janadhvani

Kannada Online News Paper

ಸೌದಿ ಅರೇಬಿಯಾದಲ್ಲಿ ಕೋವಿಡ್ ನಿಯಮಾವಳಿಯನ್ನು ಉಲ್ಲಂಘಿಸಿದರೆ ಬಾರಿ ದಂಡ: ಮಂತ್ರಾಲಯದಿಂದ ಎಚ್ಚರಿಕೆ

ಸೌದಿ ಅರೇಬಿಯಾದಲ್ಲಿ ಕೋವಿಡ್ ಹರಡುವಿಕೆಯನ್ನು ತಡೆಯಲು ಈಗಾಗಲೇ ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದನ್ನು ಉಲ್ಲಂಘನೆ ಮಾಡಿದರೆ ದೊಡ್ಡದಾದ ಮೊತ್ತವನ್ನು ದಂಡವಾಗಿ ಕಟ್ಟಬೇಕಾಗುತ್ತದೆ ಎಂದು ಮಂತ್ರಾಲಯದಿಂದ ಎಚ್ಚರಿಕೆಯನ್ನು ನೀಡಲಾಗಿದೆ.

ಇದರಂತೆ ಎಲ್ಲರೂ ಒಂದು ಕಡೆ ಸೇರಿವುದು ನಿಷಿದ್ಧವಾಗಿದೆ. ಹಾಗೇನಾದರೂ ಸೇರಿದರೆ ಕೆಳಗಿನಂತೆ ದಂಡ ಕಟ್ಟಬೇಕಾಗಬಹುದು.

ಮನೆ ಅಥವ ವಿಶ್ರಾಂತಿ ಗೃಹಗಳಲ್ಲಿ ನಿರ್ಧಿಷ್ಟಪಡಿಸಿದ್ದಕ್ಕಿಂತ ಅಧಿಕ ಜನರು ಫ್ಯಾಮಿಲಿಯಾಗಿ ಸೇರಿದರೆ ಮನೆಯ ಯಜಮಾನ ಅಥವ ಸೇರುವಿಕೆಯನ್ನು ವ್ಯವಸ್ಥೆ ಮಾಡಿದವರಿಗೆ 10,000 ರಿಯಾಲಿನಷ್ಟು ದಂಡ ವಿಧಿಸಲಾಗುವುದು. ಫ್ಯಾಮಿಲಿ ಅಲ್ಲದಿದ್ದರೆ ಇದು 15,000 ರಿಯಾಲ್ ವರೆಗೆ ವಿಧಿಸಲಾಗುವುದು. ಸೇರಿದವರೆಲ್ಲರೂ ಒಂದೇ ಮನೆಯಲ್ಲಿ ವಾಸಿಸುವವರಾದರೆ ಇದು ಅನ್ವಯವಾಗುವುದಿಲ್ಲ.

ಸಭೆ ಸಮಾರಂಭಗಳು, ಅಂತ್ಯಕ್ರಿಯೆ, ಅಥವ ಇನ್ನಿತರ ಸಾಮಾಜಿಕ ಕಾರ್ಯಕ್ರಮವನ್ನು ನಡೆಸಿದರೆ ದಂಡದ ಮೊತ್ತ 40,000 ರಿಯಾಲಿನಷ್ಟು ಆಗಿರುತ್ತದೆ.

ಹೊರಗಡೆ ಹೋಗುವಾಗ ಮಾಸ್ಕ್ ಕಡ್ಡಾಯ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಆರೋಗ್ಯ ಇಲಾಖೆಯಿಂದ ಸೂಚಿಸಲಾಗಿದೆ

error: Content is protected !! Not allowed copy content from janadhvani.com