151ನೇ ಗಾಂಧಿ ಜಯಂತಿ ಪ್ರಯುಕ್ತ SSF ಚಿಕ್ಕಮಗಳೂರು ಜಿಲ್ಲಾ ಬ್ಲಡ್ ಸೈಬೊ ಇದರ ನಾಲ್ಕನೇ ರಕ್ತದಾನ ಶಿಬಿರವು ಕುದುರೆಗುಂಡಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.ಸ್ವಾಗತ ಭಾಷಣವನ್ನು ಜಿಲ್ಲಾ ನಾಯಕರಾದ ಶರೀಫ್ ಅವರು ನಡೆಸಿದರು.
SSF ಚಿಕ್ಕಮಗಳೂರು ಜಿಲ್ಲಾ ಅಧ್ಯಕ್ಷರು ಸಫ್ವಾನ್ ಸಖಾಫಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ “ಅಹಿಂಸೆಯ ಮೂಲಕ ರಕ್ತದೋಕುಳಿಯನ್ನು ನಿಲ್ಲಿಸಿದ ಮಹಾತ್ಮ ಗಾಂಧಿಜೀಯ ಹೆಸರಿನಲ್ಲಿ ಒಂದು ಜೀವ ಉಳಿಸಲು ದಾನಿಗಳು ರಕ್ತವನ್ನು ನೀಡಿ ಇನ್ನೊಂದು ಜೀವಕ್ಕೆ ಆಸರೆಯಾಗುತ್ತಿರುವುದು ಮಹತ್ತರವಾದ ಕಾರ್ಯವಾಗಿದೆ. ನಮ್ಮ ಜಿಲ್ಲೆಯಲ್ಲಿ ರಕ್ತದ ಕೊರತೆಯನ್ನು ನೀಗಿಸಲು ಜಿಲ್ಲಾ ಮಟ್ಟದಲ್ಲಿ ಪ್ರತಿ ತಾಲ್ಲೂಕಿನಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದೇವೆ ಎಂದರು.ಕುದುರೆಗುಂಡಿ ಬದ್ರೀಯಾ ಜುಮ್ಮಾ ಮಸ್ಜಿದ್ ಖತೀಬರು ನೌಫಲ್ ಹಿಮಮಿ ಅಲ್ ಹಾದಿ ಅವರು ರಕ್ತದಾನದ ಮಹತ್ವವನ್ನು ವಿವರಿಸಿದರು.
ಪ್ರಸ್ತುತ ಕಾರ್ಯಕ್ರಮದಲ್ಲಿ SSF ಕೊಪ್ಪ ಡಿವಿಷನ್ ಬ್ಲಡ್ ಸೈಬೋ ಕೋ ಆರ್ಡಿನೇಟರ್ ಶಮೀಮ್. SSF ಕೊಪ್ಪ ಡಿವಿಷನ್ ಅಧ್ಯಕ್ಷರು ಯಾಸೀನ್. ಜೆ.ಸಿ.ಐ ನಿಕಟಪೂರ್ವ ಅಧ್ಯಕ್ಷರು ಹೇಮಂತ್ ಶೆಟ್ಟಿ, ಕುದುರೆಗುಂಡಿ ಆಟೋ ಚಾಲಕರು ಮತ್ತು ಮಾಲೀಕರ ಸಂಘ ಅಧ್ಯಕ್ಷರು ಕೆ.ಬಿ ಕೃಷ್ಣ, ಕುದುರೆಗುಂಡಿ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಮಂಜುನಾಥ್ ನುಗ್ಗಿ, ತೀರ್ಥಹಳ್ಳಿ ರೋಟರಿ ಐ.ಎಮ್.ಎ ಅಧ್ಯಕ್ಷರು ಡಾ.ಕೃಷ್ಣ ಭಟ್, ತೀರ್ಥಹಳ್ಳಿ ರೋಟರಿ ಐ.ಎಮ್.ಎ ಪಿ.ಆರ್.ಓ ಕೆಪಿಎಸ್ ಸ್ವಾಮಿ, ಎಸ್.ಡಿ.ಎಮ್.ಸಿ ಅಧ್ಯಕ್ಷರು ಮಂಜುನಾಥ್, ಜಿಲ್ಲಾ ನಾಯಕರಾಗಿರುವ ಸುಲೈಮಾನ್, ಅಬ್ದುಲ್ ರೆಹಮಾನ್, ಸಲೀಮ್, ಇರ್ಫಾನ್, ಆರೀಫ್, ಉಪಸ್ಥಿತರಿದ್ದರು.
ಕುದುರೆಗುಂಡಿಯಲ್ಲಿ ಅತೀ ಹೆಚ್ಚು ಬಾರಿ ರಕ್ತದಾನ ಮಾಡಿದಂತಹ ಗಣೇಶ್ ಹೋಟೆಲ್ ಹಾಗೂ ಹೇಮಂತ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು ಹಾಗೂ ರಕ್ತದಾನ ಮಾಡಿದ ದಾನಿಗಳಿಗೆ ಸಸಿ ವಿತರಿಸುವುದರ ಮೂಲಕ ಪರಿಸರ ರಕ್ಷಣೆಯ ಬಗ್ಗೆ ಕಾಳಜಿ ಮೂಡಿಸಲಾಯಿತು.
ಈ ಕಾರ್ಯಕ್ರಮದಲ್ಲಿ 47 ಯೂನಿಟ್ ಬ್ಲಡ್ ಸಂಗ್ರಹವಾಗಿದೆ. SSF ಚಿಕ್ಕಮಗಳೂರು ಜಿಲ್ಲಾ ಬ್ಲಡ್ ಸೈಬೋ ಇದರ ಐದನೇ ರಕ್ತದಾನ ಶಿಬಿರ ಕನ್ನಡ ರಾಜ್ಯೋತ್ಸವದಂದು ಮೂಡಿಗೆರೆ ಡಿವಿಷನ್ ವ್ಯಾಪ್ತಿಯಲ್ಲಿ ನಡೆಸಲಾಗುವುದೆಂದು ಜಿಲ್ಲಾ ಕಾರ್ಯದರ್ಶಿ ಶರಫುದ್ದೀನ್ ಕುದುರೆಗುಂಡಿ ಅವರು ತಿಳಿಸಿದರು.















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ