ಪುತ್ತೂರು: ಕೊವೀಡ್-19 ನಿಂದಾಗಿ ಸಾಕಷ್ಟು ಮಂದಿಯ ಜೀವನವೇ ತತ್ತರಿಸಿ ಹೋಗಿದೆ. ಪ್ರಸ್ತುತ ಸಂಸದನಿಂದ ಬಡವನವರೆಗೂ ಸೋಂಕು ಅತೀ ವೇಗವಾಗಿ ವ್ಯಾಪಿಸಿ ದೇಶಾದ್ಯಂತ ಮತ್ತಷ್ಟು ತಲ್ಲಣವನ್ನೇ ಸೃಷ್ಟಿಸುತ್ತಿದೆ. ಇನ್ನೂ ಪರಿಪೂರ್ಣವಾಗಿ ಚೇತರಿಕೆಯಾದವರನ್ನು ಜನರು ಅವಮಾನಿದಂಲೇ ಕಾಣುತ್ತಿದ್ದಾರೆ ಎಂಬುವುದು ಕೂಡ ಹಲವೆಡೆಯಲ್ಲಿ ವರದಿಯಾಗಿವೆ. ಜಿಲ್ಲೆಯಲ್ಲಿ ಸೋಂಕಿನಿಂದ ಮೃತಪಟ್ಟವರನನ್ನು ಹಲವು ಸಂಘಟನೆಯ ನೇತೃತ್ವದಲ್ಲಿ ಅಂತಿಮ ವಿಧಿವಿಧಾನಗಳು ನಡೆಸುವುದರೊಂದಿಗೆ ಮಾನವೀಯತೆ ಸದಾ ಜೀವಂತವಾಗಿದೆ. ಸೋಂಕು ತಗಲಿದ ಅತೀ ಕುಟುಂಬಗಳ ಕಣ್ಣೀರನ್ನು ಒರೆಸುವ ಕಾರ್ಯಕ್ಕೆ ಜಿಲ್ಲೆಯ ಸಾಮಾಜಿಕ ಮುಖಂಡರು ಹೆಜ್ಜೆಯಿಟ್ಟಿದ್ದಾರೆ. ಇಂತಹ ಒಂದು ಸನ್ನೀವೇಶ ತಾಲೂಕಿನಲ್ಲೂ ಸಾಕ್ಷಿಯಾಗಿದೆ.
ಶಾಂತಿಗೋಡು ನಿವಾಸಿಯೊರ್ವರಿಗೆ ಜು.೧ರಂದು ಸೋಂಕು ದೃಢಪಟ್ಟಿತ್ತು, ಇವರು ತಾಲೂಕು ಸರಕಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಅಡುಗೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದರು. ಸೋಂಕಿತ ಬಡ ಮಹಿಳೆಯ ಪುತ್ರಿ ಉಷಾರವರು ಖಾಸಗಿ ಸುದ್ದಿ ವಾಹಿನಿ ಪಬ್ಲಿಕ್ ಟಿವಿಯ ಮನೆ ಮಂತ್ರಾಲಯ ಕಾರ್ಯಕ್ರಮಕ್ಕೆ ಕರೆ ಮಾಡಿ, ನನ್ನ ತಾಯಿಗೆ ಕರ್ತವ್ಯದಲ್ಲಿದ್ದಾಗ ಕೊರೋನಾ ಸೋಂಕು ತಗುಲಿ ಚಿಕಿತ್ಸೆ ಪಡೆದು ಹೋಂ ಕ್ವಾರೆಂಟೈನ್ನಲ್ಲಿದ್ದರು. ಎರಡು ತಿಂಗಳಿಂದ ವೇತನವಾಗಿರಲಿಲ್ಲ, ತಂದೆಗೂ ಉದ್ಯೋಗವಿಲ್ಲದೇ ಜೀವನದ ನಿರ್ವಹಣೆಗೆ ಸಂಕಷ್ಟ ಎದುರಿಸಬೇಕಾಗಿದೆ ಅಲ್ಲದೇ ಕೊರೋನಾ ಭೀತಿಯಿಂದಾಗಿ ಸ್ಥಳೀಯರು ಹತ್ತಿರ ಯಾರು ಬರುತ್ತಿಲ್ಲ ಎಂದು ತನ್ನ ಆಳಲನ್ನು ತೊಡಿಕೊಂಡಿದ್ದರು.
ಇದೀಗ ತೀರ ಬಡತನದಲ್ಲಿರುವ ಕುಟುಂಬದ ಮನೆಗೆ ತೆರಳಿ ಕಡಬದ ರೋಟರಿ ಕ್ಲಬ್ನ ಮಾಜಿ ಅಧ್ಯಕ್ಷ ಹಾಜಿ ಮಹಮ್ಮದ್ ರಫೀಕ್ ಕೊಡಾಜೆಯವರು ಅಗತ್ಯ ದಿನಸಿ ತಿಂಗಳಿಗಾಗುವಷ್ಟು ನೀಡಿ ಕುಟುಂಬಕ್ಕೆ ಆತ್ಮಸ್ಥೈರ್ಯವನ್ನು ತುಂಬಿದ್ದಾರೆ. ಈ ಬಗ್ಗೆ ಖಾಸಗಿ ವಾಹಿನಿ ಪಬ್ಲಿಕ್ ಟಿವಿ ಪ್ರತಿನಿಧಿಯೊರ್ವರು ಮಧ್ಯಪ್ರವೇಶಿಸಿರುವುದರಿಂದ ಮಹಿಳೆಗೆ ಅಡುಗೆ ಗುತ್ತಿಗೆದಾರರು ಒಂದು ತಿಂಗಳ ವೇತನ ನೀಡಿದ್ದು, ಬಾಕಿ ಹಣವನನ್ನು ಶೀಘ್ರವೇ ನೀಡುವುದಾಗಿ ಭರವಸೆ ನೀಡಿದ್ದಾರೆ. ಸೋಂಕಿತ ಮಹಿಳೆ ವಾಹಿನಿಗೆ ಮತ್ತು ಸಹಾಯ ಮಾಡಿದ ರಫೀಕ್ರವರಿಗೆ ಆಭಾರಿಯಾಗಿದ್ದಾನೆ ಎಂದಿದ್ದಾರೆ.















ಇನ್ನಷ್ಟು ಸುದ್ದಿಗಳು
ಡಿ.12: ಮದಕದಲ್ಲಿ ಜಲಾಲಿಯ್ಯಾ ರಾತೀಬ್ 8ನೇ ವಾರ್ಷಿಕ ಮಜ್ಲಿಸ್
ಬಜಗೋಳಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮ
ಇರಾಕ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ಅವರಿಗೆ ಊರ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ
ಕಿನ್ಯಾ: ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ತೂರು ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ
ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ
‘ಹಫ್ವಾ’ ಅಧ್ಯಕ್ಷರಾಗಿ ಸತತ 3ನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆ
ಸರ್ವ ಧರ್ಮೀಯ ಸೌಹಾರ್ದತೆಗೆ ಇಸ್ಲಾಮಿನಲ್ಲಿ ಪ್ರಾಧಾನ್ಯತೆ ಇದೆ- ಬೆದ್ರಬೆಟ್ಟು ಖತೀಬ್ ಉಸ್ತಾದ್