SSF ಅಡ್ಡೂರು ಯೂನಿಟ್ ಇದರ ವತಿಯಿಂದ 72ನೇ ಗಣರಾಜ್ಯೋತ್ಸವ ಕಾರ್ಯಕ್ರಮವು ಬೆಳಿಗ್ಗೆ 8:30ಕ್ಕೆ ಸರಿಯಾಗಿ ರಾಯಲ್ ಅಬ್ದುಲ್ ಖಾದರ್ ಅವರ ಮೈದಾನದಲ್ಲಿ ಧ್ವಜಾರೋಹಣ ಕಾರ್ಯಕ್ರಮ ಅಹ್ಮದ್ ಹಾಗೂ ವಾಮಯ್ಯ ಇವರು ನೆರವೇರಿಸಿದರು.
ಯೂನಿಟ್ ಅಧ್ಯಕ್ಷರಾದ ಅನಸ್ ರವರ ನೇತೃತ್ವದಲ್ಲಿ ರಾಷ್ಟ್ರದ ಒಳಿತಿಗಾಗಿ ಸೌಹಾರ್ದತೆಯ ಉಳಿವಿಗಾಗಿ ಕಾರ್ಯಾಚರಿಸು ವೇನೆಂದು ಪ್ರತಿಜ್ಞೆಯನ್ನು ಮಾಡಲಾಯಿತು. ನಾಸಿರ್ ಮಾಸ್ಟರ್ ಸ್ವಾಗತಿಸಿ ಕಾರ್ಯದರ್ಶಿ ಜುಲ್ಫಿಕರ್ ವಂದಿಸಿದರು. ಕಾರ್ಯಕ್ರಮದಲ್ಲಿ ಊರಿನ ನೇತಾರರು ಹಾಗೂ ಯೂನಿಟ್ ಕಾರ್ಯಕರ್ತರು ಭಾಗವಹಿಸಿದರು.