janadhvani

Kannada Online News Paper

ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ವತಿಯಿಂದ ಈದ್ – ಕಿಟ್ ವಿತರಣೆ

ಸುರತ್ಕಲ್ : ಮೇ 11, ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ಅಧ್ಯಕ್ಷರಾದ ಹನೀಫ್ ಅಹ್ಸನಿ ಕಾಮಿಲ್ ಸಖಾಫಿ ಶೇಡಿಗುರಿ ಇವರ ನೇತೃತ್ವದಲ್ಲಿ ಡಿವಿಷನ್ ವ್ಯಾಪ್ತಿಯ 5 ಸೆಕ್ಟರ್ ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ಹಾಗೂ ಅರ್ಹ ಬಡ ಕುಟುಂಬಗಳಿಗೆ ಸೇರಿ 147 ಕುಟುಂಬಗಳಿಗೆ ಈದ್ ಕಿಟ್ ವಿತರಣೆ ಕಾರ್ಯಕ್ರಮ ಸುರತ್ಕಲ್ ನಲ್ಲಿ ಮಂಗಳವಾರ ನಡೆಯಿತು.

ಈ ಸಂದರ್ಭದಲ್ಲಿ ಎಸ್ಸೆಸ್ಸೆಫ್ ದ.ಕ ಜಿಲ್ಲಾ ವೆಸ್ಟ್ ಪ್ರಧಾನ ಕಾರ್ಯದರ್ಶಿ ಹೈದರ್ ಅಲಿ ಕಾಟಿಪಳ್ಳ , ಎಸ್ಸೆಸ್ಸೆಫ್ ದ.ಕ ಜಿಲ್ಲಾ ವೆಸ್ಟ್ ದಹ್ವಾ ಕಾರ್ಯದರ್ಶಿ ಆರೀಫ್ ಝುಹ್ರಿ ಮುಕ್ಕ , ಡಿವಿಷನ್ ಫೈನಾನ್ಸ್ ಸೆಕ್ರೆಟರಿ ತೌಸೀಫ್ ಬದ್ರಿಯಾ ನಗರ, ಡಿವಿಷನ್ ವಿಸ್ಡಂ ಕಾರ್ಯದರ್ಶಿ ಸಫ್ವಾನ್ ಜಂಕ್ಷನ್, ಕಾರ್ಯಕಾರಿ ಸಮಿತಿ ಸದಸ್ಯರಾದ ಅಫ್ರಿದ್ ಜಂಕ್ಷನ್ , ನಝರುದ್ದೀನ್ 9ನೇ ಬ್ಲಾಕ್ ಉಪಸ್ಥಿತರಿದ್ದರು.

ಡಿವಿಷನ್ ಪ್ರ.ಕಾರ್ಯದರ್ಶಿ ಮುಹಮ್ಮದ್ ತನ್ಸೀರ್ 4ನೇ ಬ್ಲಾಕ್ ಕಾಟಿಪಳ್ಳ ಸ್ವಾಗತಿಸಿ, ವಂದಿಸಿದರು.

error: Content is protected !! Not allowed copy content from janadhvani.com