ಸೌದಿ ಅರೇಬಿಯಾದ: ಖಮೀಸ್ ಮುಶೈತ್, ಎಂಬಲ್ಲಿ ಕಳೆದ ಸುಮಾರು ಎರಡು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮೂಲತಃ ಹೈದರಾಬಾದ್ (ತೆಲಂಗಾಣ) ನಿವಾಸಿ #ಶೇಖ್ ಮುಹಮ್ಮದ್# ಎಂಬವರನ್ನು , ಕೆ.ಸಿ.ಎಫ್ ಸಾಂತ್ವನ ತಂಡದ ನಾಯಕರು ಸಂಪರ್ಕಿಸಿ, ಅವರಿಗೆ ಬೇಕಾಗಿರುವ ಎಲ್ಲಾ ರೀತಿಯ ಆರೋಗ್ಯ, ಸಲಹೆ, ಆರೈಕೆಯನ್ನು ಮಾಡಿ ಕೊನೆಗೂ ಊರಿಗೆ ಕಳುಹಿಸುವ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದಾರೆ.

ಈ ಒಂದು ಸಾಂತ್ವನ ಸೇವೆಗೆ ಕೆ.ಸಿ.ಎಫ್ ಖಮೀಸ್ ಮುಶೈತ್ ಸೆಕ್ಟರ್ ನಾಯಕರಾದ #ಜನಾಬ್ ಅಬ್ದುಲ್ ರಝಾಕ್ ಬನ್ನೂರ್ ಹಾಗೂ #ಸಲ್ಮಾನ್ ಚಿಕ್ಕಮಗಳೂರು, #ಖಾಲಿದ್ ಕಬಕ, #ಇಕ್ಬಾಲ್ ಮದನಿ ಪಾವೂರು, ಕೆ.ಸಿ.ಎಫ್ ಮದೀನಾ ಸಾಂತ್ವನ ವಿಭಾಗದ ನಾಯಕರಾದ #ಅಬ್ದುಲ್ ರಝಾಕ್ ಉಳ್ಳಾಲ್# ಸಹಿತವಿರುವ ತಂಡ.. ನಡೆಯಲು ಸಾಧ್ಯವಾಗದ ಶೇಖ್ ಮುಹಮ್ಮದ್ ರವರನ್ನು ನಿನ್ನೆ (10/10/2020) ರಂದು ಜಿದ್ದಾ ವಿಮಾನ ನಿಲ್ದಾಣ ಮೂಲಕ ಪ್ರತ್ಯೇಕ ಆಸನದ ಸೌಕರ್ಯವನ್ನು ಏರ್ಪಡಿಸಿ ತಾಯ್ನಾಡಿಗೆ ಕಳುಹಿಸಲು ಯಶಸ್ವಿಯಾಗಿದ್ದಾರೆ.
ಈ ಮೂಲಕ ಅನಿವಾಸಿ ಕನ್ನಡಿಗರ ಸಂಘಟನೆಯಾದ ಕೆ.ಸಿ.ಎಫ್ ನೇತೃತ್ವದಲ್ಲಿ, ಕನ್ನಡಿಗರಲ್ಲದೆ ಇತರ ರಾಜ್ಯದ ಅನಿವಾಸಿಗರಿಗೂ ತನ್ನ ಸಾಂತ್ವನ ಸೇವೆಯ ಪುಷ್ಟಿಯನ್ನು ನೀಡುತ್ತಾ ಕೆ.ಸಿ.ಎಫ್ ನ ಕಾರ್ಯಾಚರಣೆಯನ್ನು ಯಾವುದೇ ಭೇದವಿಲ್ಲದೆ ಎಲ್ಲಾ ಕಾರ್ಯಕ್ಷೇತ್ರಗಳಿಗೆ ಮೀಸಲಿಟ್ಟಿದ್ದು ಹೆಮ್ಮೆಯ ವಿಚಾರ ಎಂದು ಕೆ.ಸಿ.ಎಫ್ ಖಮೀಸ್ ಮುಶೈತ್ ಸೆಕ್ಟರ್ ಅದ್ಯಕ್ಷರಾದ #ಅಬ್ದುಲ್ ರಝಾಕ್ ಬನ್ನೂರು# ಈ ಕುರಿತು ಅಭಿಪ್ರಾಯ ಪಟ್ಟಿದ್ದಾರೆ.
ವರದಿ:
ಆಸಿಫ್ ಬದ್ಯಾರ್,















ಇನ್ನಷ್ಟು ಸುದ್ದಿಗಳು
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ