ಮಂಗಳೂರು,ನ.6: ನಗರದ ಪುರಭವನದ ಸಮೀಪ ಇಂದು ವಿವಿಧ ಸಂಘಟನೆಗಳು ಮತ್ತು ಆಹಾರದ ಹಕ್ಕು ಸಂರಕ್ಷಣಾ ಹೋರಾಟ ಸಮಿತಿಯಿಂದ ಪ್ರತಿಭಟನಾ ಸಭೆ ನಡೆಯಿತು.
ಜನರ ಆಹಾರದ ಹಕ್ಕುಗಳನ್ನು ಸಂರಕ್ಷಿಸುವ ವಿಷಯದಲ್ಲಿ ವಿವಿಧ ಮುಖಂಡರು ಮತ್ತು ಜನಪ್ರತಿನಿಧಿಗಳು ವಿಷಯ ಮಂಡಿಸಿ ,ರಾಜ್ಯ ಸರ್ಕಾರ ಪ್ರಸ್ತುತ ಜಾರಿಗೆ ತರಲಿರುವ ಗೋ ಹತ್ಯೆ ನಿಷೇಧ ಕ್ರಮಗಳನ್ನು ವಿರೋಧಿಸಿದರು.
ಸಭೆಯಲ್ಲಿ ಆಡು, ಕುರಿ, ಕೋಳಿ,ಜಾನುವಾರು ಮತ್ತು ಮತ್ಸ್ಯ ಮಾಂಸಗಳನ್ನು ಭಕ್ಷಿಸುವ ನಮ್ಮ ಹಕ್ಕುಗಳನ್ನು ರಕ್ಷಿಸುವ ಮಹತ್ವದ ಬಗ್ಗೆ ಮಾತನಾಡಿದರು. ಆಹಾರದ ಹಕ್ಕುಗಳನ್ನು ಸಂರಕ್ಷಿಸುವ ಹೋರಾಟ ನಿರಂತರ ಮುಂದುವರಿಯಲಿದೆ ಎಂದು ಘೋಷಿಸಲಾಯಿತು.
ಪ್ರತಿಭಟನೆಯಲ್ಲಿ ಐವನ್ ಡಿ ಸೋಜಾ, ಮೊಯಿದಿನ್ ಬಾವ, ಸುನಿಲ್ ಬಜಾಲ್, ಯಾದವ ಶೆಟ್ಟಿ,ಕೆ.ಅಶ್ರಫ್(ಮಾಜಿ ಮೇಯರ್) , ಆಲಿ ಹಸನ್, ಸದಾಶಿವ ಸುಳ್ಯ ರವರು ಪಾಲ್ಗೊಂಡು ಮಾತನಾಡಿದರು.
ಎಚ್. ಬೀ ಟೀ.ಶಂಶುದೀನ್, ಕಬೀರ್ ಉಳ್ಳಾಲ್, ಮೊಹಮ್ಮದ್ ಹನೀಫ್.ಯು, ಸಮೀರ್ ಆರ್.ಕೆ, ಮೊಯಿದಿನ್ ಮೋನು, ಯಾಸೀನ್ ಕುದ್ರೋಳಿ, ಹನೀಫ್ ಉಳ್ಳಾಲ್, ಖಾದರ್, ಸತ್ತಾರ್, ರವರನ್ನೊಳ ಗೊಂಡು ಹಲವಾರು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಇನ್ನಷ್ಟು ಸುದ್ದಿಗಳು
ನಿಲುವು ಬದಲಿಸಿದ ವಾಟ್ಸಾಪ್: ಸದ್ಯಕ್ಕೆ ಗೌಪ್ಯತಾ ನೀತಿ ಬದಲಾವಣೆಯಿಲ್ಲ
ದ.ಕ.ಕಾಂಗ್ರೆಸ್: ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷರಾಗಿ ಕೆ.ಕೆ.ಸಾಹುಲ್ ಹಮೀದ್ ನೇಮಕ
ಹಿಂದೂ ದೇವತೆಗಳನ್ನು ಅಪಮಾನಿಸಿದವರಿಗೆ ಸಚಿವ ಸ್ಥಾನ- ಯತ್ನಾಳ ಫುಲ್ ಗರಂ
ವಾಟ್ಸಾಪ್ ಬಳಕೆದಾರರಿಗೆ ಸೌದಿ ಹಣಕಾಸು ಸಚಿವಾಲಯ ಎಚ್ಚರಿಕೆ
ಬಸ್ ನಲ್ಲಿ ಕಿರುಕುಳ: ಯುವತಿಯ ಪೋಸ್ಟ್ ಸಾಮಾಜಿಕ ತಾಣದಲ್ಲಿ ವೈರಲ್
ಉಜಿರೆ ಸುಳ್ಳು ಪ್ರಕರಣ:SDPI ಯಿಂದ ಮಂಗಳೂರಿನಲ್ಲಿ SP ಕಚೇರಿ ಛಲೋ,ಬೃಹತ್ ಪ್ರತಿಭಟನೆ