ಗದಗ :ಎಸ್.ಎಸ್.ಎಫ್ ಗದಗ ಜಿಲ್ಲಾ ವಾರ್ಷಿಕ ಮಹಾಸಭೆ ಜನವರಿ 24 ಆದಿತ್ಯವಾರ ಬೆಳಿಗ್ಗೆ 11 ಗಂಟೆಗೆ ಮುಹ್ಮಿನ್ ಮೊಹಲ್ಲ ಮದ್ರಸ ಹಾಲ್ ಲಕ್ಷ್ಮೇಶ್ವರ ದಲ್ಲಿ ನಡೆಯಿತು.ಗದಗ ಜಿಲ್ಲಾಧ್ಯಕ್ಷ ಹಾಫಿಝ್ ಸ್ವಾದಿಖ್ ಅಶ್ರಫಿ ಅಧ್ಯಕ್ಷತೆ ವಹಿಸಿದ್ದರು. ಬದ್ರುದ್ದೀನ್ ಸಖಾಫಿ ಲಕ್ಷ್ಮೇಶ್ವರ ಸ್ವಾಗತಿಸಿ,ವರದಿ ವಾಚಿಸಿ, ಲೆಕ್ಕಪತ್ರ ಮಂಡಿಸಿದರು.
ಕಾರ್ಯಕ್ರಮವನ್ನು ರಾಜ್ಯ ಕಾರ್ಯದರ್ಶಿ ಅಶ್ರಫ್ ರಝಾ ಅಂಜದಿ ಉದ್ಘಾಟಿಸಿದರು.ರಾಜ್ಯ ಕೋಶಾಧಿಕಾರಿ ರವೂಫ್ ಖಾನ್ ತರಗತಿ ನಡೆಸಿದರು .ಪದಾಧಿಕಾರಿಗಳ ಕರ್ತವ್ಯದ ಬಗ್ಗೆ S.O ವಾಜಿದ್ ಹಾಸನ ಉತ್ತಮ ಮಾಹಿತಿ ನೀಡುತ್ತಾ. ನಂತರ ಪದಾಧಿಕಾರಿಗಳ ಆಯ್ಕೆ ನಡೆಸಿದರು.
ಅಧ್ಯಕ್ಷರಾಗಿ :ಹಾಫಿಝ್ ಸ್ವಾದಿಖ್ ಅಶ್ರಫಿ ಲಕ್ಷ್ಮೇಶ್ವರ, ಪ್ರಧಾನ ಕಾರ್ಯದರ್ಶಿಯಾಗಿ ಮನ್ಸೂರ್ ಖಾದ್ರಿ ಹಾಗೂ ಕೋಶಾಧಿಕಾರಿಯಾಗಿ ಝರಾರ್ ಅಹ್ಮದ್ ಬೆಪಾರಿ ರವರನ್ನು ಆಯ್ಕೆ ಮಾಡಲಾಯಿತು.ಉಪಾಧ್ಯಕ್ಷರಾಗಿ..ಮೌಲಾನ ಖಯ್ಯೂಂ ರಝಾ, ರಾಜಬಕ್ಷಿ ಲಕ್ಷ್ಮೇಶ್ವರ,ಉಮರ್ ಸಅದಿ ಕಾರ್ಯದರ್ಶಿಗಳಾಗಿ ಬದ್ರುದ್ದೀನ್ ಸಖಾಫಿ, ಝಾಕಿರ್ ಹುಸೈನ್,ಝಬೈರ್ ಸಖಾಫಿ,ಝಮೀರ್ ಅಹ್ಮದ್,ಅಸ್ರಾರ್ ಸಖಾಫಿ,ಖಲಂದರ್ ಖಾಝಿ ಗದಗ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರು ಜಾಫರ್ ಖಾಝಿ, ನೂರ್ ಅಹ್ಮದ್ ಚಿಂಚಲಿ, ಆಸಿಫ್ ಲಕ್ಷ್ಮೇಶ್ವರ,ಸಾಲಿಂ ಸಖಾಫಿ,ದಿಲ್ಶಾದ್ ಖಾದ್ರಿ, ಮೌಲಾನ ಸದ್ದಾಂ ಮಜ್ಜೂರ್ ,ಮೌಲಾನ ಹುಸೈನ್ ಸಿದ್ದಾಪುರ, ಮೌಲಾನ ಫಾರೂಖ್ ರಝಾ ಆಯ್ಕೆ ಮಾಡಿದ್ದರು. ಬಳಿಕ ನೂತನ ಸಮಿತಿಗೆ ಕಡತಗಳನ್ನು ಹಾಗೂ SSF ತ್ರಿವರ್ಣಧ್ವಜವನ್ನು ರಾಜ್ಯ ಸಮಕ್ಷಮದಲ್ಲಿ ಹಸ್ತಾಂತರಿಸಲಾಯಿತು. ನೂತನ ಪ್ರಧಾನ ಕಾರ್ಯದರ್ಶಿಯವರು ಧನ್ಯವಾದಗಳನ್ನು ಅರ್ಪಿಸಿ ಸ್ವಲಾತೊ ಸಲಾಂನೊಂದಿಗೆ ಸಭೆ ಮುಕ್ತಾಯಗೊಳಿಸಲಾಯಿತು.
ಹುಬ್ಬಳ್ಳಿ ಜಿಲ್ಲಾ ಸಾರಥಿಗಳು:
ಹುಬ್ಬಳ್ಳಿ :ಎಸ್.ಎಸ್.ಎಫ್ ಹುಬ್ಬಳ್ಳಿ-ಧಾರವಾಡ ಜಿಲ್ಲಾ ವಾರ್ಷಿಕ ಮಹಾಸಭೆ ಜನವರಿ 24 ಆದಿತ್ಯವಾರ ರಾತ್ರಿ 7 ಗಂಟೆಗೆ ಇಹ್ಸಾನ್ ಮಸ್ಜಿದ್ ನಿಝಾಮುದ್ದೀನ್ ಟೌನ್ ಹುಬ್ಬಳ್ಳಿ ಯಲ್ಲಿ ನಡೆಯಿತು. ಹುಬ್ಬಳ್ಳಿ ಶಾಫಿ ಮಸ್ಜಿದ್ ಖತೀಬ್ ಅಬ್ದುಲ್ ಖಾದರ್ ಸಖಾಫಿ ದುವಾಃನಡೆಸಿದ ಕಾರ್ಯಕ್ರಮದಲ್ಲಿ ಮೌಲಾನ ರಶೀದ್ ಅತ್ತಾರಿ ಹುಬ್ಬಳ್ಳಿ ಸ್ವಾಗತ ಮಾಡಿದರು.
ಕಾರ್ಯಕ್ರಮವನ್ನು ಮೌಲಾನ ಹುಸೈನ್ ಸಖಾಫಿ ಉದ್ಘಾಟಿಸಿದರು.ರಾಜ್ಯ ಕೋಶಾಧಿಕಾರಿ ರವೂಫ್ ಖಾನ್ ತರಗತಿ ನಡೆಸಿದರು . ಪದಾಧಿಕಾರಿಗಳ ಕರ್ತವ್ಯದ ಬಗ್ಗೆ S.O ಅಶ್ರಫ್ ರಝಾ
ಅಂಜದಿ ಉತ್ತಮ ಮಾಹಿತಿ ನೀಡುತ್ತಾ. ನಂತರ ಪದಾಧಿಕಾರಿಗಳ ಆಯ್ಕೆ ನಡೆಸಿದರು.
ಅಧ್ಯಕ್ಷರಾಗಿ : ಮೌಲಾನ ರಶೀದ್ ಅತ್ತಾರಿ ಹುಬ್ಬಳ್ಳಿ
ಪ್ರಧಾನ ಮುಹಮ್ಮದ್ ಹನೀಫ್ ಸಖಾಫಿ ಸಾಲೆತ್ತೂರ್ ಹಾಗೂ ಕೋಶಾಧಿಕಾರಿಯಾಗಿ ಮುಹಮ್ಮದ್ ಹನೀಫ್ ಸಖಾಫಿ ಹುಬ್ಬಳ್ಳಿ ರವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಮೌಲಾನ ಹುಸೈನ್ ಸಖಾಫಿ, ಅಬ್ದುರ್ರಹ್ಮಾನ್ ಸಖಾಫಿ ಇಂಗಳಹಳ್ಳಿ ಕಾರ್ಯದರ್ಶಿಗಳಾಗಿ ಅಬೂಬಕ್ಕರ್ ಹುಬ್ಬಳ್ಳಿ,ಖಲೀಲ್ ನಈಮಿ, ಅಲ್ತಾಫ್ ಅಸ್ಅದಿ,ಶೈಖ್ ಮುಲ್ಲಾ,ಆಸಿಫ್ ಇಂಗಳಹಳ್ಳಿ,ಅಬ್ದುಲ್ ಮಲಿಕ್ ಅತ್ತಾರಿ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರು ತೌಸೀಫ್ ರಝಾ ಮಿಶ್ರಿಕೋಟಿ, ರಿಝ್ವಾನ್ ರಝಾ,ಹೈದರ್ ಆಲೀ ಭಂಡಿವಾಡ, ಸ್ವಾದಿಖ್, ದಾದಪೀರ್,ಇರ್ಫಾನ್ ರವರನ್ನು ಆಯ್ಕೆ ಮಾಡಿದ್ದರು.ಬಳಿಕ ನೂತನ ಸಮಿತಿಗೆ ಕಡತಗಳನ್ನು ಹಾಗೂ SSF ತ್ರಿವರ್ಣಧ್ವಜವನ್ನು ರಾಜ್ಯ ನಾಯಕರ ಸಮಕ್ಷಮದಲ್ಲಿ ಹಸ್ತಾಂತರಿಸಲಾಯಿತು. ನೂತನ ಪ್ರಧಾನ ಕಾರ್ಯದರ್ಶಿಯವರು ಧನ್ಯವಾದಗಳನ್ನು ಅರ್ಪಿಸಿದರು.