janadhvani

Kannada Online News Paper

ಯಾದಗಿರಿ : ಎಸ್ಸೆಸ್ಸೆಫ್ ರಾಜ್ಯ ನಾಯಕರ ಜಿಲ್ಲಾ ಭೇಟಿ

ಯಾದಗಿರಿ : ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ ರಾಜ್ಯ ನಾಯಕರ ಭೇಟಿ VOYAGE ಇಂದು ಯಾದಗಿರಿ ತಲುಪಿತು.
ಯಾದಗಿರಿ ಪಟ್ಟಣದ ಅಝೀಝ್ ಕಾಲೋನಿಯಲ್ಲಿ ರಾಜ್ಯ ಎಸ್ಸೆಸ್ಸೆಫ್ ಪ್ರಭಾರ ಅಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ರಾಜ್ಯ ಕಾರ್ಯದರ್ಶಿ ಮುಸ್ತಫಾ ನಈಮಿ ಹಾವೇರಿ ಉದ್ಘಾಟಿಸಿದರು.

ಜಿಲ್ಲೆಯಾದ್ಯಂತ ಸಂಘಟನೆಯನ್ನು ಬಲಿಷ್ಠಗೊಳಿಸಲು, ಪ್ರತಿ ತಾಲೂಕಿನಿಂದಲೂ ಕಾರ್ಯಕರ್ತರನ್ನು ಸಂಘಟಿಸಿ ಜಿಲ್ಲಾ ಜನರವರಿ ತಿಂಗಳಲ್ಲಿ ಜಿಲ್ಲಾ ಸಮಿತಿಯನ್ನು ಅಸ್ತಿತ್ವಕ್ಕೆ ತರಲು ಮುನೀರುದ್ದೀನ್ ನಕ್ಷಬಂದೀ, ವಲೀ ಅಹ್ಮದ್, ಮುಈನ್ ಬಾದಲ್ ನೇತೃತ್ವದಲ್ಲಿ ಒಂದು ತಂಡವನ್ನು ರಚಿಸಲಾಯಿತು.
ಮಝ್ಹರ್ ಅಹ್ಮದ್ ನೂರಿ ನಅತೇ ಶರೀಫ್ ಮೂಲಕ ಸಭೆಗೆ ಮೆರುಗು ನೀಡಿದರು.

ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಡಗು, ಕಾರ್ಯದರ್ಶಿ ಅಶ್ರಫ್ ಅಮ್ಜದಿ ಉಡುಪಿ ಕೋಶಾಧಿಕಾರಿ ರವೂಫ್ ಖಾನ್ ಕುಂದಾಪುರ, ಶರೀಫ್ ಕೊಡಗು, ಸಫ್ವಾನ್ ಚಿಕ್ಕಮಗಳೂರು, ರಫೀಕ್ ಮಾಸ್ಟರ್, ಮುನೀರ್ ಮದನಿ ಮೈಸೂರು, ಮುಬಶ್ಶಿರ್ ಅಹ್ಸನಿ, ಎಕೆ ರಝಾ ಅಮ್ಜದಿ ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com