ಜಲಾನ್, ಜನವರಿ 19: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಕಳೆದ ವಾರ ಉತ್ತರಪ್ರದೇಶದ ಬಿಜೆಪಿ ನಾಯಕ ರಾಮ್ ಬಿಹಾರಿ ರಾಥೋಡ್ ಅವರನ್ನು ಪೊಲೀಸರು ಬಂಧಿಸಿದ್ದರು. ಈ ಸುದ್ದಿ ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿಗೆ ಗ್ರಾಸವಾಗಿತ್ತು.
ಆದರೆ, ಇದೀಗ ರಾಮ್ ಬಿಹಾರಿ ರಾಥೋಡ್ ವಿಚಾರಣೆ ನಡೆಸುತ್ತಿರುವ ಪೊಲೀಸರು ಹತ್ತು ಹಲವಾರು ಆಘಾತಕಾರಿ ಮಾಹಿತಿಗಳನ್ನು ಹೊರಗೆಡಹುತ್ತಿದ್ದಾರೆ. ಈತ ಕ್ರಿಕೆಟ್ ಬೆಟ್ಟಿಂಗ್ ಸೇರಿದಂತೆ ಹಲವಾರು ಕ್ರಿಮಿನಲ್ ಮತ್ತು ಸಮಾಜಘಾತುಕ ಕೆಲಸಗಳಲ್ಲಿ ಭಾಗಿಯಾಗಿದ್ದಾರೆ ಎಂದು ಉತ್ತರ ಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಕಳೆದ ವಾರ ಇಬ್ಬರು ಅಪ್ರಾಪ್ತ ಬಾಲಕರು ತಮ್ಮ ಮೇಲೆ ನಿರಂತರವಾಗಿ ನಡೆದ ಲೈಂಗಿಕ ದೌರ್ಜನ್ಯದ ಕುರಿತು ದೂರು ನೀಡಿದ ನಂತರ, ರಾಮ್ ಬಿಹಾರಿಯನ್ನು ಜನವರಿ 13 ರಂದು ಬಂಧಿಸಲಾಗಿತ್ತು. ಆಗಲೇ ಬಿಜೆಪಿ ಈತನನ್ನು ಉಚ್ಛಾಟನೆ ಮಾಡಿದೆ ಎಂದು ವರದಿಯಾಗಿದೆ.
ಬಂಧನದ ನಂತರ ಇನ್ನೊಂದು ದೂರು ದಾಖಲಾಗಿದೆ. ಇದಲ್ಲದೇ ಕಳೆದ 6-7 ವರ್ಷಗಳಿಂದ ರಾಮ್ ಬಿಹಾರಿ ರಾಠೋಡ್ ಹಲವಾರು ಕ್ರಿಮಿನಲ್ ದಂಧೆಗಳಲ್ಲಿ ನಿರತನಾಗಿದ್ದ ವಿವರಗಳು ಪೊಲೀಸರಿಗೆ ಲಭ್ಯವಾಗಿವೆ. ಜಲೌನ್ ಜಿಲ್ಲೆಯ ಕೊಂಚ್ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ತನ್ನ ಮನೆಯಿಂದ ಈತ ಕ್ರಿಕೆಟ್ ಬೆಟ್ಟಿಂಗ್ ಜಾಲ ನಡೆಸುತ್ತಿದ್ದ ಎಂಬ ಆರೋಪವನ್ನು ಪೊಲೀಸರು ಮುಂದಿಟ್ಟಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕೊಂಚ್ ಠಾಣಾಧಿಕಾರಿ ಇಮ್ರಾನ್ ಖಾನ್, “ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ. ಸಾಕ್ಷ್ಯ ಗಳನ್ನು ಕಲೆ ಹಾಕುತ್ತಿದ್ದೇವೆ. ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ) ಅಡಿಯೂ ಪ್ರಕರಣ ದಾಖಲಿಸುವ ಚಿಂತನೆ ನಡೆದಿದೆ.
ಈತನ ವಿರುದ್ಧ ಇನ್ನೂ ಹಲವಾರು ಅಪ್ರಾಪ್ತ ಬಾಲಕರು ಮತ್ತು ಕೆಲವು ಮಹಿಳೆಯರು ಸಹ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು ನೀಡಲು ಮುಂದೆ ಬಂದಿದ್ದು, ಪೊಲೀಸರನ್ನು ಸಂರ್ಕಿಸಿದ್ದಾರೆ. ಹೀಗಾಗಿ ನಾವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ” ಎಂದು ಮಾಹಿತಿ ನೀಡಿದ್ದಾರೆ.
















ಇನ್ನಷ್ಟು ಸುದ್ದಿಗಳು
15,000 ಜನರನ್ನು ಕೊಲ್ಲುವ ಗುರಿ: ಮುಹರಂ ಕಾರ್ಯಕ್ರಮದಲ್ಲಿ ವಿಷಪೂರಿತ ಮಾತ್ರೆಗಳನ್ನು ವಿತರಿಸಿದ ವ್ಯಕ್ತಿ ಬಂಧನ
‘ತೂಫಾನ್’ ಗೆ ಮರ್ಕಝ್ ಸಾಥ್ : ಕಾಂತಪುರಂ ಉಸ್ತಾದ್- ಗೃಹ ಸಚಿವ ರಮೇಶ್ ಚೆನ್ನಿತ್ತಲ ಸಮಾಲೋಚನೆ
ಚುನಾವಣಾ ಸಂಭ್ರಮಾಚರಣೆ: ಪಟಾಕಿ ಸಿಡಿದು ಮುಸ್ಲಿಂ ಲೀಗ್ ಕಾರ್ಯಕರ್ತ ಮೃತ್ಯು
ತಮ್ಮದೇ ಸರ್ಕಾರ ಮಂಡಿಸಿದ ಜಾತಿ ಸಮೀಕ್ಷೆ ವರದಿಯನ್ನು ಸುಟ್ಟು ಹಾಕಿದ ಕಾಂಗ್ರೆಸ್ ಎಂಎಲ್ಸಿ
ಕರ್ನಾಟಕ ಸರ್ಕಾರವನ್ನು ಬೀಳಿಸಲು ಕೇರಳ ದೇವಸ್ಥಾನದಲ್ಲಿ ಮೃಗ ಬಲಿ – ದೇವಸ್ವಂ ಸಚಿವರು ಹೇಳಿದ್ದೇನು?
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಮಣಿಪುರ: ಚುನಾವಣೆ ಬಹಿಷ್ಕಾರ ಕ್ಕೆ ಕರೆ ಕೊಟ್ಟ ಕುಕಿ!!
ಬಡತನದಿಂದ ಬಳಲುತ್ತಿರುವ ಕುಟುಂಬದ ಮಹಿಳೆಯರ ಬ್ಯಾಂಕ್ ಖಾತೆಗೆ ವರ್ಷಕ್ಕೆ 1 ಲಕ್ಷ ರೂಪಾಯಿ
ಸಯ್ಯಿದ್ ಹಸನುಲ್ ಅಹ್ದಲ್ ತಂಙಳರಿಗೆ ಗೌರವ ‘ಅತ್ತಕ್ರೀಂ’- ಸ್ವಾಗತ ಸಮಿತಿ ಅಸ್ತಿತ್ವಕ್ಕೆ
ಪುಟ್ಟ ಬಾಲಕಿಯ ಅತ್ಯಾಚಾರ,ಹತ್ಯೆ ಪ್ರಕರಣ- ಆರೋಪಿ ಅಶ್ಫಾಕ್ ಆಲಂಗೆ ಮರಣ ದಂಡನೆ