janadhvani

Kannada Online News Paper

ಎಸ್ ವೈ ಎಸ್ ಕೆರೆಬಳಿ ಬ್ರಾಂಚ್: ವಾರ್ಷಿಕ ಸಭೆ

ಎಸ್ ವೈ ಎಸ್ ಕೆರೆಬಳಿ ಬ್ರಾಂಚ್ ಇದರ COUNT -20 ವಾರ್ಷಿಕ ಸಭೆ 27-12-20 ರಂದು ಡಿ.ಎಚ್.ಇಬ್ರಾಹಿಂ ಸಾದಿ ಉಸ್ತಾದ್ ರವರ ನೇತೃತ್ವದಲ್ಲಿ ನಡೆಯಿತು.

ಡಿ .ಎಚ್. ಉಸ್ತಾದ್ ರವರು ಪ್ರಥಮವಾಗಿ ಖಲಂದರಿಯಾ ಮಂಝಿಲ್ ಕೆರೆಬಳಿ ಯಲ್ಲಿ ಸಭೆ ಇದ್ದು ಮರ್ಹೂಂ ಹಝ್ರತ್ ಖಲಂದರ್ ಮುಹಮ್ಮದ್ ಜಾವಕಲ್ ಇವರ ಹೆಸರಲ್ಲಿ ತಸ್ಬೀಹ್ ತಹ್ಲೀಲ್ ಸ್ವಲಾತ್ ಮಜ್ಲಿಸ್ ನಡೆಸಿದರು.
ನಂತರ ಸಂಘಟನೆಯ ಕುರಿತು ಹಿತವಚನ ಬೋಧಿಸಿದರು.

ಸಭೆಗೆ ವಿಕ್ಷಕರಾಗಿ ಆಗಮಿಸಿದ ಎಸ್ ವೈ ಎಸ್ ಜಿಲ್ಲಾ ಕಾರ್ಯದರ್ಶಿ ಬಹು ಇಬ್ರಾಹಿಂ ಖಲೀಲ್ ಉಸ್ತಾದ್ ರು ಸಂಘಟನೆಯ ಉದ್ದೇಶಗಳನ್ನು ತಿಳಿಸಿದರು.ಎಸ್ ವೈ ಎಸ್ ಕೆರೆಬಳಿ ಬ್ರಾಂಚ್ ನ ಪ್ರ.ಕಾರ್ಯದರ್ಶಿ ಅಬ್ದುಲ್ ಲತೀಫ್ .ಉಳ್ಳಾಲ
ಇವರು ವರದಿ ಮಂಡಿಸಿದರು.ದಅ್‌ವಾ ಹಾಗೂ ಎಜುಕೇಶನ್ ಕಾರ್ಯದರ್ಶಿ ಇಸ್ಮಾಯಿಲ್ ಹಾಜಿ ಲೆಕ್ಕ ಪತ್ರ ಮಡನೆ ಮಾಡಿದರು. ಕಳೆದ ಸಾಲಿನ ಸಮಿತಿಯನ್ನೇ ಮುಂದುವರಿಸಲು ತೀರ್ಮಾನಿಸಲಾಯಿತು.