janadhvani

Kannada Online News Paper

ರೋಗಿಗಳಿಗೆ ಆಹಾರ ವಿತರಣೆ- ಸಹಾಯ್ ವಿಟ್ಲ ತಂಡದಿಂದ ಸರಳ ಬಕ್ರೀದ್ ಆಚರಣೆ

ವಿಟ್ಲ :SჄS.SSF.KCF ಕಾರ್ಯಕರ್ತರನ್ನೊಳಗೊಂಡ ಕರ್ನಾಟಕ ಮುಸ್ಲಿಂ ಜಮಾಅತ್ ಸಹಾಯ್ ವಿಟ್ಲ ಸರ್ಕಲ್ ತುರ್ತು ಸೇವಾ ತಂಡವು,ಈ ಬಾರಿಯ ಬಕ್ರೀದ್ ಹಬ್ಬವನ್ನು ಕೋರೋಣ ವಾರಿಯರ್ಸ್ ಗಳು ಮತ್ತು ರೋಗಿಗಳಿಗೆ ಆಹಾರ ಕಿಟ್ ವಿತರಿಸಿ ಸರಳವಾಗಿ ಆಚರಿಸಿದೆ.

ವಿಟ್ಲ ಪಟ್ಟಣ ಪಂಚಾಯತ್, ವಿಟ್ಲ ಪೊಲೀಸ್ ಠಾಣೆ, ವಿಟ್ಲ ಪ್ರಾಥಮಿಕ ಆರೋಗ್ಯ ಕೇಂದ್ರ, ವಿಟ್ಲ ಮೆಸ್ಕಾಂ ಸಿಬಂದಿಗಳು ಹಾಗೂ ಕನ್ಯಾನ ಪ್ರಾಥಮಿಕ ಆರೋಗ್ಯ ಕೇಂದ್ರ, ಕನ್ಯಾನ ಪೊಲೀಸ್ ಹೊರ ಠಾಣೆ, ಅಳಿಕೆ ಪ್ರಾಥಮಿಕ ಆರೋಗ್ಯ ಕೇಂದ್ರ, ಉಕ್ಕುಡ ಅರಣ್ಯ ಇಲಾಖೆ ಸಿಬ್ಬಂದಿಗಳು ಸೇರಿದಂತೆ ಆಶಾ ಕಾರ್ಯಕರ್ತೆಯರ ಸಹಿತ, ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ಇನ್ನೂರಕ್ಕೂ ಮಿಕ್ಕ (ಹಬ್ಬದೂಟ) ಆಹಾರ ಕಿಟ್ಟ್ ವಿತರಣೆ ಮಾಡಿದೆ.

ಸಹಾಯ್ ವಿಟ್ಲ ಸರ್ಕಲ್ ತುರ್ತು ಸೇವಾ ತಂಡವು, ವಿಟ್ಲ ಪಟ್ಟಣ ಹಾಗೂ ಆಸುಪಾಸಿನಲ್ಲಿರುವ ಗ್ರಾಮಗಳಲ್ಲಿ ಪ್ರವಾಹದೊಪಾದಿಯಲ್ಲಿ ಹಬ್ಬುತ್ತಿದ್ದ ಕೋರೊನಾ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಯಾವುದೇ ಜಾತಿ ಮತ ವರ್ಣ ಬೇದ ನೋಡದೆ ಕೊರೋನಾ ನಿಯಂತ್ರಣ ಕಾರ್ಯದಲ್ಲಿ ಹಗಲಿರುಳು ಶ್ರಮಿಸುತ್ತಿದೆ.

ವೈದ್ಯರು ಶುಶ್ರೂಷಕರು ಆಶಾ ಕಾರ್ಯಕರ್ತೆಯರು ಪೊಲೀಸ್ ಇಲಾಖೆ ಮತ್ತಿತರ ಸಿಬ್ಬಂದಿಗಳ ಮನೊಬಲ ಹೆಚ್ಚಿಸುವುದಕ್ಕಾಗಿ,
ವಿಟ್ಲ ಪಟ್ಟಣ ಹಾಗೂ ಆಸುಪಾಸಿನಲ್ಲಿರುವ ಹತ್ತಕ್ಕಿಂತಲೂ ಮಿಕ್ಕ ಗ್ರಾಮಗಳಿಗೆ ವಾಹನಗಳಲ್ಲಿ ತೆರಳಿ ಸರ್ಕಾರಿ ಕಚೇರಿ ಜನಸೇವಾ ಕೇಂದ್ರ ಅಕ್ಕಪಕ್ಕಗಳಲ್ಲಿರುವ ಅಂಗಡಿಗಳು ಹಾಗೂ ಕೋರೋಣ ಸೋಂಕಿತರ ಮನೆ ಸಹಿತ ಎಲ್ಲಾ ಕಡೆಗಳಲ್ಲಿಯೂ ಸ್ಯಾನಿಟೈಝರ್ ಸಿಂಪಡಿಸಿತು.

ಧ್ವನಿವರ್ಧಕ ಮೂಲಕ ಕೋವಿಡ್ ಬಗ್ಗೆ ಜನ ಜಾಗೃತಿ ಅಭಿಯಾನ ನಡೆಸುತ್ತಾ, ಕರಪತ್ರ ವಿತರಿಸಿ, ಹೋಂ ಕ್ವಾರಂಟೈನ್ ನಲ್ಲಿರುವ ಕೊರೋನಾ ಪಾಸಿಟಿವ್ ಸೊಂಕಿತಗೊಂಡು ಆತಂಕಕ್ಕೆ ಒಳಗಾಗಿರುವವರಿಗೆ ಸಾಂತ್ವಾನ ಹೇಳುತ್ತಾ,
ಕೊರೋನಾ ಪಾಸಿಟಿವ್ ಕುಟುಂಬಕ್ಕೆ ಹಾಗೂ ಕಡು ಬಡತನದಲ್ಲಿರು ಅನೇಕರಿಗೆ ಅತ್ಯಗತ್ಯ ದಿನಸಿ ಸಾಮಗ್ರಿಗಳ ಕಿಟ್ಟನ್ನು ನೀಡಿ ಅವರ ನೋವಿಗೆ ಸ್ಪಂದಿಸುತ್ತಿದೆ.

ಮೆಡಿಸಿನ್ ಕಿಟ್ ಪಿಪಿ ಕಿಟ್ ಹಾಗೂ ಆಕ್ಸಿಜನ್ ಸಿಲಿಂಡರ್ ಕಿಟ್. ರಕ್ತದಾನ ಹಾಗೂ ಕೋವಿಡ್ ಮರಣದ ಅಂತ್ಯಕ್ರಿಯೆ ಸ್ವಚ್ಛತಾ ಅಭಿಯಾನ ಮುಂತಾದ ವಿವಿಧ ಜನಸ್ನೇಹಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡ, ಜನಪರ ಕಾಳಜಿ ಹೊಂದಿದ ತುರ್ತು ಸೇವಾ ಚಟುವಟಿಕೆಯಲ್ಲಿ. ಸಕ್ರಿಯರಾಗುವ ಮೂಲಕ ಕೊರೋನಾ ನಿಯಂತ್ರಣ ಕಾರ್ಯದಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ.

ವರದಿ: D.A ಮುಹಮ್ಮದ್ ಅಶ್ರಫ್ ಕೊಡಂಗಾಯಿ

error: Content is protected !! Not allowed copy content from janadhvani.com