janadhvani

Kannada Online News Paper

ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ತಡೆಗಟ್ಟುವಿಕೆಗಾಗಿ, ವಿಶ್ವದ ಎಲ್ಲಾ ದೇಶಗಳು ಲಸಿಕೆಗಳನ್ನು ತಯಾರಿಸುವಲ್ಲಿ ನಿರತವಾಗಿವೆ.ಪರೀಕ್ಷೆಗಾಗಿ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಭಾರತದ ವಿಜ್ಞಾನಿಗಳು ಕೇವಲ 30 ಸೆಕೆಂಡುಗಳಲ್ಲಿ ಕರೋನಾವನ್ನು ಪರೀಕ್ಷಿಸಬಲ್ಲ ಕಿಟ್ ವಿನ್ಯಾಸದಲ್ಲಿ ನಿರತರಾಗಿದ್ದಾರೆ ಮತ್ತು ಈ ಕಿಟ್ ಇದುವರೆಗಿನ ಎಲ್ಲಾ ಕಿಟ್‌ಗಳಿಗಿಂತ ಅಗ್ಗದ ದರದಲ್ಲಿ ಲಭಿಸಲಿದೆ ಎನ್ನಲಾಗಿದೆ. ಈ ಕಿಟ್ ಅಭಿವೃದ್ಧಿಪಡಿಸಲು ಭಾರತ ಹಾಗೂ ಇಸ್ರೇಲ್ ವಿಜ್ಞಾನಿಗಳು ಜಂಟಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಇಸ್ರೇಲ್ ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಪ್ರಯತ್ನದ ಭಾಗವಾಗಿ ಭಾರತಕ್ಕೆ ಸಂಶೋಧನಾ ತಂಡವನ್ನು ಕಳುಹಿಸಲಾಗುವುದು. ಈ ತಂಡವು ಭಾರತೀಯ ವಿಜ್ಞಾನಿಗಳೊಂದಿಗೆ ರೋಗವನ್ನು ಪರೀಕ್ಷಿಸಲು ತ್ವರಿತ ಪರೀಕ್ಷಾ ಕಿಟ್ ತಯಾರಿಸಲು ಕೆಲಸ ಮಾಡಲಿದೆ ಎಂದಿದೆ. ಈ ಕಿಟ್ ಕೇವಲ 30 ಸೆಕೆಂಡುಗಳಲ್ಲಿ ಫಲಿತಾಂಶಗಳನ್ನು ನೀಡಲಿದೆ ಎಂದು ಇಸ್ರೇಲ್ ಹೇಳಿದೆ.

ಇದಕ್ಕಾಗಿ ಟೆಲ್ ಅವೀವ್‌ನಿಂದ ವಿಶೇಷ ವಿಮಾನವೊಂದು ನವದೆಹಲಿಗೆ ತಲುಪಲಿದೆ. ಈ ವಿಮಾನದ ಮೂಲಕ ಕೇವಲ 30 ಸೆಕೆಂಡುಗಳಲ್ಲಿ ಕೋವಿಡ್ -19 ಪತ್ತೆ ಪರೀಕ್ಷಾ ಕಿಟ್ ಅನ್ನು ಅಭಿವೃದ್ಧಿಪಡಿಸಲು ಇಸ್ರೇಲ್ ರಕ್ಷಣಾ ಸಚಿವಾಲಯದ ಸಂಶೋಧನೆ ಮತ್ತು ಅಭಿವೃದ್ಧಿ ತಂಡವು ಬರಲಿದೆ, ಕೆ.ಕೆ. ವಿಜಯ್ ರಾಘವನ್ ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ನೊಂದಿಗೆ ಕೆಲಸ ಮಾಡುತ್ತಿದ್ದಾರೆ.

ಈ ವಿಶೇಷ ವಿಮಾನದಲ್ಲಿ ಮೆಕ್ಯಾನಿಕಲ್ ವೆಂಟಿಲೇಟರ್ ಗಳೂ ಕೂಡ ಬರಲಿದ್ದು, ಇವುಗಳನ್ನು ಭಾರತಕ್ಕೆ ರಫ್ತು ಮಾಡಲು ಇಸ್ರೇಲ್ ಸರ್ಕಾರ ಈಗಾಗಲೇ ಅನುಮತಿ ನೀಡಿದೆ. ಭಾರತೀಯ ಮಾರುಕಟ್ಟೆಯಲ್ಲಿ ಈ ಕಿಟ್‌ನ ಅಭಿವೃದ್ಧಿ ಮತ್ತು ಉತ್ಪಾದನೆಗಾಗಿ ಅತಿ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಪ್ರಮಾಣದ ಉತ್ಪಾದನೆಯನ್ನು ನಡೆಸಲು ಇಸ್ರೇಲ್ ತನ್ನ ತಂತ್ರಜ್ಞಾನ ಉಪಯೋಗಿಸಲಿದೆ.

error: Content is protected !!
%d bloggers like this: