರಿಸಿ ನಮ್ಮಿಂದ ಅಗಲಿದ ಕಾರ್ಯಕರ್ತರಿಗೆ, ಉಲಮಾ, ಉಮಾರ ನಾಯಕರುಗಳಿಗೆ ಅವರ ಕುಟುಂಬಕ್ಕೆ ಬೇಕಾಗಿ ಪ್ರತ್ಯೇಕ ದುಆ ಮಾಡಲಾಗುವುದು. ಎಂದು ಎಸ್ಸೆಸ್ಸೆಫ್ ಕೊಣಾಜೆ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಅಬೂಸ್ವಾಲಿ ಪಜೀರ್ ತಿಳಿಸಿದರು.



error: Content is protected !! Not allowed copy content from janadhvani.com