janadhvani

Kannada Online News Paper

ಬೆಳ್ತಂಗಡಿ : ಎಸ್ಸೆಸ್ಸೆಫ್ ಗುರುವಾಯನಕೆರೆ ಸೆಕ್ಟರ್ ವತಿಯಿಂದ, 74 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಇದರ ಸಹಯೋಗದೊಂದಿಗೆ ಎಸ್ಸೆಸ್ಸೆಫ್ ದ ಕ ಜಿಲ್ಲಾ ಬ್ಲಡ್ ಸೈಬೋ ಇದರ 171 ನೇ ಬೃಹತ್ ರಕ್ತದಾನ ಶಿಬಿರ ಹಾಗೂ ಅನುಗ್ರಹ ಜನಸೇವಾ ಕೇಂದ್ರ ಬೆಳ್ತಂಗಡಿ ಇದರ ಸಹಯೋಗದೊಂದಿಗೆ ಅಯುಷ್ಮಾನ್ ಕಾರ್ಡ್ ಅಭಿಯಾನ ಮತ್ತು ಸರಕಾರಿ ಯೋಜನೆಗಳ ಮಾಹಿತಿ ಮತ್ತು ಸೇವೆಯು ಇದೇ ಬರುವ ಆಗಸ್ಟ್ 16 – 2020 ರಂದು ಮನ್ಶರ್ ಕ್ಯಾಂಪಸ್ ಗೇರುಕಟ್ಟೆಯಲ್ಲಿ ನಡೆಯಲಿದೆ.

ಮನ್ಶರ್ ಸಂಸ್ಥೆಯ ಸಾರಥಿ ಎಸ್ಸೆಸ್ಸಫ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಅಸಯ್ಯಿದ್ ಸಿ‌ಟಿಎಂ ಉಮರ್ ಅಸ್ಸಖಾಫ್ ತಂಙಳ್ ಉದ್ಘಾಟನೆ ಮಾಡುವ ಮೂಲಕ ಚಾಲನೆಗೊಳ್ಳುವ ಪ್ರಸ್ತುತ ಕಾರ್ಯಕ್ರಮಕ್ಕೆ ಎಸ್ಸೆಸ್ಸಫ್ ಜಿಲ್ಲಾ, ಝೋನ್, ಡಿವಿಶನ್ ಸಂಘಟನಾ ನಾಯಕರು , ಸಾಮಾಜಿಕ , ಧಾರ್ಮಿಕ , ರಾಜಕೀಯ ನೇತಾರರು ಭಾಗವಹಿಸಲಿದ್ದಾರೆ.

ಲಾಕ್ ಡೌನ್ ಸಮಸ್ಯೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಕ್ತದ ಕೊರತೆಯನ್ನು ನೀಗಿಸುವ ಉದ್ದೇಶದಿಂದ ಎಲ್ಲರೂ ಸ್ವಯಂ ಪ್ರೇರಿತರಾಗಿ ಬಂದು ರಕ್ತದಾನ ಮಾಡುವುದರ ಮೂಲಕ ಹನಿ ರಕ್ತಕ್ಕಾಗಿ ಅಂಗಲಾಚಿಸುವವರಿಗೆ ಆಸರೆಯಾಗುವ ಈ ಕಾರ್ಯಕ್ರಮವನ್ನು ಯಶಸ್ವೀ ಗೊಳಿಸಬೇಕಾಗಿ ಎಸ್ಸೆಸ್ಸೆಫ್ ಗುರುವಾಯನಕೆರೆ ಸೆಕ್ಟರ್ ಅಧ್ಯಕ್ಷರಾದ ಬಹು ಜಮಾಲ್ ಮದನಿ ಉಸ್ತಾದ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ : ನಾಸಿರ್ ಎನ್ ಜಾರಿಗೆಬೈಲ್

error: Content is protected !!
%d bloggers like this: