janadhvani

Kannada Online News Paper

ಯುನೈಟೆಡ್ ಮುಲ್ಕಿ ಫೌಂಡೇಶನ್ ಅಲ್ ಜುಬೈಲ್ ವತಿಯಿಂದ ಯಶಸ್ವಿಯಾದ ರಕ್ತದಾನ ಶಿಬಿರ

ಯುನೈಟೆಡ್ ಮುಲ್ಕಿ ಫೌಂಡೇಶನ್ (UMF) ಇದರ ಜುಬೈಲ್ ಘಟಕದ ವತಿಯಿಂದ ಅಲ್’ಮನಾ ಹಾಸ್ಪಿಟಲ್ ಜುಬೈಲ್ ನಲ್ಲಿ ಮರ್ಹೂಮ್ ಅಬ್ದುಲ್ ಖಾದರ್ ಎಮಿರೇಟ್ಸ್ ರವರ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರವು ಯಶಸ್ವಿಯಾಗಿ ನಡೆಸಲಾಯಿತು.

UMF ಸದಸ್ಯರು ಹಾಗೂ ಸಂಸ್ಥೆಯ ಹಿತೈಷಿಗಳು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಶಿಬಿರಿವನ್ನು ಯಶಸ್ವಿಗೊಳಿಸಿದರು. ಸಂಸ್ಥೆಯ ಈ ಜನಹಿತ ಕಾರ್ಯಕ್ರಮವು ಅನಿವಾಸಿ ಭಾರತೀಯರ ಪ್ರಶಂಸೆಗೆ ಕಾರಣವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಪರಿಸರದ ಅನಿವಾಸಿ ಭಾರತೀಯರು ಕಳೆದ ಎರಡು ದಶಕಳಿಂದ ಸೌದಿ ಅರೇಬಿಯಾದಲ್ಲಿ ಮುಲ್ಕಿ ಮುಸ್ಲಿಂ ಅಸೋಸಿಯೇಷನ್ ಎಂಬ ಹೆಸರಿನಲ್ಲಿ ಮುಲ್ಕಿ ಪರಿಸರದ ಜನರಿಗೆ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ. ಇತ್ತೀಚೆಗೆ ಸೌದಿ ಘಟಕವು ವಿವಿಧ ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿರುವ ಮುಲ್ಕಿಯ ಮುಸ್ಲಿಮರನ್ನು ಒಂದೇ ಸಂಘಟನೆಯಡಿಯಲ್ಲಿ ಒಗ್ಗೂಡಿಸುವ ನೂತನವಾದ ಯೋಜನೆಯನ್ನು ಪ್ರಾರಂಭಿಸಿತು. ಅದರಂತೆ ಯುನೈಟೆಡ್ ಮುಲ್ಕಿ ಫೌಂಡೇಶನ್ ರೂಪಿಕಾರಣವಾಯಿತು.

ನೂತನ UMF ಸಮಿತಿಯು ಮುಲ್ಕಿ ಹಾಗೂ ಇತರ ಅನಿವಾಸಿಗಳ ಸಂಕಷ್ಟಗಳಿಗೆ ನೆರವಾಗುವುದಲ್ಲದೇ ಹಲವಾರು ಸಮಾಜ ಕಲ್ಯಾಣ ಯೋಜನೆಗಳನ್ನು ನಡೆಸಲು ಉದ್ದೇಶಿಸಿದೆ ಅದರ ಭಾಗವಾಗಿ ಜುಬೈಲ್ ಘಟಕ ಈ ರಕ್ತದಾನ ಶಿಬಿರವನ್ನು ನಡೆಸಿದೆ.

error: Content is protected !! Not allowed copy content from janadhvani.com