ಬಾಳೆಹೊನ್ನೂರು: ಕರ್ನಾಟಕ ರಾಜ್ಯ SSF ಸೀಗೋಡ್ ಶಾಖೆ ಇದರ ಮಹಾಸಭೆ 03/12/2020 ರಂದು ಅಲ್ ಬದ್ರಿಯಾ ಮದಸ್ರ ಹಾಲ್ ನಲ್ಲಿ ಬಾಳೆಹೊನ್ನೂರು SSF ಡಿವಿಷನ್ ಅಧ್ಯಕ್ಷರು ಇಸ್ಮಾಯಿಲ್ ಜಯಪುರರವರ ಅಧ್ಯಕ್ಷತೆಯಲ್ಲಿ ಜರಗಿತು.
ಕಾರ್ಯಕ್ರಮವನ್ನು ಮುಸ್ತಾಫ ಸಅದಿ ಕಕ್ಕಿಂಜೆ ಉದ್ಘಾಟಿಸಿದರು. ಎಸ್ಸೆಸ್ಸೆಫ್ ಚಿಕ್ಕಮಗಳೂರು ಜಿಲ್ಲಾ ಅಧ್ಯಕ್ಷರು ಸಫ್ವಾನ್ ಸಖಾಫಿ ಭಾಷಣ ಮಾಡಿ ಸಂಘಟನೆಯಲ್ಲಿ ಕಾರ್ಯಕರ್ತರು ಪರಲೋಕದ ವಿಜಯಕ್ಕಾಗಿ ಒಳ್ಳೆಯ ಇಖ್ಲಾಸ್ ನಲ್ಲಿ ಕಾರ್ಯಚರಿಸಬೇಕು. ಎಸ್ಸೆಸ್ಸೆಫ್ ನ ಮೆಂಬರ್ ಶಿಪ್ ಪಡೆದುಕೊಂಡು ಸುಮ್ಮನೆ ಕೂರದೆ ಅಲ್ಲಾಹನಿಗಾಗಿ ಐದು ವಕ್ತ್ ನಮಾಝ್ ಮಾಡುವವರಾಗಬೇಕು ಎಂದು ಸಂಘಟನೆಯ ಮಹತ್ವವನ್ನು ವಿವರಿಸಿದರು.
ಚುನಾವಣಾ ವೀಕ್ಷಕರಾಗಿ ಆಗಮಿಸಿದ ಎಸ್ಸೆಸ್ಸೆಫ್ ಬಾಳೆಹೊನ್ನೂರು ಡಿವಿಷನ್ ನೇತಾರರಾದ ಅನ್ವರ್ ಮಸೀದಿಕೆರೆಯವರ ನೇತೃತ್ವದಲ್ಲಿ ಹೊಸ ಸಮಿತಿಯನ್ನು ಆಯ್ಕೆ ಮಾಡಲಾಯಿತು.

ನೂತನ ಪದಾಧಿಕಾರಿಗಳ ವಿವರ:
ಅಧ್ಯಕ್ಷರು:-ಅಝರ್, ಪ್ರಧಾನ ಕಾರ್ಯದರ್ಶಿ ಇಮ್ರಾನ್, ಕೋಶಾಧಿಕಾರಿ ಅಮೀರ್. ಉಪಾಧ್ಯಕ್ಷರುಗಳಾಗಿ ಸಂಶುದ್ದೀನ್, ಸಾದಿಕ್, ಅಫ್ರೀದ್. ಜೊತೆ ಕಾರ್ಯದರ್ಶಿಗಳಾಗಿ ಮುಬಸ್ಸಿರ್, ಶಾಹುಲ್, ಸಿರಾಜ್. ಸಂಘಟನಾ ಕಾರ್ಯದರ್ಶಿಯಾಗಿ ಶಬೀರ್ ಹಾಗೂ ಕಾರ್ಯಕಾರಿ ಸದಸ್ಯರುಗಳಾಗಿ ಮುಸ್ತಾಫ ಸಅದಿ,ತೌಸೀಫ್,ಆರಿಫ್, ಶಾಹಿಲ್,ಜುನೈದ್, ಆಶಿಕ್,ಸೈಫುದೀನ್ ಎಂಬವರನ್ನು ಆಯ್ಕೆ ಗೊಳಿಸಲಾಯಿತು.
















ಇನ್ನಷ್ಟು ಸುದ್ದಿಗಳು
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ