janadhvani

Kannada Online News Paper

ಇಂದು ದಾರುಲ್ ಮುಸ್ತಫಾ ವಾರ್ಷಿಕ ಸಮ್ಮೇಳನ: ಯಶಸ್ವಿಗೆ ಎಸ್ಸೆಸ್ಸೆಫ್ ಕಲ್ಲಡ್ಕ ಸೆಕ್ಟರ್ ಕರೆ

ಕರ್ನಾಟಕ ಜಂಇಯತುಲ್ ಉಲಮಾ ರಾಜ್ಯ ಕಾರ್ಯದರ್ಶಿ ತೋಕೆ ಮುಹ್ಯಿದ್ದೀನ್ ಸಖಾಫಿಯವರ ಸಾರಥ್ಯದಲ್ಲಿ ನಡೆಯುತ್ತಿರುವ ದಾರುಲ್ ಮುಸ್ತಫಾ ಮೋರಲ್ ಅಕಾಡೆಮಿ ನೆಚ್ಚಬೆಟ್ಟು ಇದರ ಪ್ರಥಮ ಸನದುದಾನ ಸಮ್ಮೇಳನ ಇಂದು ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಇಂಡಿಯನ್‌ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಉಸ್ತಾದರು ಭಾಗವಹಿಸಲಿದ್ದಾರೆ.

ಈ ಸಮಾರಂಭದಲ್ಲಿ ಬಹುತೇಕ ಕಾರ್ಯಕರ್ತರು ಸೇರಿ ಇದನ್ನು ಯಶಸ್ವಿಗೊಳಿಸಬೇಕು ಎಂದು ಎಸ್ಸೆಸ್ಸೆಫ್ ಕಲ್ಲಡ್ಕ ಸೆಕ್ಟರ್ ಅಧ್ಯಕ್ಷರಾದ ಮುಹಮ್ಮದ್ ಮಜೀದ್ ಕದ್ಕರ್ ರವರು ತಿಳಿಸಿದ್ದಾರೆ.

error: Content is protected !! Not allowed copy content from janadhvani.com