ಪುತ್ತೂರು: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ (ಎಸ್ಸೆಸ್ಸೆಫ್) ಪುತ್ತೂರು ಸೆಕ್ಟರ್ ವತಿಯಿಂದ ಮಾ.27ರಿಂದ ಆರಂಭಗೊಳ್ಳಲಿರುವ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ವಿದ್ಯಾರ್ಥಿಗಳು ಹೇಗೆ ಎದುರಿಸಬಹುದು `How to Face exam’ ಎಂಬ ವಿಷಯಾಧರಿತ ಮಾಹಿತಿ ಶಿಬಿರ ನಡೆಯಲಿದೆ.
ವಿದ್ಯಾರ್ಥಿಗಳು ಪರೀಕ್ಷೆಗೆ ಹೇಗೆ ಸಿದ್ಧಗೊಂಡಿದ್ದಾರೆ?, ಯಾವುದೇ ಆತಂಕಕ್ಕೆ ಒಳಗಾಗದೆ ಧೈರ್ಯ, ಆತ್ಮ ವಿಶ್ವಾಸದೊಂದಿಗೆ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸುವಂತಹ ವಿಧಾನಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮನಮುಟ್ಟುವ ಶೈಲಿಯಲ್ಲಿ ಖ್ಯಾತ ತರಬೇತುದಾರ, ಉಕ್ಕುಡದ ಕ್ಯೂ-ಝೀ ಮ್ಯಾನೇಜರ್ ಉಮ್ಮರ್ ಅಮ್ಜದಿ ಕುಕ್ಕಿಲರವರು ಮುರ ಎಂ.ಪಿ.ಎಂ. ವಿದ್ಯಾಲಯದಲ್ಲಿ ಮಾ.14ರಂದು ಪೂರ್ವಾಹ್ನ ಗಂಟೆ 10ರಿಂದ ಮಧ್ಯಾಹ್ನ 1ರವರೆಗೆ ಮಾಹಿತಿ ನೀಡಲಿದ್ದಾರೆ. ಈ ಸಂರ್ಧಭದಲ್ಲಿ ಪಿಯುಸಿ, ಡಿಗ್ರಿ ವಿದ್ಯಾರ್ಥಿಗಳಿಗೂ ಮಾಹಿತಿ ಕಾರ್ಯಾಗಾರ ನಡೆಯಲಿದೆ ಎಂದು ಎಸ್ಸೆಸ್ಸೆಫ್ ಪುತ್ತೂರು ಸೆಕ್ಟರ್ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.