janadhvani

Kannada Online News Paper

ಯು.ಪಿ ಮೂಲದ ವ್ಯಕ್ತಿ ಮಕ್ಕಾದಲ್ಲಿ ಮೃತ್ಯು- ಕೆಸಿಎಫ್ ನೆರವಿನಲ್ಲಿ ಅಂತ್ಯಕ್ರಿಯೆ

ಸೌದಿ ಅರೇಬಿಯಾ: ಬಿನ್ ಲಾದನ್ ಸಬ್ ಕಾಂಟ್ರಾಕ್ಟ್ ಹಿಬ್ಲಿ ಕಂಪೆನಿಯಲ್ಲಿ ಕೆಲಸ ಮಾಡುತಿದ್ದ ಉತ್ತರ ಪ್ರದೇಶ ಮೂಲದ ಮುಹಮ್ಮದ್ ಅಮೀರ್ (24 ವ.) ಮಕ್ಕಾದ ಕುದೈಯಲ್ಲಿ ಸೂಪರ್ ಮಾರ್ಕೆಟ್ ನಿಂದ ಆಹಾರ ಸಾಮಾಗ್ರಿ ಖರೀದಿಸಿ ರಸ್ತೆ ದಾಟುತ್ತಿದ್ದ ಸಂದರ್ಭ ಕಾರು ಡಿಕ್ಕಿ ಹೊಡೆದು ಎಪ್ರಿಲ್ 22 ರಂದು ಮೃತಪಟ್ಟಿದ್ದರು.

ಮೃತರ ವಾರಿಸುದಾರರು ಯಾರು ಇಲ್ಲದೆ ಒಂದೂವರೆ ತಿಂಗಳ ಕಾಲ ಮಕ್ಕಾ ಅಲ್ ನೂರ್ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿತ್ತು. ಮದೀನಾ ಮತ್ತು ದಮ್ಮಾಂ ಕೆಸಿಎಫ್ ನೇತಾರರು ಮಕ್ಕಾ ಕೆಸಿಎಫ್ ಸಾಂತ್ವನ ಇಲಾಖೆಗೆ ಮಾಹಿತಿ ನೀಡಿದ್ದು, ಕೂಡಲೇ ಕಾರ್ಯ ಪ್ರವೃತ್ತರಾದ ಕೆಸಿಎಫ್ ಜಿದ್ದಾ ಝೋನ್ ಹಾಗೂ ಕೆಸಿಎಫ್ ಮಕ್ಕತುಲ್ ಮುಕರ್ರಮಃ ಸೆಕ್ಟರ್ ಸಾಂತ್ವನ ಇಲಾಖೆ ಅಧ್ಯಕ್ಷರು ಮೂಸಾ ಹಾಜಿ ಕಿನ್ಯ ಎಲ್ಲಾ ದಾಖಲೆಗಳನ್ನು ಕ್ಲಿಪ್ತ ಸಮಯಕ್ಕೆ ಸರಿಯಾಗಿ ಸಂಗ್ರಹಿಸಿ ಇಂದು 08/06/2020 ರಂದು ಹರಮ್ ಶರೀಫ್ ನಲ್ಲಿ ಮಯ್ಯಿತ್ ನಮಾಝ್ ನಿರ್ವಹಿಸಿ ದಫನ್ ಪ್ರಕ್ರಿಯೆ ಮುಗಿಸಲಾಯಿತು.

ಈ ಕೋವಿಡ್ ಕಾಲದಲ್ಲಿ ಮಕ್ಕಾ ಸೆಕ್ಟರ್ ವತಿಯಿಂದ ಹಾಗೂ ಝೋನ್, ನ್ಯಾಷನಲ್ ಸಮಿತಿಯ ಸಹಾಯ ಸಹಕಾರದಿಂದ ಕಿಟ್ ವಿತರಣೆ, ಔಷದಿ ವಿತರಣೆ, ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ, ರೋಗಿಗಳಿಗೆ ಸಾಂತ್ವನ ಇನ್ನಿತರ ಕಾರುಣ್ಯ ಕಾರ್ಯಾಚರಣೆಗಳು ಮಾಡುತ್ತಿದ್ದು, ಅನಿವಾಸಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ವರದಿ: ಇಕ್ಬಾಲ್ ಕಕ್ಕಿಂಜೆ
ಕೆಸಿಎಫ್ ಮಕ್ಕತುಲ್ ಮುಕರ್ರಮಃ

error: Content is protected !! Not allowed copy content from janadhvani.com