janadhvani

Kannada Online News Paper

ಖತ್ತಾರ್: ಉದ್ಯೋಗ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ರವಾನಿಸದಿರಿ- ಗೃಹ ಸಚಿವಾಲಯ

ದೋಹಾ: ತಮ್ಮ ಉದ್ಯೋಗದ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದ ಮೂಲಕ ರವಾನಿಸಬಾರದೆಂದು ಗೃಹ ಸಚಿವಾಲಯವು ಎಚ್ಚರಿಕೆ ನೀಡಿದೆ.

ಪ್ರತ್ಯೇಕವಾಗಿ ಸರ್ಕಾರಿ ಇಲಾಖೆಯ ಉದ್ಯೋಗಿಗಳು ವ್ಯಾಟ್ಸಾಪ್ ಮತ್ತಿತರ ಮಾಧ್ಯಮಗಳ ಮೂಲಕ ತಮ್ಮ ಕೆಲಸಕಾರ್ಯಗಳ ವಿವರಗಳನ್ನು ಕಳುಹಿಸಬಾರದು ಎಂದು ಸಚಿವಾಲಯದ ಅಪರಾಧ ತನಿಖಾ ಇಲಾಖೆಯ ನಿರ್ದೇಶಕ ಬ್ರಿಗೇಡಿಯರ್ ಜಮಾಲ್ ಅಲ್ಕಾಬಿ ಹೇಳಿದರು.
ಅವರು ಸೈಬರ್ ಸಚಿವಾಲಯ ನಡೆಸಿದ ‘ಅಪರಾಧ ವಿರೋಧಿ ಕಾಯಿದೆ’ ಕುರಿತಾದ ಸಭೆಯಲ್ಲಿ ಮಾತನಾಡುತ್ತಿದ್ದರು.

ಸಾಮಾಜಿಕ ಮಾಧ್ಯಮಗಳ ಬಳಕೆಯಲ್ಲಿರುವ ಅಪಾಯಗಳ ಕುರಿತು ಮಾಧ್ಯಮಗಳು ಜಾಗೃತಿ ಮೂಡಿಸಬೇಕೆಂದು ಅವರು ಕರೆ ನೀಡಿದರು. ಸಾಮಾಜಿಕ ಮಾಧ್ಯಮದ ಅಪಾಯಗಳ ಬಗ್ಗೆ ಸಾರ್ವಜನಿಕರಲ್ಲಿ ಸಮಗ್ರ ಜಾಗೃತಿ ಮೂಡಿಸಲು ಕಾರ್ಯಾಗಾರ ನಡೆಸುವಂತೆ ಅವರು ಮಾಧ್ಯಮಗಳಿಗೆ ಆಹ್ವಾನ ನೀಡಿದರು.

ಸಾಮಾಜಿಕ ಮಾಧ್ಯಮದ ಮೂಲಕ ಸಾರ್ವಜನಿಕರು ತಮ್ಮ ವೈಯಕ್ತಿಕ ಮಾಹಿತಿ, ಅಥವಾ ಚಿತ್ರಗಳನ್ನು ಕಳುಹಿಸಬಾರದು ಅಥವಾ ಪ್ರಚಾರ ಪಡಿಸಬಾರದು. ಮಕ್ಕಳು ಈ ಸಾಮಾಜಿಕ ಮಾಧ್ಯಮಗಳೊಂದಿಗೆ ಸಂವಹನ ನಡೆಸುವುದನ್ನು ನಿರೀಕ್ಷಿಸುವಂತೆಯೂ ಸಲಹೆ ನೀಡಿದರು.

ಅನೇಕ ಸಂದರ್ಭಗಳಲ್ಲಿ, ಆರೋಪಿಗಳನ್ನು ಕಂಡುಹಿಡಿಯುವುದು ಸುಲಭ. ಹೆಚ್ಚಿನ ಸೈಬರ್ ಅಪರಾಧಗಳು ದೇಶದ ಹೊರಗಿನಿಂದ ಉಂಟಾಗುತ್ತಿದೆ. ಆ ಕಾರಣಕ್ಕಾಗಿ ಅಪರಾಧಿಗಳನ್ನು ಹುಡುಕುವುದು ಕಷ್ಟ.ಸೈಬರ್ ಅಪರಾಧಗಳ ಅಪಾಯಗಳ ಬಗ್ಗೆ ಜಾಗೃತಿಯನ್ನು ಶಕ್ತಗೊಳಿಸಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಸುರಕ್ಷಿತ ಇಂಟರ್ನೆಟ್ ಬಳಕೆ ಮತ್ತು ಸಮಾಜದ ನಡುವೆ ಭದ್ರತೆಯನ್ನು ಖಾತರಿಪಡಿಸುವುದರ ಸಲುವಾಗಿ ಸಚಿವಾಲಯದ ಜಾಗೃತಿಯ ಅಂಗವಾಗಿ ಸಮ್ಮೇಳನ ನಡೆಯಿತು.
ಸಾರ್ವಜನಿಕರಲ್ಲಿ  ಅರಿವು ಮೂಡಿಸುವುದರ ಅಗತ್ಯದ ಕುರಿತು ಕ್ರೈಂ ಇಲಾಖೆಯ ಮುಖ್ಯಸ್ಥ ಕ್ಯಾಪ್ಟನ್ ಇಂಜಿನಿಯರ್ ಸಯೀದ್ ಅಲ್ ಖಹ್ತಾನಿ ಬೆಳಕು ಚೆಲ್ಲಿದರು.

error: Content is protected !! Not allowed copy content from janadhvani.com