ರಿಯಾದ್ : ಸೌದಿ ಅರೇಬಿಯಾದ 16 ವಲಯಗಳಲ್ಲಿ ವೃತ್ತಿಪರ ಪರವಾನಗಿಗಳನ್ನು ಕಡ್ಡಾಯಗೊಳಿಸುವ ನಿರ್ಧಾರವು 10,000 ಕ್ಕೂ ಹೆಚ್ಚು ವಲಸಿಗರ ಮೇಲೆ ಪರಿಣಾಮ ಬೀರಲಿದೆ. ಇದು ಉದ್ಯೋಗ ಕೌಶಲ್ಯ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಕಾರ್ಮಿಕರ ಉದ್ಯೋಗಗಳು ಬಿಕ್ಕಟ್ಟಿಗೆ ಸಿಲುಕಲಿದೆ.
ಹೊಸ ಕಾನೂನು ಮುಂದಿನ ವರ್ಷದಿಂದ ಜಾರಿಗೆ ಬರಲಿದೆ. ಹೊಸ ನಿಯಮವನ್ನು ಸೌದಿ ಮುನ್ಸಿಪಲ್ ಮತ್ತು ಗ್ರಾಮೀಣ ವ್ಯವಹಾರಗಳ ಸಚಿವಾಲಯ ಜಾರಿಗೆ ತರಲಿದೆ. ಹೊಸ ಆದೇಶವು 16 ವೃತ್ತಿಗಳಲ್ಲಿ 72 ಹುದ್ದೆಗಳಿಗೆ ಅನ್ವಯಿಸುತ್ತದೆ.
ಎಸಿ ಟೆಕ್ನೀಷನ್, ಎಲೆಕ್ಟ್ರಾನಿಕ್ಸ್ ಟೆಕ್ನೀಷನ್, ಸಾಟ್ಲೈಟ್ ಟೆಕ್ನೀಷನ್, ಪ್ಲಂಬರ್, ಬಡಗಿ, ಎಲೆಕ್ಟ್ರಿಷಿಯನ್, ಕಮ್ಮಾರ, ವರ್ಣಚಿತ್ರಕಾರ, ಬಿಲ್ಡರ್, ಪೀಠೋಪಕರಣ ಕ್ಲೀನರ್, ವಾಟರ್ ಟ್ಯಾಂಕ್ ಕ್ಲೀನರ್, ಕ್ಷೌರಿಕ, ಬಡಗಿ,ಪೆಸ್ಟ್ ಕಂಟ್ರೋಲರ್, ಮೆಕ್ಯಾನಿಕ್ ಮತ್ತು ಮಹಿಳೆಯರ ಬ್ಯೂಟೀಷನ್ ಮುಂತಾದ ಕೆಲಸ ಮಾಡುವವರಿಗೆ ಶರತ್ತು ಅನ್ವಯ.
ಈ ಕೆಲಸ ಮಾಡುವವರು ಮತ್ತು ಇಖಾಮಾದಲ್ಲಿ ಈ ಉದ್ಯೋಗವನ್ನು ನೋಂದಾಯಿಸಿಕೊಂಡವರಿಗೂ ವೃತ್ತಿಪರ ಪ್ರಮಾಣಪತ್ರ ಕಡ್ಡಾಯವಾಗಿದೆ.ಇದು ದೇಶದಲ್ಲಿ ಉದ್ಯೋಗದ ಗುಣಮಟ್ಟವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಪರಿಣಾಮವಾಗಿ, ಇಕಾಮ ಹೊಂದಿರುವವರು ಪರವಾನಗಿ ಇಲ್ಲದೆ ಕೆಲಸ ಮಾಡಲು ಸಾಧ್ಯವಿಲ್ಲ. ಸಂಸ್ಥೆಯ ಪರವಾನಗಿಯನ್ನು ನವೀಕರಿಸುವ ಸಮಯದಲ್ಲಿ ಕಾರ್ಮಿಕರ ವೃತ್ತಿಪರ ಪರವಾನಗಿಯನ್ನು ಒದಗಿಸಬೇಕು.
ಪೌರಾಡಳಿತ ಸಚಿವಾಲಯದಿಂದ ಪರವಾನಗಿ ನೀಡಲಾಗುತ್ತದೆ. ಈ ಕೆಲಸವನ್ನೇ ಮಾಡುತ್ತಿರುವವರು ಶೀಘ್ರದಲ್ಲೇ ಪರವಾನಗಿ ಪಡೆಯುತ್ತಾರೆ. ಕಾರ್ಮಿಕರ ಕೆಲಸದ ಅನುಭವ ಮತ್ತು ಶೈಕ್ಷಣಿಕ ಅರ್ಹತೆಗಳನ್ನು ಆಧರಿಸಿ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ.
ಖಾಸಗಿ ವಲಯವು ಇದರಿಂದ ತೊಂದರೆಯಾಗದಂತೆ ಆರಂಭದಲ್ಲಿ ಸಂಸ್ಥೆಯಿಂದ ಕನಿಷ್ಠ ಒಂದು ವ್ಯಕ್ತಿ ವೃತ್ತಿಪರ ಪ್ರಮಾಣಪತ್ರವನ್ನು ಪಡೆಯಬೇಕು. ಆಗ ಮಾತ್ರ ಕಂಪನಿಯ ಪರವಾನಗಿಯನ್ನು ನವೀಕರಿಸಲಾಗುತ್ತದೆ. ಭಾರತೀಯರು ಸೇರಿದಂತೆ ಅನೇಕ ಜನರು ಇಕಾಮಗಳೊಂದಿಗೆ ವಿವಿಧ ಉದ್ಯೋಗಗಳನ್ನು ಮಾಡುತ್ತಿದ್ದು, ಇಖಾಮ ನವೀಕರಣದ ಸಮಯದಲ್ಲಿ ಅವರೆಲ್ಲರೂ ವೃತ್ತಿಪರ ಪ್ರಮಾಣಪತ್ರವನ್ನು ಹಾಜರುಪಡಿಸಬೇಕು. ಮುಂದಿನ ವರ್ಷದ ಆರಂಭದಲ್ಲಿ ಜಾರಿಗೆ ಬರಲಿರುವ ಆದೇಶದ ಮುಂಚೆಯೇ ಸಚಿವಾಲಯವು ಪ್ರಕ್ರಿಯೆಗಳನ್ನು ಆರಂಭಿಸಿದೆ. ಈ ವಲಯಗಳಲ್ಲಿ ಅರ್ಹ ಸೌದಿ ಪ್ರಜೆಗಳಿಗೆ ಉದ್ಯೋಗವನ್ನು ಒದಗಿಸುವುದು ಕೂಡ ಹೊಸ ಕ್ರಮದ ಭಾಗವಾಗಿದೆ.