ಕಬಕ, ಡಿ.20: ಎಸ್ಸೆಸ್ಸೆಫ್ ಕಬಕ ಶಾಖೆಯ ವಾರ್ಷಿಕ ಮಹಾಸಭೆ ಮತ್ತು ಬೀಳ್ಕೊಡುಗೆ ಸಮಾರಂಭವು ಮುಹಮ್ಮದ್ ಅಶ್ರಫ್ ರವರ ಅಧ್ಯಕ್ಷತೆಯಲ್ಲಿ, ಸಲಾಂ ಹನೀಫಿಯವರ ದುಆದ ಮೂಲಕ ಸುನ್ನಿ ಸೆಂಟರ್ ಕಬಕದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ SYS ಕಬಕ ಬ್ರಾಂಚ್ ಅಧ್ಯಕ್ಷ ಸಿದ್ದೀಖ್ ಹಾಜಿ ಕಬಕ ಸಂಘಟನಾ ತರಗತಿ ನಡೆಸಿಕೊಟ್ಟರು. ಉಸ್ತುವಾರಿಯಾಗಿ ಆಗಮಿಸಿದ ಹಮೀದ್ ಸಂಪ್ಯ ಹಾಗೂ ಚುನಾವಣಾಧಿಕಾರಿಯಾಗಿ ಆಗಮಿಸಿದ ಬಾತಿಷ್ ಬನ್ನೂರು ಮತ್ತು ಹನೀಫ್ ಬನ್ನೂರು ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. SYS ಕಬಕ ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಶಾಹುಲ್ ಹಮೀದ್, SSF ಪುತ್ತೂರು ಡಿವಿಷನ್ ಕೋಶಾಧಿಕಾರಿ ಅಬ್ದುಲ್ ಮಜೀದ್ ಕಬಕ ಭಾಗವಹಿಸಿದರು.
SSF ನಲ್ಲಿ ಕಾರ್ಯಾಚರಿಸಿ SYS ಗೆ ಹೋಗುತ್ತಿರುವ ಅಬ್ದುಲ್ ಮಜೀದ್ ಕಬಕ, ಶಾಕಿರ್ ಕಲ್ಲಂದಡ್ಕ, ಉಮರ್ ಬ್ರೈಟ್ ರವರನ್ನು ಸನ್ಮಾನಿಸಿ ಬಿಳ್ಕೊಡಲಾಯಿತು.
2021-2022 ನೇ ಸಾಲಿನ ನೂತನ ಸಾರಥಿಗಳು:
ಅಧ್ಯಕ್ಷರು: ಇಲ್ಯಾಸ್ ಕಬಕ.
ಉಪಾಧ್ಯಕ್ಷರು: ಹಾಫಿಳ್ ಸಿನಾನ್ ಮತ್ತು ಮುಹಮ್ಮದ್ ಮುನೀರ್ ಹಿಮಮಿ.
ಪ್ರಧಾನ ಕಾರ್ಯದರ್ಶಿ: ಹಬೀಬುಲ್ಲಾ ಸಫ್ವಾನ್.
ಜೊತೆ ಕಾರ್ಯದರ್ಶಿ: ಅಹ್ಮದ್ ಮನ್ಸೂರ್ ಮತ್ತು ಫಝಲ್ ವಿದ್ಯಾಪುರ.
ಕೋಶಾಧಿಕಾರಿ: ಸಲ್ಮಾನ್ ಫಾರಿಸ್ ಸುಲ್ತಾನ್ ನಗರ.
ಕ್ಯಾಂಪಸ್ ಕಾರ್ಯದರ್ಶಿ: ಸಮದ್.
ಕಾರ್ಯಕಾರಿ ಸಮಿತಿ ಸದಸ್ಯರು:
ಮುಹಮ್ಮದ್ ಅಶ್ರಫ್, ಅಬ್ದುಲ್ ಸಲಾಂ ಹನೀಫಿ, ಸಫ್ವಾನ್ ಅಹ್ಮದ್, ರಝಾನ್, ರಮೀಝ್, ಹಬೀಬುಲ್ಲಾ ಸಫ್ವಾನ್, ಇಲ್ಯಾಸ್,
ಸಲ್ಮಾನ್ ಫಾರಿಸ್ ಸುಲ್ತಾನ್ ನಗರ, ನವಾಝ್, ನೌಫಳ್,
ತೌಶೀದ್ ಮುಸ್ಲಿಯಾರ್
ಕಲ್ಲಂದಡ್ಕ,
ಅಹ್ಮದ್ ಮನ್ಸೂರ್, ಮುಹಮ್ಮದ್ ಮುನೀರ್.ಎ ಹಿಮಮಿ, ಖೈಸ್, ಸಮದ್, ಝುಬೈರ್ ಸುಲ್ತಾನ್ ನಗರ, ಫಝಲ್,
ಹಾಫಿಳ್ ಸಿನಾನ್ ಮುಂತಾದವರನ್ನು ಆಯ್ಕೆ ಮಾಡಲಾಯಿತು.
ಸೆಕ್ಟರ್ ಕೌನ್ಸಿಲರ್ ಗಳಾಗಿ ಮುಹಮ್ಮದ್ ಅಶ್ರಫ್ ಕಬಕ, ಸಲಾಂ ಹನೀಫಿ, ಸಫ್ವಾನ್ ಅಹ್ಮದ್ ಮತ್ತು ಝುಬೈರ್ ಆಯ್ಕೆಯಾದರು. ಕಾರ್ಯಕ್ರಮದಲ್ಲಿ ಇತ್ತೀಚೆಗೆ ಸದಸ್ಯತ್ವ ಪಡೆದ ಹಲವು ನೂತನ ಸದಸ್ಯರು ಭಾಗವಹಿಸಿದ್ದರು.
ಕೊನೆಗೆ ನೂತನ ಜೊತೆ ಕಾರ್ಯದರ್ಶಿ ಅಹ್ಮದ್ ಮನ್ಸೂರ್ ಕೃತಜ್ಞತೆ ಸಲ್ಲಿಸಿದರು.