ಮಸ್ಕತ್: ಒಮಾನ್ ನ ಬೃಹತ್ ಕೈಗಾರಿಕಾ ವಲಯ ದುಕುಮ್ ಎಂಬಲ್ಲಿನ ಬೀಚ್ ನಲ್ಲಿ ಮಂಗಳೂರು ಮೂಲದ ಇಬ್ಬರು ಯುವಕರು ನೀರುಪಾಲಾದ ಘಟನೆ ದಿನಾಂಕ (27-8-2021)ರಂದು ನಡೆದಿದೆ. ಈ ಪೈಕಿ ಓರ್ವ ಯುವಕನ ಮೃತದೇಹ ಸಂಜೆಯ ವೇಳೆ ಪತ್ತೆಯಾಗಿದ್ದು, ಇನ್ನೊಂದು ಮೃತದೇಹ ದಿನಾಂಕ (28/08/2021) ರಂದು ದೊರೆತಿದೆ. ಮೃತಪಟ್ಟವರನ್ನು ಝಮೀರ್ (25) ಕೋಟೆಪುರ ಮತ್ತು ರಿಝ್ವಾನ್ ಉಳ್ಳಾಲ (24) ಎಂದು ಗುರುತಿಸಲಾಗಿದ್ದು ಮೃತದೇಹವನ್ನು ಒಮಾನ್ ನಲ್ಲಿಯೇ 29/08/2021 ದಫನ ಮಾಡಲಾಯಿತು.
ಒಮಾನ್ ನಲ್ಲಿ ಲಾಕ್ ಡೌನ್ ಸಂಪೂರ್ಣವಾಗಿ ತೆರವುಗೊಂಡ ಬಳಿಕದ ಮೊದಲ ಶುಕ್ರವಾರ ಕಂಪೆನಿಯ 18ರಷ್ಟು ಮಂದಿ ಉದ್ಯೋಗಿಗಳು ಒಟ್ಟಾಗಿ ವಾಹನದಲ್ಲಿ ಬೀಚ್ ಪ್ರದೇಶಕ್ಕೆ ತೆರಳಿದ್ದರು. ದುಕುಮ್ ನಿಂದ ಸುಮಾರು 150 ಕಿ. ಮೀ. ದೂರದ ಈ ಬೀಚ್ ನಲ್ಲಿ ಈಜಲು ಇಳಿದ ಯುವಕರ ಪೈಕಿ ನಾಲ್ಕು ಮಂದಿ ನೀರುಪಾಲಾಗಿದ್ದು, ಈ ಪೈಕಿ ಇಬ್ಬರನ್ನು ರಕ್ಷಿಸಲಾಗಿತ್ತು. ರಿಝ್ವಾನ್ ಮತ್ತು ಝಮೀರ್ ಕೋಟೆಪುರ ಇಬ್ಬರೂ ಈಜು ಬಲ್ಲವರಾಗಿದ್ದರೂ ನೀರಿನ ಆಳಕ್ಕೆ ಸಿಲುಕಿ ಮೃತಪಟ್ಟಿದ್ದರು.
ಮ್ರತಗೊಂಡ ವಿಷಯ ತಿಳಿಯುತ್ತಿದ್ದಂತೆ ICF ಒಮಾನ್ ನಾಯಕರು ದಾಖಲೆ ಪತ್ರದ ಪ್ರಕ್ರಿಯೆಗಾಗಿ ಕಂಪೆನಿ, ಎಂಬಸ್ಸಿ ಮತ್ತು ಮ್ರತರ ಮನೆಯವರನ್ನು ಸಂಪರ್ಕಿಸಿ ದಫನ ಮಾಡಲು ಬೇಕಾದ ಎಲ್ಲಾ ದಾಖಲೆಗಳನ್ನು ಸರಿಪಡಿಸಿ, KCF ಮತ್ತು ICF ನಾಯಕರು ಮಸ್ಕತ್ ನಿಂದ ಸರಿ ಸುಮಾರು 550 KM ನಷ್ಟು ಕ್ರಮಿಸಿ ನಿನ್ನೆ (29/08/2021) ಅಂತ್ಯ ಕ್ರಿಯೆಗೆ ಬೇಕಾದ ಎಲ್ಲಾ ಪ್ರಕ್ರಿಯೆಗಳಿಗೆ ನೆರವು ನೀಡಿ ಮಗ್ರಿಬ್ ನಮಾಜಿನ ಬಳಿಕ ದಫನ ಮಾಡಲಾಯಿತು.
ನಾಯಕರಾದ ರಾಝಿಕ್ ಹಾಜಿ, ರಫೀಕ್ ಧರ್ಮಡಂ ಮತ್ತು ನಿಯಾಝ್ ಚಂಡಿಯಾಡ್ ರವರು ಬೇಕಾದ ಎಲ್ಲಾ ದಾಖಲೆಗಖನ್ನು ಸರಿಪಡಿಸಿದ್ದು ಹುಸೈನ್ ತೀರ್ಥಹಳ್ಳಿ, ಹನೀಫ್ ಸಖಾಫಿ, ಮುಹಮ್ಮದ್ ಅಲಿ ಸಖಾಫಿ, ಅನಸ ಜೌಹರಿ ಮತ್ತು ಮುಜೀಬ್ ಅಂತ್ಯಕ್ರಿಯೆಗಳಿಗೆ ನೇತ್ರತ್ವ ನೀಡಿದರು.
ಸಾಂತ್ವನ ವಿಭಾಗ
KCF ಒಮಾನ್

















ಇನ್ನಷ್ಟು ಸುದ್ದಿಗಳು
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ
ಯುಎಇ: ವೈಯಕ್ತಿಕ ವಾಟ್ಸಾಪ್ ಚಾಟ್ ಮತ್ತು ಫಾರ್ವರ್ಡ್ಗಳಿಗೂ ಸೈಬರ್ ಕಾನೂನು ಅನ್ವಯ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಸೌದಿ: ಪಾರ್ಕ್ನಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್- ಆರು ವರ್ಷದ ಬಾಲಕ ಮೃತ್ಯು
ಪ್ರಯಾಣಿಕರ ಸಂಕಷ್ಟಕ್ಕೆ ತೆರೆ: ಕುವೈತ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಪುನಾರಂಭ
ಶುಭ ಸುದ್ದಿ : ಭಾರತ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಲಗೇಜ್ ಮಿತಿ ಹೆಚ್ಚಳ
ಆರು ವಿಭಾಗ ಜನರಿಗೆ ಮಕ್ಕಾ ಪ್ರವೇಶಕ್ಕೆ ಅನುಮತಿ- ಅಬ್ಶೀರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
ಶುಭ ಸುದ್ದಿ: ಕತಾರ್ನಲ್ಲಿ ವಿಮಾನ ಸೇವೆಗಳು ಯಥಾಸ್ಥಿತಿಗೆ
ಹಜ್ ಯಾತ್ರಿಕರಿಗೆ ಲಗೇಜ್ ರಹಿತ ಪ್ರಯಾಣ- ಸೌದಿ ಸಚಿವಾಲಯದ ಹೊಸ ಯೋಜನೆ