janadhvani

Kannada Online News Paper

ತ್ವೈಬಾ ಎಜ್ಯುಕೇಶನ್ ಸೆಂಟರ್ ಈಶ್ವರಮಂಗಲ: ಯುಎಇ ಸಮಿತಿಗೆ ನೂತನ ಸಾರಥ್ಯ

ಈಶ್ವರಮಂಗಲ: ತ್ವೈಬಾ ಸೆಂಟರ್ ಈಶ್ವರಮಂಗಲ ಜಿಸಿಸಿ ಈದ್ ಸ್ನೇಹ ಸಂಗಮವು 31/07 /20 ರಂದು ಸಂಜೆ 5 ಗಂಟೆಗೆ ಆನ್ಲೈನ್ ಮೂಲಕ ನಡೆಯಿತು.ಬಹು ಹಂಝ ಮುಸ್ಲಿಯಾರ್ ರವರ ದುವಾದೊಂದಿಗೆ ಪ್ರಾರಂಭವಾದ ಸಭೆಯನ್ನು ಕೆಎಚ್ಚ್ ಮುಹಮ್ಮದ್ ಕುಂಞ್ಞಿ ಸಖಾಫಿ ಅಬುಧಾಬಿ ಉದ್ಘಾಟಿಸಿದರು.

ಸಭೆಯ ಅಧ್ಯಕ್ಷರಾದ ಅಬ್ದುಲ್ ಹಮೀದ್ ಸಅದಿ ಮಾತನಾಡಿ ಸಂಘಟನೆಯಲ್ಲಿ ಸಕ್ರಿಯವಾಗಿ ದುಡಿದವರಿಗೆ ಸಿಗುವ ಪ್ರತಿಫಲವನ್ನು ಸವಿಸ್ತಾರವಾಗಿ ವಿವರಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬಾಗವಹಿಸಿದ ಸಯ್ಯಿದ್ ಝೈನುಲ್ ಆಬಿದೀನ್ ಮುತ್ತು ಕೋಯ ತಂಙಳ್ ಕಣ್ಣವಂ ರವರು ಸಂಸ್ಥೆಯ ಅನಿವಾರ್ಯತೆಯನ್ನು ಮನ ದಟ್ಟುವ ರೀತಿಯಲ್ಲಿ ವಿವರಿಸಿ ದುಆ ಆಶೀರ್ವಚನ ನೀಡಿದರು.

ಅಬ್ದುಲ್ ಅಝೀಝ್ ಮಿಸ್ಬಾಹಿ, ಕೆಎಚ್ಚ್ ಮುಹಮ್ಮದ್ ಕುಂಞ್ಞಿ ಫೈಝಿ,ಸಲಾಂ ಎಣ್ಮೂರ್, ತಾಜುದ್ದೀನ್, ಶರೀಫ್ ಜಿಕೆ, ಸುಹೈಲ್ ಮದನಿ, ಅಬೂಬಕರ್ ಕೆಜಿ, ಮಜೇದ್ ಬಿಲಾಲ್, ರಶೀದ್ ಬಿಲಾಲ್ ಭಾಷಣ ಮಾಡಿದರು.

ಯುಎಇ ರಾಷ್ಟ್ರೀಯ ಸಮಿತಿಗೆ ಈ ಕೆಳಗಿನಂತೆ ನೂತನ ಸಾರಥಿಗಳನ್ನು ಆರಿಸಲಾಯಿತು.

ಅಧ್ಯಕ್ಷರಾಗಿ ಮುಹಮ್ಮದ್ ಕುಂಞ್ಞಿ ಸಖಾಫಿ, ಪ್ರಧಾನ ಕಾರ್ಯದರ್ಶಿ: ಸಹೈಲ್ ಮದನಿ, ಫೈನಾನ್ಶಿಯಲ್ ಸೆಕ್ರೆಟರಿ: ಆದಂ ಕುಂಞ್ಞಿ ಕೆ ಪಿ, ಓರ್ಗನೈಸಿಂಗ್ ಸೆಕ್ರೆಟರಿ ಎಂ ಎ ಮುಹಮ್ಮದ್ ಕುಂಞ್ಞಿ,

ಉಪಾಧ್ಯಕ್ಷರುಗಳು: ಅಬೂಬಕರ್ ಕಜೆ ಮತ್ತು ತಾಜುದ್ದೀನ್ ಎಬಿ, ಕಾರ್ಯದರ್ಶಿಗಳಾಗಿ: ಅಶ್ರಫ್ ಕೆಎಂ ಮತ್ತು ಉವೈಸ್ ಬಿಸಿ ಹಾಗೂ ಸದಸ್ಯರುಗಳಾಗಿ ರಶೀದ್ ಬಿಲಾಲ್ ಅಬ್ದುಲ್ ಲತೀಫ್ ಕನ್ನಡ್ಕ ಮತ್ತು ಹಬೀಬ್ ಕೆಪಿ ರವರನ್ನು ಆರಿಸಲಾಯಿತು.
ಎಂಎ ಮುಹಮ್ಮದ್ ಕುಂಞ್ಞಿ ಸ್ವಾಗತಿಸಿ ಸುಹೈಲ್ ಮದನಿ ವಂದಿಸಿದರು.

error: Content is protected !! Not allowed copy content from janadhvani.com