ಸೌದಿ ಅರೇಬಿಯಾ: ದಮ್ಮಾಮ್ ನಲ್ಲಿ ಸುಮಾರು 20 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದ ಕೂರ್ನಡ್ಕ ನಿವಾಸಿ ಇಬ್ರಾಹಿಮ್ ಹಸೈನಾರ್ ಎಂಬುವವರು ತಾ: 19ಜುಲೈ ರಂದು ಹ್ರದಯಾಘಾತದಿಂದ ಮರಣಹೊಂದಿರುತ್ತಾರೆ. ಮ್ರತರು ತಾಯಿ, ಹೆಂಡತಿ ಹಾಗು ಒಬ್ಬ ಮಗ ಮತ್ತು ಮಗಳನ್ನು ಅಗಲಿದ್ದಾರೆ.

ಮರಣೋತ್ತರ ಕ್ರೀಯೆಗೆ ಬೇಕಾದ ವ್ಯವಸ್ಥೆ ಕಲ್ಪಿಸಲು ಕೂಡಲೆ ಸ್ಪಂದಿಸಿ ಕಾರ್ಯ ಪ್ರವರ್ತರಾದ ಕೆ.ಸಿ.ಎಫ್ ದಮ್ಮಾಮ್ ಝೋನ್ ಸಾಂತ್ವನ ತಂಡವು ಭಾರತೀಯ ರಾಯಬಾರಿ ಕಛೇರಿ ಹಾಗು ಊರಿನಿಂದ ಬೇಕಾದ ದಾಖಲೆ ಪತ್ರವನ್ನು ತ್ವರಿತ ವೇಗದಲ್ಲಿ ಸರಿಪಡಿಸಿ ಒಂದೆರಡು ದಿವಸಗಳೊಳಗೆ ಅಂದರೆ ತಾ: ಜುಲೈ21 ರಂದು ಲುಹರ್ ನಮಾಜಿನ ಬಳಿಕ ದಮ್ಮಾಮ್ ನಲ್ಲಿ ದಫನ ಕಾರ್ಯ ನಿರ್ವಹಿಸಲಾಯಿತು.
ಈ ಒಂದು ಉತ್ತಮ ಕಾರ್ಯದಲ್ಲಿ ಕೆ.ಸಿ.ಎಫ್ ನೊಂದಿಗೆ ಸಹಕರಿಸಿದ ಮ್ರತರ ಕುಟುಂಬದವರಾದ ಅಪ್ಸರ್ ಹಾಗು ಝೋನ್ ಸಾಂತ್ವನ ಚೇರ್ಮಾನ್ ಬಾಷಾ ಗಂಗಾವಲಿ, ರಾಷ್ಟ್ರೀಯ ಸಾಂತ್ವನ ಚೇರ್ಮಾನ್ ಮಹಮ್ಮದ್ ಮಲಬೆಟ್ಟು ಇವರುಗಳಿಗೆ ಅಭಿನಂದನೆ ಸಲ್ಲಿಸುತ್ತಿದ್ದೇವೆ. ಮ್ರತರ ಕುಟುಂಬದವರು, ಗೆಳಯರು ಹಾಗು ಕೆ.ಸಿ.ಎಫ್ ದಮ್ಮಾಮ್ ಝೋನ್ ಅಧ್ಯಕ್ಷರಾದ ರಶೀದ್ ಸಖಾಫಿ , ಅಲ್ ಆಮ್ರಾ ಯುನಿಟ್ ಅಧ್ಯಕ್ಷ ರಹೀಮ್ ಕಅಲ್ಲತಪಳ್ಳಿ ಹಾಗು ಇನ್ನಿತರ ನಾಯಕರು ಅಂತ್ಯಕ್ರೀಯೆಯಲ್ಲಿ ಭಾಗಿಯಾಗಿ ಮ್ರತರಿಗಾಗಿ ದುಆ ನೆರೆವೇರಿಸಲಾಯಿತು.
ಸಾಂತ್ವನ ವಿಭಾಗ
KCF ದಮ್ಮಾಮ್ ಝೋನ್
















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್