janadhvani

Kannada Online News Paper

ಅತ್ಯಾಚಾರ ಖಂಡಿಸಿ ರ್ಯಾಲಿ: ಹಾರ್ದಿಕ್ ಪಟೇಲ್, ಜಿಗ್ನೇಶ್ ಮೇವಾನಿ ಸೇರಿದಂತೆ ಹಲವರ ಬಂಧನ

ಅಹ್ಮದಾಬಾದ್,ಅ.7: ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಕೊಲೆಯಾದ ಪರಿಶಿಷ್ಟ ಜಾತಿಯ ಯುವತಿಗೆ ನ್ಯಾಯ ಕೊಡುವಂತೆ ಆಗ್ರಹಿಸಿ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಹಲವಾರು ಸಂಘಟನೆಗಳ ಸಹಕಾರದೊಂದಿಗೆ ನಡೆದ ಪ್ರತಿಕಾರ್ ರ್ಯಾಲಿಯ ನಡುವೆ ಗುಜರಾತ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಅಮಿತ್ ಚೌದ, ಕಾರ್ಯಾಧ್ಯಕ್ಷ ಹಾರ್ದಿಕ್ ಪಟೇಲ್, ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ಸೇರಿದಂತೆ ಹಲವರನ್ನು ಗುಜರಾತ್ ಪೋಲಿಸರು ಬಂಧಿಸಿದ್ದಾರೆ.

ರ್ಯಾಲಿಯ ಮೊದಲು ಅಮಿತ್ ಚೌದ ವೀಡಿಯೋ ಸಂದೇಶ ಮೂಲಕ ಜನರಲ್ಲಿ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದ್ದರು.

ಇದು ಸಂತ್ರಸ್ತೆ ಯುವತಿಗೆ ನ್ಯಾಯ ಒದಗಿಸಲಿರುವ ಹೋರಾಟ ಹಾಗೂ ಸಂಪೂರ್ಣವಾಗಿ ರಾಜಕೀಯೇತರ ರ್ಯಾಲಿಯಾಗಿದೆ. ಹಲವಾರು ಸಂಘಟನೆಗಳು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಹಾರ್ದಿಕ್ ಪಟೇಲ್ ರವರು ಹೇಳಿದ್ದಾರೆ.

error: Content is protected !! Not allowed copy content from janadhvani.com