ಆತೂರು : ಕೋವಿಡ್ ನಿಮಿತ್ತ ರಾಜ್ಯಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು, ಇದೀಗ ಮಧ್ಯಾಹ್ನ 2 ಗಂಟೆ ವರೆಗೆ ಎಲ್ಲಾ ಅಂಗಡಿಗಳು ತರೆಯಲು ಹಾಗೂ ಅಗತ್ಯಕ್ಕಾಗಿ ಹೊರಗಡೆ ತೆರಳಲು ಅನುಮತಿ ದೊರಕಿದೆ.
ಹೀಗಿದ್ದೂ ಕೂಡಾ ಆತೂರಿನಲ್ಲಿ 10 ಗಂಟೆಯಾಗುವಷ್ಟರಲ್ಲೇ ಕಡಬ ಪೊಲೀಸರು ಬಿಗಿಯಾದ ತಪಾಸಣೆಯನ್ನು ನಡೆಸಿ ಯುವಕನೋರ್ವನ ಸಾವಿಗೆ ನೇರ ಕಾರಣವಾಗಿದ್ದಾರೆ.
ದೀರ್ಘ ಸಮಯದ ಲಾಕ್ ಡೌನ್ ನಿಮಿತ್ತ ಉದ್ಯೋಗ ಹಾಗೂ ಅಗತ್ಯಗಳನ್ನು ಕಳೆದುಕೊಂಡಿದ್ದ ಜನರು ಈಗಿನ ಸೀಮಿತ ಅನ್ ಲಾಕ್ ಅವಧಿಗಳಲ್ಲಿ ವ್ಯಾಪಾರ ಅಥವಾ ಅಗತ್ಯಗಳಿಗಾಗಿ ಹೊರಗಿಳಿಯುವ ಸಂದರ್ಭದಲ್ಲಿ ತಪಾಸಣೆಯ ಹೆಸರಲ್ಲಿ ಕಿರುಕುಳ ನೀಡಿ ಅಮಾಯಕ ಯುವಕನೋರ್ವನ ಸಾವಿಗೆ ಕಾರಣವಾದ ಪೊಲೀಸರ ವಿರುದ್ದ ಎಸ್.ವೈ.ಎಸ್ ಮತ್ತು ಎಸ್ಸೆಸ್ಸೆಫ್ ಆತೂರು ಯುನಿಟ್ ತೀವ್ರವಾಗಿ ಖಂಡಿಸುತ್ತದೆ.
ಆತೂರಿನಲ್ಲಿ ಬಿಗಿಯಾದ ತಪಾಸಣೆಯನ್ನು ಮಾಡುತ್ತಿರುವ ಪೋಲೀಸರಿಗಾಗಿ ಸಾರ್ವಜನಿಕರು ನಿರ್ಮಿಸಿಕೊಟ್ಟ ತಾತ್ಕಾಲಿಕ ಶೆಡ್ ಇದೆಯಲ್ಲದೆ ಸರಕಾರದ ಅಥವಾ ಪೊಲೀಸ್ ಇಲಾಖೆಯ ಚೆಕ್ ಪೋಸ್ಟ್ ಇಲ್ಲ.
ಅನ್ ಲಾಕ್ ಅವಧಿ ಸೀಮಿತವಿರುವ ಸಂದರ್ಭದಲ್ಲಿ ಜನರು ತಮ್ಮ ತಮ್ಮ ಅಗತ್ಯಗಳಿಗಾಗಿ ಓಡಾಡುವುದು ಸಹಜ ಹಾಗೂ ಅನಿವಾರ್ಯ. ಅದೇ ಸಮಯದಲ್ಲೇ ಹೆದ್ದಾರಿಯಲ್ಲಿ ಬ್ಯಾರಿಕೇಡ್ ಅಡ್ಡಗಟ್ಟಿ ತಪಾಸಣೆ ನಡೆಸಿ ಜನರನ್ನು ಗೊಂದಲಗೊಳಿಸುವ ನಡೆ ಅಮಾನವೀಯವಾಗಿದೆ. ಇದರಿಂದಲೇ ಅಮಾಯಕ ಯುವಕ ಪ್ರಾಣ ಕಳಕೊಳ್ಳಬೇಕಾಗಿದೆ.
ಕಡಬ ಪೊಲೀಸರ ಈ ನಡೆಯ ವಿರುದ್ದ ಈ ಹಿಂದೆಯೂ ಸಾರ್ವಜನಿಕರು ದೂರಿಕೊಂಡಿದ್ದು, ಮೇಲಾಧಿಕಾರಿಗಳ ನಿಷ್ಕ್ರೀಯತೆಯೇ ಇಂತಹ ಘಟನೆ ನಡೆಯಲು ಕಾರಣವಾಗಿದೆ.
ಹಾಗಾಗಿ ಈ ಘಟನೆಯಲ್ಲಿ ತಪ್ಪಿತಸ್ಥ ಪೊಲೀಸರ ನಡೆಯನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕೆಂದೂ ಅಮಾಯಕ ಹಾರಿಸ್ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಎಸ್. ವೈ.ಎಸ್ ಮತ್ತು ಎಸ್ಸೆಸ್ಸೆಫ್ ಆತೂರು ಯುನಿಟ್ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ