janadhvani

Kannada Online News Paper

ವಿಜಯ ಕರ್ನಾಟಕ ಪತ್ರಿಕೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ : ಜಿಲ್ಲಾ ಸಂಯುಕ್ತ ಜಮಾಅತ್

ಉಡುಪಿ: ಕೊರೋನಾವನ್ನು ಕೋಮುವಾದೀಕರಣ ಮಾಡಲು ಹೊರಟಿರುವ ‘ವಿಜಯ ಕರ್ನಾಟಕ’ ಪತ್ರಿಕೆಯ ನಡೆಯನ್ನು ತೀವ್ರವಾಗಿ ಖಂಡಿಸುತ್ತೇವೆ.

ಕೊರೊನಾ ವಿಶ್ವಾದ್ಯಂತ ವ್ಯಾಪಿಸಿದೆ.ಮನುಷ್ಯನ ಧರ್ಮ ನೋಡಿ ಈ ವ್ಯಾಧಿ ಹರಡುತ್ತಿಲ್ಲ. ಕೆಲವರ ಕೋಮು ಮನಸ್ಥಿತಿ ಈ ಕೊರೋನವನ್ನು ಕೋಮುವಾದೀಕರಣ ಮಾಡಲು ಹೊರಟಿದೆ. ‘ಸತ್ತವರೆಲ್ಲಾ ಒಂದೇ ಸಮುದಾಯದವರು’ ಎಂಬ ವಿಜಯ ಕರ್ನಾಟಕ ಪತ್ರಿಕೆಯು ಪ್ರಕಟಿಸಿದೆ.

ಈ ವೈರಸ್ ಕರ್ನಾಟಕದಲ್ಲಿ ಯಾವ ಧರ್ಮದವರಲ್ಲಿ ಹೆಚ್ಚು ಬಂದಿದೆ, ಸತ್ತಿದ್ದಾರೆ, ಪೋಲೀಸರ ಪೆಟ್ಟು ಬಿದ್ದಿದ್ದೆ ಇತ್ಯಾದಿ ವಿಕೃತ ಮನೋಭಾವ ಪ್ರದರ್ಶಿಸಿದೆ. ಕೊರೋನ ಹರಡಿ ಎಂದು ಕರೆ ನೀಡಿದ್ದ ಕಿಡಿಗೇಡಿಯೊಬ್ಬನ ನೀಚ ಕೃತ್ಯವನ್ನೂ ಈ ವರದಿಯೊಂದಿಗೆ ಜೋಡಿಸಿ ಇತರ ಸಮುದಾಯಗಳ ಮಧ್ಯೆ ಮುಸ್ಲಿಂ ಸಮುದಾಯವನ್ನು ತಪ್ಪಿತಸ್ಥ ವಿಭಾಗವನ್ನಾಗಿ ಚಿತ್ರೀಕರಿಸುವ ಪ್ರಯತ್ನ ನಡೆದಿದೆ.
ಮಸೀದಿಯನ್ನು ಬಂದ್ ಮಾಡಿ ಜುಮುಅ ನಮಾಝ್ ಸಹಿತ ನಿಲ್ಲಿಸಿ ಕೊರೋನ ವಿರುದ್ಧ ಹೋರಾಟದಲ್ಲಿ ಇಡೀ ಮುಸ್ಲಿಂ ಸಮುದಾಯ ಭಾಗಿಯಾಗಿದ್ದು, ಚರಿತ್ರೆಯಲ್ಲೇ ಮೊದಲ ಬಾರಿ. ಈ ಹೋರಾಟವನ್ನು ಬೆಂಬಲಿಸಿದ್ದಕ್ಕೆ ರಾಜ್ಯದ ಮುಖ್ಯಮಂತ್ರಿಗಳು ಸಹಿತ ಹಲವರು ಅಭಿನಂದಿಸಿದ್ದಾರೆ.

ಈ ಮಾರಕ ರೋಗಗಳಿಂದಿಲೂ ಜಾತಿವಾದ ಮಾಡಿದ ನೀಚ ಪತ್ರಿಕೆಯ ವಿರುದ್ಧ ತೀವ್ರವಾಗಿ ಖಂಡಿಸುತ್ತೇವೆ. ಸರಕಾರವು ಇದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಮುಸ್ಲಿಂ ಜಮಾಅತ್ , ಜಿಲ್ಲಾ ಸಂಯುಕ್ತ ಜಮಾಅತ್, ಎಸ್ ವೈ ಎಸ್, ಎಸ್ಸೆಸ್ಸೆಫ್, ಎಸ್ ಎಮ್ ಎ, ಎಸ್ ಜೆ ಎಮ್ ಹಾಗೂ ಎಸ್ ಡಿ ಐ ಜಿಲ್ಲಾ ಸಂಘಟನೆಗಳ ನಾಯಕರಾದ ಕೆ ಎ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com