janadhvani

Kannada Online News Paper

ಎಸ್ಸೆಸ್ಸೆಫ್: ಚಿತ್ರದುರ್ಗ ಹಾಗೂ ಬಳ್ಳಾರಿ ಜಿಲ್ಲೆಯ ನವ ಸಾರಥಿಗಳು

ಚಿತ್ರದುರ್ಗ : ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ ಚಿತ್ರದುರ್ಗ ಜಿಲ್ಲೆಯ ವಾರ್ಷಿಕ ಮಹಾಸಭೆ ಜಿಲ್ಲಾಧ್ಯಕ್ಷ ಎಮ್ಮೆಸ್ಸಂ ಜುನೈದ್ ಸಖಾಫಿ ಹಿಮಮಿ ರವರ ಅಧ್ಯಕ್ಷತೆಯಲ್ಲಿ ಚಿತ್ರದುರ್ಗ ನಗರದ ಇಹ್ಸಾನ್ ಮದ್ರಸ ಹಾಲ್ ನಲ್ಲಿ ನಡೆಯಿತು.

ಮಹಮ್ಮದ್ ಫೈಝಾನ್ ಖಾದರ್ ನಾಥ್ ಪಠಿಸಿದರು. ಅಬ್ಫುಲ್ ಕಾದಿರ್ ಸಖಾಫಿ ಕಿರಾಅತ್ ಪಠಿಸುವ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಸಿಫ್ ರಝ್ವಿ ಸಭೆಗೆ ಸ್ವಾಗತ ಕೋರಿದರು. ಅಧ್ಯಕ್ಷರು ಎಮ್ಮೆಸ್ಸೆಂ ಜುನೈದ್ ಸಖಾಫಿ ಹಿಮಮಿ ವಾರ್ಷಿಕ ವರದಿ ವಾಚನ ಮತ್ತು ಲೆಕ್ಕ ಪತ್ರವನ್ನು ಮಂಡಿಸಿದರು.

ಹಾಫಿಝ್ ಆದಂ ಹಝ್ರತ್ ಕೌನ್ಸಿಲರ್ ಗಳಿಗೆ ತರಗತಿ ನೀಡಿದರು. ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ಪ್ರಭಾರ ಅಧ್ಯಕ್ಷರು ಹಾಫಿಝ್ ಸುಫಿಯಾನ್ ಸಖಾಫಿ ವಿಷಯ ಮಂಡನೆ ಕೌನ್ಸಿಲ್ ವೀಕ್ಷಕರಾಗಿ ಆಗಮಿಸಿದ ರಾಜ್ಯ ನಾಯಕ ಸಫ್ವಾನ್ ಚಿಕ್ಕಮಗಳೂರು ನೂತನ ಜಿಲ್ಲಾ ಸಮಿತಿಯನ್ನು ಘೋಷಣೆ ಮಾಡಿದರು.

ನೂತನ ಜಿಲ್ಲಾ ಅಧ್ಯಕ್ಷರಾಗಿ ಮುಹಮ್ಮದ್ ಫೈಝುಲ್ಲಾಹ್ ಪಿ ಪ್ರಧಾನ ಕಾರ್ಯದರ್ಶಿ ಸದ್ದಾಂ ಹುಸೇನ್‌ ಕೆ, ಕೋಶಾಧಿಕಾರಿಯಾಗಿ ಸಯ್ಯಿದ್ ಸಾದಿಕುಲ್ಲಾಹ್ ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ಅಬ್ದುಲ್ ಖಾದರ್ ಸಖಾಫಿ, ಮುಹಮ್ಮದ್ ಆಸಿಫ್ ರಝ್ವಿ, ಕಾರ್ಯದರ್ಶಿಗಳಾಗಿ ಝಾಹಿದ್ ಹುಸೇನ್, ಶಂಶುದ್ದೀನ್, ಸಲ್ಮಾನ್ ಸಖಾಫಿ ಹಿರಿಯೂರ್, ನಸೀಮ್ ಬಡಮಕಾನ್, ಶಫೀಕುಲ್ಲಾಹ್ ಹೊಲಳ್ಕೆರೆ, ಸಾದಿಕ್ ಹಿಮಮಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಮ್ಮೆಸ್ಸೆಂ ಜುನೈದ್ ಸಖಾಫಿ, ಹಾಫಿಝ್ ಆದಮ್ ಹಝ್ರತ್, ಫಝಲುಲ್ಲಾಹ್ ಈದ್ಗಾ ಮೊಹಲ್ಲಾ, ಝಕರಿಯ್ಯ ಸಖಾಫಿ, ತನ್ವೀರ್, ಶಂಶುದ್ದೀನ್ ಹಸ್ಗಂಕಲ್ಲು, ಬಶೀರ್ ಎಚ್ ಹಾಗೂ ಇವರನ್ನು ಆಯ್ಕೆ ಮಾಡಲಾಯಿತು.

ನೂತನ ಕಾರ್ಯದರ್ಶಿ ಸದ್ದಾಮ್ ಹುಸೈನ್ ಕೆ ಕೊನೆಯದಾಗಿ ವಂದನೆಗಳನ್ನು ಅರ್ಪಿಸಿದರು.

ಎಸ್ಸೆಸ್ಸೆಫ್ : ಬಳ್ಳಾರಿ ಜಿಲ್ಲೆಗೆ ನೂತನ ಸಾರಥ್ಯ

ಗಂಗಾವತಿ : ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ ಬಳ್ಳಾರಿ ಜಿಲ್ಲೆಯ ವಾರ್ಷಿಕ ಮಹಾಸಭೆ ಜಿಲ್ಲಾ ಉಪಾಧ್ಯಕ್ಷರಾದ ಸಯ್ಯಿದ್ ಗೇಸುದರಾಝ್ ಖಾದ್ರಿ ಕಂಪ್ಲಿ ರವರ ಅಧ್ಯಕ್ಷತೆಯಲ್ಲಿ ಕಂಪ್ಲಿಯ ದಿವಾನ್ ಖಾನೆಯಲ್ಲಿ ನಡೆಯಿತು.

ಎಸ್ಸೆಸ್ಸೆಫ್ ರಾಜ್ಯ ಪ್ರಭಾರ ಅಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಕಾವಳಕಟ್ಟೆ ಸಭೆಯನ್ನು ಉದ್ಘಾಟಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಹಾಖ್ ಸಖಾಫಿ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ಕೌನ್ಸಿಲ್ ವೀಕ್ಷಕರಾಗಿ ಆಗಮಿಸಿದ ರಾಜ್ಯ ನಾಯಕ ಸಫ್ವಾನ್ ಚಿಕ್ಕಮಗಳೂರು ನೂತನ ಜಿಲ್ಲಾ ಸಮಿತಿಯನ್ನು ಘೋಷಣೆ ಮಾಡಿದರು.

ನೂತನ ಜಿಲ್ಲಾ ಅಧ್ಯಕ್ಷರಾಗಿ ಮುಫ್ತಿ ರೋಷನ್ ಝಮೀರ್ ಹೊಸಪೇಟೆ , ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಸ್ಹಾಖ್ ಸಖಾಫಿ ಕುಡತಿನಿ, ಕೋಶಾಧಿಕಾರಿಯಾಗಿ ಜೀಲಾನಿ ಬಾಷ ಹೂವಿನಹಡಗಲಿ ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ಸಯ್ಯಿದ್ ಗೇಸುದರಾಝ್ ಖಾದ್ರಿ ಕಂಪ್ಲಿ, ಫಾರೂಖ್ ಹಿಮಮಿ ಬೂದುಗುಂಪ್ಪ. ಕಾರ್ಯದರ್ಶಿಗಳಾಗಿ ಪೀರ್ ಸಾಬ್ ಬೂದುಗುಂಪ್ಪ, ಸೀಯಾರ್ ಹಿಮಮಿ, ಅಬೂಬಕರ್ ಮರ್ಝೂಖಿ ಕಪ್ಪುಗಲ್, ಮಹ್ಬೂಬ್ ರಝಾ ಖಾದ್ರಿ, ನೂರುದ್ದೀನ್ ವಡ್ಡು. ಸದಸ್ಯರುಗಳಾಗಿ ಸಿದ್ದೀಕ್ ಸಖಾಫಿ, ಸಿನಾನ್ ಸಖಾಫಿ, ಶಾಕಿರ್ ಸಖಾಫಿ, ವಲೀಬಾಷಾ ಕುಡತಿನಿ, ಮುಸ್ತಾಕ್ ಸಿರಿವಾರ, ರಝಾ ಅಲೀ ಕಂಪ್ಲಿ, ನವಾಝ್ ಮುಈನಿ, ಸಫ್ವಾನ್ ಜೌಹರಿ ಇವರನ್ನು ಆಯ್ಕೆ ಮಾಡಲಾಯಿತು.

error: Content is protected !! Not allowed copy content from janadhvani.com