ರಿಯಾದ್: ಸೌದಿ ಕಾರ್ಮಿಕರ ಬಹುನಿರೀಕ್ಷಿತ ಪರಿಷ್ಕೃತ ಉದ್ಯೋಗ ಕಾನೂನುಗಳು ಮಾರ್ಚ್ 14 ರ ಭಾನುವಾರದಿಂದ ಜಾರಿಗೆ ಬರಲಿವೆ. ನವೆಂಬರ್ 4 ರಂದು ಸೌದಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಈ ಘೋಷಣೆ ಮಾಡಿದೆ.
ಕಾರ್ಮಿಕ ವಿವಾದಗಳನ್ನು ತೊಡೆದುಹಾಕಲು ಹಾಗೂ ಉದ್ಯೋಗದಾತ ಮತ್ತು ಉದ್ಯೋಗಿಗಳ ನಡುವಿನ ಒಪ್ಪಂದದ ಸಂಬಂಧವನ್ನು ಸುಧಾರಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ.
ಈ ಯೋಜನೆಯು ಖಾಸಗಿ ವಲಯದಲ್ಲಿ ಕೆಲಸ ಮಾಡುವ ಎಲ್ಲಾ ವಿದೇಶಿ ಕಾರ್ಮಿಕರಿಗೂ ಅನ್ವಯ. ಆದರೆ ಈ ಬದಲಾವಣೆ ಗೃಹ ಕಾರ್ಮಿಕರಿಗೆ ಅನ್ವಯಿಸುವುದಿಲ್ಲ. ಅಬ್ಷೀರ್ ಮತ್ತು ಖಿವಾ ಮುಂತಾದ ಪೋರ್ಟಲ್ಗಳ ಮೂಲಕ ಈ ಸೇವೆ ಲಭ್ಯವಿದೆ.
ಪರಿಷ್ಕೃತ ಕಾನೂನಿನ ಪ್ರಯೋಜನ
- ಕಾರ್ಮಿಕ ಮತ್ತು ಉದ್ಯೋಗದಾತ ನಡುವೆ ಸಹಿ ಮಾಡಿದ ಒಪ್ಪಂದದ ಆಧಾರದ ಮೇಲೆ ಕಾರ್ಮಿಕ ವಿವಾದಗಳಿಗೆ ಸಂಬಂಧಿಸಿದ ತೀರ್ಪು ನೀಡಲಾಗುತ್ತದೆ.
- ಒಪ್ಪಂದದ ಅವಧಿ ಮುಗಿದ ನಂತರ ಉದ್ಯೋಗಿಯು ಉದ್ಯೋಗದಾತರ ಒಪ್ಪಿಗೆಯಿಲ್ಲದೆ ಉದ್ಯೋಗಗಳನ್ನು ಬದಲಾಯಿಸಲು ಮತ್ತು ಪ್ರಾಯೋಜಕತ್ವವನ್ನು ಬದಲಾಯಿಸಲು ಅನುಮತಿಸಲಾಗುವುದು.
- ಒಪ್ಪಂದದ ಅವಧಿಯೊಳಗೆ ಕೆಲಸಗಾರನು ಉದ್ಯೋಗವನ್ನು ಬದಲಾಯಿಸಲು ಬಯಸಿದರೆ, ಉದ್ಯೋಗದಾತರಿಗೆ 90 ದಿನಗಳ ಮುಂಚಿತವಾಗಿ ನೋಟಿಸ್ ನೀಡಬೇಕು. ಆದರೆ ಈ ರೀತಿಯಾಗಿ ಸೇವೆಯನ್ನು ಕೊನೆಗೊಳಿಸಿದರೆ, ಉದ್ಯೋಗದಾತರಿಗೆ ಪರಿಹಾರವನ್ನು ಪಾವತಿಸಲು ಕೆಲಸಗಾರನು ಜವಾಬ್ದಾರನಾಗಿರುತ್ತಾನೆ.
- ಒಪ್ಪಂದದ ಅವಧಿ ಮುಗಿಯುವ ಮೊದಲು ನೌಕರನನ್ನು ವಜಾ ಮಾಡಿದರೆ ಉದ್ಯೋಗದಾತನು ಕೆಲಸಗಾರನಿಗೆ ಪರಿಹಾರವನ್ನು ಪಾವತಿಸಬೇಕಾಗುತ್ತದೆ.
- ಉದ್ಯೋಗದಾತ ಮತ್ತು ಉದ್ಯೋಗಿ ನಡುವಿನ ಒಪ್ಪಂದದ ಸೇವೆ ಕೊನೆಗೊಂಡಲ್ಲಿ, ಕೆಲಸಗಾರನು ತನ್ನದೇ ಆದ ನಿರ್ಗಮನ ಮತ್ತು ಮರು-ಪ್ರವೇಶ ವೀಸಾಗಳನ್ನು ಪಡೆದುಕೊಂಡು ಮನೆಗೆ ಮರಳಬಹುದು. ಇದಕ್ಕೆ ಪ್ರಾಯೋಜಕರ ಅನುಮತಿ ಅಗತ್ಯವಿಲ್ಲ.
ಆದಾಗ್ಯೂ, ಕೆಲಸಗಾರನು ದೇಶವನ್ನು ತೊರೆದಾಗ, ಪ್ರಾಯೋಜಕರಿಗೆ ವಿದ್ಯುನ್ಮಾನವಾಗಿ ಸಂದೇಶ ಲಭಿಸಲಿದೆ.
















ಇನ್ನಷ್ಟು ಸುದ್ದಿಗಳು
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ