janadhvani

Kannada Online News Paper

ಬೆಳ್ತಂಗಡಿ ತಾಲೂಕಿನ ವಿವಿಧ ಕಡೆ SDPI ವತಿಯಿಂದ ಪ್ರತಿಭಟನೆ

ಬೆಳ್ತಂಗಡಿ ಸೆ.25: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವತಿಯಿಂದ ಕೇಂದ್ರ ಹಾಗೂ ರಾಜ್ಯ ಸರಕಾರ ಜಾರಿಗೆ ತಂದಿರುವ ರೈತ ವಿರೋಧಿ ಸುಗ್ರಿವಾಜ್ಞೆ ವಿರುದ್ಧ ಪ್ರತಿಭಟನೆಯನ್ನು ತಾಲೂಕಿನ ಇಪ್ಪತ್ತೆರಡು ಗ್ರಾಮ ಪಂಚಾಯತ್ ಮುಂಬಾಗದಲ್ಲಿ ನಡೆಸಲಾಯಿತು.

ಇತ್ತೀಚೆಗೆ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರವು ದೇಶದ ಬೆನ್ನೆಲುಬಾಗಿರುವ ಕೃಷಿ ಕ್ಷೇತ್ರವನ್ನು ಬಂಡವಾಳಶಾಹಿಗಳಿಗೆ ನೀಡುವ ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿ, ರೈತವಿರೋಧಿ ಕಾಯ್ದೆ, ಎಪಿಎಂಸಿ ಕಾಯ್ದೆಯ ತಿದ್ದಪಡಿ ಮತ್ತು ಕಾರ್ಮಿಕ ವಿರೋಧಿ ಕಾಯ್ದೆಯ ತಿದ್ದುಪಡಿಗಳನ್ನು ನಡೆಸಿ ಜನವಿರೋಧಿ ಆಡಳಿತವನ್ನು ನಡೆಸುತ್ತಿದೆ. ಇದನ್ನು ವಿರೋಧಿಸಿ ರಾಜ್ಯಾದ್ಯಂತ ಹೋರಾಟ ಪ್ರತಿಭಟನೆಗಳು ನಡೆಯುತ್ತಿದ್ದು ಅದರ ಭಾಗವಾಗಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ವತಿಯಿಂದ ಬೆಳ್ತಂಗಡಿ ಆಸೆಂಬ್ಲಿ, ಮಚ್ಚಿನ, ಪಾರೆಂಕಿ, ಕುಕ್ಕಲ, ಸುನ್ನತ್ ಕೆರೆ, ಚಾರ್ಮಾಡಿ, ಲಾಯಿಲ, ಧರ್ಮಸ್ಥಳ, ಪುದುಬೆಟ್ಟು, ಮಲವಂತಿಗೆ, ಮಡಂತ್ಯಾರ್, ಇಂದಬೆಟ್ಟು, ನೆರಿಯಾ, ಇಳಂತಿಲ, ತಣ್ಣೀರುಪಂತ, ತೆಕ್ಕಾರು, ಮಿತ್ತಾಬಾಗಿಲು, ಕುವೆಟ್ಟು, ಬಾರ್ಯ, ಪಡಂಗಡಿ ಮುಂತಾದ ಪಂಚಾಯತ್ ಮುಂಭಾಗದಲ್ಲಿ ಪ್ರತಿಭಟನೆಯನ್ನು ಮಾಡಲಾಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ SDPI ಮುಖಂಡರು ರೈತರಿಗೆ ಆದಂತಹ ಅನ್ಯಾಯದ ವಿರುದ್ಧ ಧ್ವನಿಯನ್ನು ಎತ್ತಿದರು ಮತ್ತು ಕೆಲವು ಕಡೆ ಘೋಷಣೆಗಳನ್ನು ಕೂಗಿದರು.

error: Content is protected !! Not allowed copy content from janadhvani.com