janadhvani

Kannada Online News Paper

ಎಸ್ಸೆಸ್ಸೆಫ್ ಮದ್ದಡ್ಕ ಶಾಖೆ: ಝುಮ್ರ ತರಗತಿ ಹಾಗೂ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

ಬೆಳ್ತಂಗಡಿ:ಗುರುವಾಯನಕೆರೆ ಸೆಕ್ಟರ್ ವ್ಯಾಪ್ತಿಗೆ ಒಳಪಟ್ಟ ಎಸ್.ಎಸ್.ಎಫ್ ಮದ್ದಡ್ಕ ಶಾಖೆಯ ವತಿಯಿಂದ ಜ.30 ರಂದು ಮಗ್ರಿಬ್ ನಮಾಝಿನ ನಂತರ ಝುಮ್ರ ತರಗತಿಯು ಮದ್ದಡ್ಕ‌ ಮದರಸದಲ್ಲಿ, ಮದ್ದಡ್ಕ ಶಾಖೆಯ ಅಧ್ಯಕ್ಷರಾದ ಮುಹಮ್ಮದ್ ಮುಸ್ತಫಾ ಮದ್ದಡ್ಕರವರ‌‌ ಅಧ್ಯಕ್ಷತೆಯಲ್ಲಿ ನಡೆಯಿತು.

ತರಗತಿಯನ್ನು ಅನ್ಸಾರ್ ಸಖಾಫಿ,ಖತೀಬರು ಬದ್ರಿಯಾ ಜುಮಾ ಮಸೀದಿ ಬದ್ಯಾರ್ ನಡೆಸಿಕೊಟ್ಟರು.ನಂತರ ಗಣರಾಜ್ಯೋತ್ಸವದ ಅಂಗವಾಗಿ ಎಸ್ಸೆಸ್ಸೆಫ್ ಮದ್ದಡ್ಕ ಶಾಖೆಯ ವತಿಯಿಂದ ನಡೆದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ಹಾಗೂ ಪ್ರಮಾಣ ಪತ್ರವನ್ನು ವಿತರಿಸಲಾಯಿತು.

ವೇದಿಕೆಯಲ್ಲಿ ವೀಕ್ಷಕರಾಗಿ ಎಸ್.ಎಸ್.ಎಫ್ ಮದ್ದಡ್ಕ ಶಾಖೆಯ ಉಸ್ತುವಾರಿಯಾದ ಇಸ್ಹಾಕ್ ಮಾಸ್ಟರ್ ಸುನ್ನತ್ ಕೆರೆ ಹಾಗೂ ಗುರುವಾಯನಕೆರೆ ಸೆಕ್ಟರ್ ನಾಯಕರು ಆಸಿನರಾಗಿದ್ದು . ಸ್ವಾಗತವನ್ನು ಮದ್ದಡ್ಕ ಶಾಖಾ ಪ್ರಧಾನ ಕಾರ್ಯದರ್ಶಿ ಫಾರೂಕ್ ರವರು, ಧನ್ಯವಾದವನ್ನು ಶಾಖಾ ಕಾರ್ಯದರ್ಶಿ ಇರ್ಷಾದ್ ಮದ್ದಡ್ಕ ಹಾಗೂ ಕಾರ್ಯಕ್ರಮದ ನಿರೂಪಣೆಯನ್ನು ಕ್ಯಾಂಪಸ್ ಕಾರ್ಯದರ್ಶಿ ಮುಹಮ್ಮದ್ ಮುಝಮ್ಮಿಲ್ ರವರು ನಡೆಸಿಕೊಟ್ಟರು.

error: Content is protected !! Not allowed copy content from janadhvani.com