ಮಂಗಳೂರು : SSF ಕರ್ನಾಟಕ ರಾಜ್ಯ HELP DESK ಇದರ ನಿರ್ದೇಶನದಂತೆ ಪ್ರಾಕೃತಿಕ ವಿಕೋಪ ನೆರೆ ಸಂಧರ್ಭಗಳಲ್ಲಿ ತುರ್ತಾಗಿ ಕಾರ್ಯಾಚರಿಸಲು SSF ದ.ಕ. ವೆಸ್ಟ್ ಝೋನ್ ವ್ಯಾಪ್ತಿಯ ಆರು ಡಿವಿಷನ್‌ಗಳಲ್ಲಿ 600 ಕ್ಕೂ ಮಿಕ್ಕ ಕ್ಯೂ ಟೀಮ್ ತುರ್ತು ಸೇವಾ ತಂಡ ಸನ್ನದ್ದವಾಗಿದೆ ಎಂದು ಕ್ಯೂ ಟೀಮ್ ಝೋನಲ್ ಅಡ್ಮಿನ್ ಅಕ್ಬರ್ ಅಲಿ ಮದನಿ ತಿಳಿಸಿದ್ದಾರೆ.
SSF ಕರ್ನಾಟಕ ರಾಜ್ಯ ಸಮಿತಿಯ ನಿರ್ದೇಶನದಂತೆ ಝೋನ್ ವ್ಯಾಪ್ತಿಯ ಪ್ರತೀ ಆರು ಡಿವಿಷನ್ ಕೇಂದ್ರಗಳಲ್ಲಿ ಸದಾ ಸಮಯ ತುರ್ತು ಸೇವೆಗೆ ಸನ್ನದ್ದರಾಗಿರುವ ಸಕ್ರಿಯ ಕಾರ್ಯಕರ್ತರ ತುರ್ತು ಸೇವಾ ತಂಡ ರಚಿಸಲಾಗಿದ್ದು ಯಾವುದೇ ಸಂಧರ್ಭದಲ್ಲೂ ತಕ್ಷಣ ಕಾರ್ಯಾಚರಣೆಗೆ ಇಳಿಯಲು ಸಿದ್ದರಾಗಿದ್ದಾರೆ. SSF ದ.ಕ.ವೆಸ್ಟ್ ಝೋನ್ ವ್ಯಾಪ್ತಿಯ ಉಳ್ಳಾಲ, ಮುಡಿಪು, ಬಂಟ್ವಾಳ, ಮಂಗಳೂರು,ಸುರತ್ಕಲ್ ಹಾಗೂ ಮೂಡಬಿದ್ರೆ ಡಿವಿಷನ್‌ಗಳಲ್ಲಿ ಕ್ಯೂ ಟೀಮ್ ತಂಡ ಸಿದ್ದವಾಗಿದೆ ಎಂದು ಅವರು ತಿಳಿಸಿದರು.
ತುರ್ತು ಸಹಾಯಕ್ಕಾಗಿ ಈ ಕೆಳಗಿನ ನಂಬರ್‌ಗಳನ್ನು ಸಂಪರ್ಕಿಸಬಹುದಾಗಿದೆ.
ವೆಸ್ಟ್ ಝೋನ್
8970831914
7899129784
9663360112
ಡಿವಿಶನ್ ಕಂಟ್ರೋಲ್ ಗಳ ಸಂಪರ್ಕ ನಂಬರ್ ಗಳು
*ಉಳ್ಳಾಲ*=9353833532
*ಮುಡಿಪು*=9901492004
*ಬಂಟ್ವಾಳ*=9880149982
*ಮಂಗಳೂರು*=7676603162
*ಮೂಡಬಿದ್ರೆ*=9980459081
*ಸುರತ್ಕಲ್*=9449089303