ವಿಟ್ಲ : ಎಲ್ಲರ ಬಗ್ಗೆಯೂ ಒಳ್ಳೆದನ್ನೆ ಚಿಂತಿಸುವುದು. ಸಂಘಟನೆಯ ಸಭೆ-ಸಮಾರಂಭ, ಕ್ಯಾಂಪುಗಳಿಗೆ ಹಾಜರಾಗದ ಪ್ರತಿನಿಧಿಗಳ ಬಗ್ಗೆ ಕೇಳಿ ತಿಳಿಯುವುದು. ಜವಾಬ್ದಾರಿ ಅರಿತು ಕಾರ್ಯಾಚರಿಸುವುದು ಮುಂತಾದುವುಗಳಿಂದ ಸಂಘಟನೆಯ ಸಂದೇಶವನ್ನು ಎಲ್ಲಾ ಕಡೆ ತಲುಪಿಸಲು ಸಾಧ್ಯವಾಗುತ್ತದೆ. ನಮ್ಮ ಕಾರಣದಿಂದ ಸಂಘಟನೆಯತ್ತ ಜನರು ಬರವಂತಾಗಬೇಕು. ಸಂಘಟನೆಯ ಬಲಪಡಿಸಿದರೇನೇ ಗುರಿಯೆಡೆಗೆ ತಲುಪಲು ಸಾಧ್ಯ ಎಂದು ಸುನ್ನೀ ಯುವಜನ ಸಂಘ ಇದರ ಕರ್ನಾಟಕ ರಾಜ್ಯ ಸಮಿತಿಯ ಸಾಂತ್ವನ ವಿಭಾಗದ ಅಧ್ಯಕ್ಷರಾದ ಮೌಲಾನಾ ಜಿಎಂ ಮುಹಮ್ಮದ್ ಕಾಮಿಲ್ ಸಖಾಫಿರವರು ಹೇಳಿದರು.
ಅವರು ವಿಟ್ಲ ಸೆಂಟರ್ ಸುನ್ನೀ ಯುವಜನ ಸಂಘವು ಗಣರಾಜ್ಯೋತ್ಸವ ದಿನದಂದು ವಿಟ್ಲ ಟೌನ್ ಮಸೀದಿಯಲ್ಲಿ ಆಯೋಜಿಸಿದ TOPST -21 ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಸುನ್ನೀ ಜಂಇಯ್ಯತುಲ್ ಉಲಮಾ ವಿಟ್ಲ ಝೋನ್ ಅಧ್ಯಕ್ಷರಾದ ಇಬ್ರಾಹಿಂ ಮದನಿ ಕಂಬಳಬೆಟ್ಟುರವರು ಸಭೆಯನ್ನು ಉದ್ಘಾಟಿಸಿದರು. ಎಸ್‌ವೈಎಸ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಉಪಾಧ್ಯಕ್ಷರಾದ ಕೆ ಎಂ ಅಬ್ದುಲ್ ಹಮೀದ್ ಸಖಾಫಿ ಕೊಡಂಗಾಯಿ ಮತ್ತು ಜಿಲ್ಲಾ ಮೀಡಿಯಾ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮಂಗಳಪದವು ರವರು ಮಾತನಾಡಿದರು. ಸೆಂಟರ್ ಪದಾಧಿಕಾರಿಗಳಾದ ಎಂಕೆಎಂ ಕಾಮಿಲ್ ಸಖಾಫಿ ಕೊಡಂಗಾಯಿ, ಅಬ್ದುಲ್ ರಹೀಂ ಸಖಾಫಿ ವಿಟ್ಲ, ಹಾರಿಸ್ ಒಕ್ಕೆತ್ತೂರು, ಟೌನ್ ಮಸ್ಜಿದ್ ಇಮಾಂ ಅಬ್ಬಾಸ್ ಮದನಿ, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರಾದ ಅಬ್ದುಲ್ ರಹ್ಮಾನ್ ನೆಲ್ಲಿಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು.
ಸೆಂಟರ್ ಅಧ್ಯಕ್ಷರಾದ ಕೆ ಎ ಅಬ್ದುಲ್ ಖಾದರ್ ಕಾಮಿಲ್ ಸಖಾಫಿ ಕಡಂಬು ಸಭಾಧ್ಯಕ್ಷತೆ ವಹಿಸಿದ್ದರು. ಪ್ರಾರಂಭದಲ್ಲಿ ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಹಾಜಿ ಸೆರ್ಕಳ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು. ಸಿಎಚ್ ಅಬ್ದುಲ್ ಖಾದರ್ ಕೊಡಂಗಾಯಿ, ಅಬ್ದುಲ್ ಸತ್ತಾರ್ ಶಾಂತಿನಗರ ಮತ್ತು ಹಾಜಿ ಅಬ್ದುಲ್ ರಝಾಕ್ ಸಖಾಫಿ ಕೆಲಿಂಜರವರು ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಸೆಂಟರ್ ವ್ಯಾಪ್ತಿಯ 18 ಬ್ರಾಂಚ್ ಸಮಿತಿಗಳಿಂದ ಪ್ರಮುಖ ನಾಯಕರು ಭಾಗವಹಿಸಿದ್ದರು. ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿ ಎಸ್‌ವೈಎಸ್ ವತಿಯಿಂದ ವಿಟ್ಲದಲ್ಲಿ ರಾಷ್ಟ್ರಧ್ವಜ ಪ್ರದರ್ಶನ ನಡೆಯಿತು.
ಇನ್ನಷ್ಟು ಸುದ್ದಿಗಳು
ಜಾಮಿಯಾ ಇಹ್ಯಾ’ಉಸ್ಸುನ್ನ ಮಲಪ್ಪುರಂ: ಕರ್ನಾಟಕ ಸ್ಟೂಡೆಂಟ್ಸ್ ಅಸೋಸಿಯೇಶನ್ ಕೆ.ಎಸ್.ಎ ಗೆ ನವ ಸಾರಥ್ಯ
ಆತೂರು ಸಅದ್ ಮುಸ್ಲಿಯಾರ್ ವಿಯೋಗ: ಸಮುದಾಯಕ್ಕೆ ತೀರಾ ನಷ್ಟ -ಎಸ್.ವೈ.ಎಸ್
ಕಾಜೂರಿಗೆ ಇಂದು ಎಪಿ ಉಸ್ತಾದ್
ಕೆಸಿಎಫ್ ನ್ಯಾಷನಲ್ ಪ್ರತಿಭೋತ್ಸವ-2021- ಸತತ ಮೂರನೇ ಬಾರಿಯೂ ಶಾರ್ಜಾ ಝೋನ್ ಚಾಂಪಿಯನ್
ಮುಡಿಪು ಎಡ್ಯುಪಾರ್ಕ್ನಲ್ಲಿ ಅರಳಿದ ಪ್ರತಿಭೆ
ಮಂಗಳೂರು ಝೋನ್ ಸುನ್ನೀ ಜಂಇಯ್ಯತುಲ್ ಉಲಮಾ ನೂತನ ಸಮಿತಿ ಅಸ್ತಿತ್ವಕ್ಕೆ