ಬೈರೂತ್,ಆ.04; ಲೆಬನಾನ್ ರಾಜಧಾನಿ ಬೈರುತ್ ನಗರದ ಬಂದರು ಪ್ರದೇಶದಲ್ಲಿ ಇಂದು ಸಂಭವಿಸಿರುವ ಭಾರೀ ಸ್ಟೋಟದಿಂದಾಗಿ 10 ಕ್ಕೂ ಮಿಕ್ಕ ಮಂದಿ ಮೃತಪಟ್ಟು ನೂರಾರು ಜನ ಗಾಯಗೊಂಡಿದ್ದಾರೆ ಎಂದು ಆ ದೇಶದ ಆರೋಗ್ಯ ಸಚಿವ ಹಮದ್ ಹಸನ್ ತಿಳಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ಯುದ್ಧಭೂಮಿಯಂತಾಗಿರುವ ಲೆಬನಾನ್‌ನಲ್ಲಿ ಕಳೆದ ಕೆಲ ದಿನಗಳಿಂದ ಗುಂಡಿನ ಮೊರೆತ ನಿಶ್ಯಬ್ಧತೆಯನ್ನು ತಬ್ಬಿತ್ತು. ಆದರೆ, ಇಂದು ಬೈರುತ್ ನಗರದ ಬಂದರಿನಲ್ಲಿ ಸಂಭವಿಸಿರುವ ಭಾರೀ ಸ್ಪೋಟವು ಲೆಬನಾನ್‌ನಲ್ಲಿ ಮತ್ತೆ ಆಘಾತದ ತರಂಗಗಳನ್ನು ಎಬ್ಬಿಸಿವೆ. ಈ ಸ್ಪೋಟದಲ್ಲಿ ಹಲವಾರು ಮನೆಗಳು ಹಾನಿಗೊಳಗಾಗಿವೆ ಎಂದು ವರದಿಯಾಗಿದೆ.
ಆದರೆ, ಸ್ಪೋಟದ ರುವಾರಿ ಯಾರು? ಮತ್ತು ಈ ಸ್ಪೋಟಕ್ಕೆ ಕಾರಣ ಏನು? ಎಂಬ ಕುರಿತು ಈವರೆಗೆ ತಿಳಿದುಬಂದಿಲ್ಲ ಎಂದು ಲೆಬನಾನ್ ಸರ್ಕಾರದ ಅಧಿಕಾರಿಗಳು ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಸ್ಪೋಟದ ವಿಡಿಯೋ, ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ದೃಶ್ಯದಲ್ಲಿ ಸ್ಪೋಟ ಸಂಭವಿಸಿದ ತಕ್ಷಣ ಕಿತ್ತಳೆ ಬಣ್ಣದಲ್ಲಿ ಗೋಪುರ ಆಕಾರದಲ್ಲಿ ಹೊಗೆ ಆಕಾಶದ ಎತ್ತರಕ್ಕೆ ಹಾರಿದೆ. ಅಲ್ಲದೆ, ಶಬ್ಧದ ತೀವ್ರತೆ ದೊಡ್ಡ ತರಂಗಗಳನ್ನು ಸೃಷ್ಟಿಸಿದೆ. ಪರಿಣಾಮ ಬಂದರು ಪ್ರದೇಶದಲ್ಲಿದ್ದ ಗೋದಾಮುಗಳು ಕಿಟಕಿ ಗಾಜುಗಳು ಮತ್ತು ಬಾಗಿಲುಗಳು ಹಾನಿಗೊಳಗಾಗಿವೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.















ಇನ್ನಷ್ಟು ಸುದ್ದಿಗಳು
ಇರಾನ್ ಮೇಲೆ ಮತ್ತೆ ಯುಎಸ್ ದಾಳಿ; ಬಂದರ್ ಅಬ್ಬಾಸ್ ಸೇರಿದಂತೆ ವಿವಿಧ ಕೇಂದ್ರಗಳಲ್ಲಿ ಬಾಂಬ್ ದಾಳಿ
ಇರಾಕ್ನಲ್ಲೂ ಖಾಮ್ನಈ ಅಂತ್ಯಕ್ರಿಯೆ ವಿಧಿವಿಧಾನಗಳು; ನಜಫ್ನತ್ತ ಹರಿದುಬಂದ ಜನಸಾಗರ
ವಿಕಾಸದ ಕೂಗಿನೊಂದಿಗೆ ಇತ್ತಿಹಾದ್ ರೈಲು; ಟಿಕೆಟ್ ದರ ಮತ್ತು ರಿಯಾಯಿತಿಗಳ ಘೋಷಣೆ
ಯುಎಇ: ಮುಂದುವರಿದ ಭಾರತೀಯ ಪಾಸ್ಪೋರ್ಟ್ ಸೇವಾ ಬಿಕ್ಕಟ್ಟು
ಇತ್ತಿಹಾದ್ ರೈಲಿಗೆ ಐತಿಹಾಸಿಕ ಕ್ಷಣ; ಭವ್ಯ ಆರಂಭಕ್ಕೆ ಯುಎಇನಲ್ಲಿ ಅಭೂತಪೂರ್ವ ಜನಸ್ಪಂದನ
ವಲಸಿಗರಿಗೆ ಶುಭ ಸುದ್ದಿ: ಸೌದಿ ವರ್ಕ್ ಪರ್ಮಿಟ್ ಸ್ಥಿತಿ ಸರಿಪಡಿಸಿಕೊಳ್ಳುವ ಗಡುವು ವಿಸ್ತರಣೆ
‘ಅವನು ಬದುಕಿದ್ದರೆ ನಾನು ಕೂಡ ಬದುಕುತ್ತೇನೆ’; ಭೂಕಂಪದ ಅವಶೇಷಗಳ ನಡುವೆ ಮರಣವನ್ನೇ ಗೆದ್ದು ಬಂದ ತಾಯಿ ಮತ್ತು 18 ದಿನದ ಮಗು!
ದಾಳಿಗಳು ಮುಂದುವರಿದರೆ ‘ನರಕಸದೃಶ’ ತಿರುಗೇಟು ನೀಡಲಾಗುವುದು- ಇರಾನ್ ಎಚ್ಚರಿಕೆ
ಮತ್ತೆ ಯುದ್ಧವೇ? – ಎರಡನೇ ದಿನವೂ ಇರಾನ್ ಮೇಲೆ ಯುಎಸ್ ದಾಳಿ
ಬಹ್ರೇನ್ ಮೇಲೆ ಇರಾನ್ ಡ್ರೋನ್ ದಾಳಿ: ಸೌದಿ ಅರೇಬಿಯಾ ತೀವ್ರ ಖಂಡನೆ- ಪೂರ್ಣ ಬೆಂಬಲ ಘೋಷಣೆ