janadhvani

Kannada Online News Paper

ಪುತ್ತೂರು: ವಿಶ್ವವ್ಯಾಪಕ ಆವರಿಸಿಕೊಂಡರುವ ಕೊವಿಡ್ 19 ನಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.ಪ್ರತಿ ಊರಿನಲ್ಲೂ ಇದರ ಪರಿಣಾಮ ಬೀರಿದೆ, ಇದರಿಂದಾಗಿ ಮದರಸದಲ್ಲಿ ಸೇವೆ ಗಯ್ಯುತ್ತಿದ್ದ ಮುಅಲ್ಲಿಂ ಸಹೋದರರಿಗೂ ಕೆಲಸವಿಲ್ಲದೇ ದಿಕ್ಕುತೋಚದಂತಾಗಿದ್ದು, ಈ ಬಡ ಮುಅಲ್ಲಿಂ ಸಹೋದರರಿಗೆ ಈದ್ ಕಿಟ್ ವಿತರಿಸಲಾಯಿತು.

ಎಸ್.ವೈ.ಎಸ್.ಈಶ್ವರಮಂಗಳ ಸೆಂಟರ್ ಹಾಗೂ ತ್ವೈಭಾ ಎಜುಕೇಶನ್ ಸೆಂಟರ್ ಯು.ಎ.ಇ.ಸಮಿತಿಯ ವತಿಯಿಂದ ಇಂದು ತ್ವೈಬ ಎಜುಕೇಶನ್ ಸೆಂಟರ್ ನಲ್ಲಿ ಈದ್ ಕಿಟ್ ವಿತರಣಾ ಕಾರ್ಯಕ್ರಮ ನಡೆಯಿತು. ಪ್ರಸುತ ಕಾರ್ಯಕ್ರಮದಲ್ಲಿ ಲತೀಫ್ ಸಖಾಫಿ ಮಾಡನ್ನೂರು ದುವಾಶಿರ್ವಚನ ಮಾಡಿದರು.

ಅಬ್ದುಲ್ಲ ಅಹ್ಸನಿ ಜಗದೊಡೆಯನ ನಾಮದಿಂದ ಕಾರ್ಯಕ್ರಮ ಉದ್ಘಾಟಿಸಿದರು.ಅಬ್ದುಲ್ ಅಝೀಝ್ ಮಿಸ್ಬಾಹಿ ಅಧ್ಯಕ್ಷತೆ ವಹಿಸಿದರು. ಅಬ್ದುಲ್ ಲತೀಫ್ ಮುಸ್ಲಿಯಾರ್, ಅಶ್ರಫ್ ಸಅದಿ, ಸ್ವಾಲಿಹ್ ಸಖಾಫಿ, ಹಸೈನಾರ್ ಇಂದಾದಿ, ತ್ವಾಹ ಸಅದಿ, ಇಸ್ಮಾಯಿಲ್ ಕೆ.ಹೆಚ್, ಅಬ್ಬಾಸ್ ರೋಯಲ್, ಅಬೂಬಕ್ಕರ್ ಸಿ.ಎಂ. ಉಪಸ್ಥಿತರಿದ್ದರು. ಉಮರ್ ಸಅದಿ ಸ್ವಾಗತಿಸಿ ವಂದಿಸಿದರು.

error: Content is protected !! Not allowed copy content from janadhvani.com