ದುಬೈ: ಯುಎಇಯಲ್ಲಿರುವ ಭಾರತೀಯರಿಗೆ ಕರೋನವೈರಸ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಭಾರತದ ಕಾನ್ಸುಲೇಟ್ ನಿರ್ದೇಶನ ನೀಡಿದ್ದು, ಈ ಬಗೆಗಿನ ಪ್ರಸ್ತಾಪಗಳನ್ನು ದೂತಾವಾಸದ ವೆಬ್ಸೈಟ್ ಮತ್ತು ಸಾಮಾಜಿಕ ಮಾಧ್ಯಮ ಗಳಲ್ಲಿ ಪ್ರಕಟಿಸಲಾಗಿದೆ.
ಯುಎಇ ಆರೋಗ್ಯ ಸಚಿವಾಲಯ ಹೊರಡಿಸಿದ ಕರೋನವೈರಸ್ ಮಾರ್ಗಸೂಚಿಗಳನ್ನು ಎಲ್ಲಾ ವಲಸಿಗ ಭಾರತೀಯರು ಅನುಸರಿಸಬೇಕೆಂದು ದೂತಾವಾಸವು ವಿನಂತಿಸಿದೆ. ವೈದ್ಯಕೀಯ ನೆರವು ಅಗತ್ಯವಿರುವವರು ದುಬೈ ಆರೋಗ್ಯ ಇಲಾಖೆಯನ್ನು 800342 ಅಥವಾ ಯುಎಇ ಆರೋಗ್ಯ ಸಚಿವಾಲಯವನ್ನು 042301000 ಸಂಖ್ಯೆಯ ಮೂಲಕ ಸಂಪರ್ಕಿಸಬೇಕು. ಹೆಚ್ಚಿನ ಮಾಹಿತಿಗಾಗಿ ದುಬೈನ ಭಾರತೀಯ ದೂತಾವಾಸವ ಕೇಂದ್ರದ ದೂರವಾಣಿ ಸಂಖ್ಯೆ: 043971222, 043971333. ಮೂಲಕ ಮತ್ತು ಕಾನ್ಸುಲೇಟ್ನ ಟ್ವಿಟರ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಪುಟಗಳ ಮೂಲಕವೂ ಸಂಪರ್ಕಿಸಬಹುದು.
ಸೂಚನೆಗಳು
- ಜೀವಂತ ಅಥವಾ ಸತ್ತ ಪ್ರಾಣಿಗಳ ಸಂಪರ್ಕವನ್ನು ತಪ್ಪಿಸಿರಿ, ಪ್ರಾಣಿಗಳ ಮಾರುಕಟ್ಟೆ ಮತ್ತು ಬೇಯಿಸದ ಮಾಂಸದಂತಹ ಪ್ರಾಣಿ ಉತ್ಪನ್ನಗಳಿಂದ ದೂರ ಇರಿ.
- ಉಸಿರಾಟದ ಲಕ್ಷಣಗಳನ್ನು ಹೊಂದಿರುವ ಜನರೊಂದಿಗೆ ನಿಕಟ ಸಂಪರ್ಕದಲ್ಲಿರಬೇಡಿ.
- ಕನಿಷ್ಠ 20 ಸೆಕೆಂಡುಗಳ ಕಾಲ ನಿಮ್ಮ ಕೈಗಳನ್ನು ಸಾಬೂನಿನಿಂದ ತೊಳೆಯಿರಿ.
- ಸೋಪ್ ಮತ್ತು ನೀರು ಲಭ್ಯವಿಲ್ಲದಿದ್ದರೆ, ಹ್ಯಾಂಡ್ ಸ್ಯಾನಿಟೈಜರ್ ಬಳಸಿ.
- ಸೀನು ಮತ್ತು ಕೆಮ್ಮುವಾಗ ಟವೆಲ್ ಉಪಯೋಗಿಸಿ ಮುಚ್ಚಿ.
- ನೀವು ರೋಗಲಕ್ಷಣಗಳನ್ನು ಹೊಂದಿದ್ದರೆ ಪ್ರವಾಸಗಳನ್ನು ತಪ್ಪಿಸಿ.















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ನಕಲಿ ದಾಖಲೆ ದೃಢೀಕರಣ ಜಾಲ: ಭಾರತೀಯ ರಾಯಭಾರ ಕಚೇರಿಯಿಂದ ಎಚ್ಚರಿಕೆ
ವಿಮಾನಯಾನ ರದ್ದತಿಯಿಂದ ಅತಂತ್ರರಾದ ಉಮ್ರಾ ಯಾತ್ರಾರ್ಥಿಗಳು- DKSCಯಿಂದ ಮಾನವೀಯ ನೆರವು
ವಲಸಿಗರಿಗೆ ಶುಭ ಸುದ್ದಿ: ಜಿದ್ದಾ–ಕೋಝಿಕ್ಕೋಡ್ ನಡುವೆ ಫ್ಲೈನಾಸ್ ನೇರ ವಿಮಾನ ಸೇವೆ ಆರಂಭ
ರಿಯಾದ್ ವಿಮಾನ ನಿಲ್ದಾಣ ಬಂದ್: ಪರ್ಯಾಯ ಪ್ರಯಾಣ ಮಾರ್ಗದಲ್ಲೂ ಟಿಕೆಟ್ ದರ ಏರಿಕೆ
ಸೌದಿ: ಸಿಲುಕಿರುವ ಯಾತ್ರಿಕರ ವಾಪಸಾತಿಗೆ ರಾಯಭಾರ ಕಚೇರಿ ತೀವ್ರ ಕಾರ್ಯಾಚರಣೆ
ಯುಎಇ : ನಾಲ್ಕು ಪಾಸ್ಪೋರ್ಟ್ ಸೇವಾ ಕೇಂದ್ರಗಳು ಇಂದಿನಿಂದ ಸ್ಥಗಿತ- ರಾಯಭಾರ ಕಚೇರಿ
ಉಮ್ರಾ ಯಾತ್ರಿಕರ ವಾಪಸಾತಿಗೆ ಪರ್ಯಾಯ ವಿಮಾನ ವ್ಯವಸ್ಥೆ ಕಲ್ಪಿಸಬೇಕು- ರಾಯಭಾರ ಕಚೇರಿ
ರಿಯಾದ್, ಜಿದ್ದಾ ವಿಮಾನ ಸೇವೆಗಳು ಅಕ್ಟೋಬರ್ 27ರವರೆಗೆ ಸ್ಥಗಿತ
ಧರ್ಮ ನಿಂದನೆ ದೂರು: ಯುವಕನ ಮರಣದಂಡನೆಯನ್ನು ರದ್ದುಗೊಳಿಸಿದ ಸೌದಿ ಸುಪ್ರೀಂ ಕೋರ್ಟ್
ಸೌದಿ ವಿಮಾನ ಸೇವೆ ಸ್ಥಗಿತ: ವೀಸಾ ಅವಧಿ ಮೀರಿದವರಿಗೆ ದಂಡವಿಲ್ಲದೆ ನಿರ್ಗಮನಕ್ಕೆ ಅವಕಾಶ- ಭಾರತೀಯ ರಾಯಭಾರ ಕಚೇರಿ