janadhvani

Kannada Online News Paper

ಸಾಗರದ ವ್ಯಕ್ತಿ ಜುಬೈಲ್ ನಲ್ಲಿ ನಿಧನ- ಕೆಸಿಎಫ್ ಸಹಕಾರದಲ್ಲಿ ಅಂತ್ಯಕ್ರಿಯೆ

ಸೌದಿ ಅರೇಬಿಯಾ: ಕೆಲಸ ನಿಮಿತ್ತ ಜುಬೈಲ್ ನಲ್ಲಿ ವಾಸವಾಗಿದ್ದ ಶಿವಮೊಗ್ಗ ಜಿಲ್ಲೆಯ ಸಾಗರದ ನಿವಾಸಿ ರಫೀಕ್ ಎಂಬುವವರು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದಾರೆ.

ಆಸ್ಪತ್ರೆಗೆ ಭೇಟಿನೀಡಿದ ಕೆಸಿಎಫ್ ನಾಯಕರು, ಮೃತರ ಕುಟುಂಬಸ್ಥರನ್ನೋ, ಪರಿಚಯಸ್ಥರನ್ನೋ ಕಾಣದಾಗ ಮೃತರ ಊರಿನಲ್ಲಿರುವ ಕುಟುಂಬಸ್ಥರಿಗೆ ಮಾಹಿತಿ ನೀಡಿ, ಮರಣೋತ್ತರ ಕ್ರಿಯೆಗೆ ಬೇಕಾಗ ಎಲ್ಲಾ ದಾಖಲೆಗಳನ್ನು ಸರಿಪಡಿಸಲು ಕೆಸಿಎಫ್ ರಾಷ್ಟ್ರಿಯ ಸಮಿತಿಯ ನಿರ್ದೇಶನದಂತೆ ದಮ್ಮಾಮ್ ಕೆಸಿಎಫ್ ಸಾಂತ್ವನ ವಿಭಾಗ ಮುಂದಾಗಿದೆ. ಕೇವಲ ಬೆರಳೆಣಿಕೆಯ ದಿನಗಳಲ್ಲಿ ಎಲ್ಲಾ ದಾಖಲೆ ಪತ್ರಗಳನ್ನು ಸರಿಪಡಿಸಿ, ಜುಬೈಲ್ ನಲ್ಲಿ ದಫನ ಕಾರ್ಯ ನೆರೆವೇರಿಸಲಾಯಿತು.ಜುಬೈಲ್ ಕೆ.ಸಿ.ಎಫ್ ಸಾಂತ್ವನ ಕನ್ವೀನರ್ ಅಬ್ದುಲ್ ಹಮೀದ್ ಕ್ರಷ್ಣಾಪುರ ಇವರು ತಮ್ಮ ಹೆಸರಲ್ಲಿ ಎಲ್ಲಾ ದಾಖಲೆ ಪತ್ರಗಳನ್ನು ಕ್ಲಪ್ತ ಸಮಯಕ್ಕೆ ಸರಿಪಡಿಸಿ ಝೋನಲ್ ನಾಯಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಅದೇ ರೀತಿ ಝೋನಲ್ ಸಾಂತ್ವನ ಕನ್ವೀನರ್ ಭಾಷಾ ಗಂಗಾವಳಿ ಅವರು ಅಂತ್ಯಕ್ರಿಯೆಗೆ ನೇತ್ರತ್ವ ವಹಿಸಿದರು. ಶೋಲ ಸೆಕ್ಟರ್ ಅಧ್ಯಕ್ಷರಾದ MKM ಮದನಿ, ಸಾಂತ್ವನ ಚೇರ್ಮಾನ್ ಕಲಂದರ್ ಮುಕ್ಕ ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

ಸಾಂತ್ವನ ವಿಭಾಗ
KCF ದಮ್ಮಾಮ್ ಝೋನ್

ಜನಧ್ವನಿಗೆ ವಾಟ್ಸಾಪ್ ಮಾಡಿ whatsapp
error: Content is protected !!