janadhvani

Kannada Online News Paper

ಶಾರ್ಜಾದಲ್ಲಿ ಭಿತ್ತಿಪತ್ರ ಅಂಟಿಸಿದಲ್ಲಿ 4 ಸಾವಿರ ದಿರ್ಹಮ್ ದಂಡ, ಗಡೀಪಾರು

ಶಾರ್ಜಾ: ಶಾರ್ಜಾದಲ್ಲಿ ಅಕ್ರಮವಾಗಿ ಜಾಹೀರಾತು ಅಂಟಿಸುವವರನ್ನು ಬಂಧಿಸಿ ಗಡೀಪಾರು ಮಾಡಲಾಗುತ್ತದೆ. ಜಾಹೀರಾತಿನಲ್ಲಿ ಪ್ರಕಟಿಸಲಾದ ಮೊಬೈಲ್ ಸಂಖ್ಯೆಯ ಮಾಲೀಕರೂ ಸಹ ಅಪರಾಧಿಯಾಗಿ ಗಣಿಸಲ್ಪಡಲಿದ್ದು, 4,000 ದಿರ್ಹಂ ದಂಡ ವಿಧಿಸಲಾಗುತ್ತದೆ.

ಇಂತಹ ಜಾಹೀರಾತುಗಳು ಶಾರ್ಜಾದಲ್ಲಿ ಸರ್ವೇ ಸಾಮಾನ್ಯ ದೃಶ್ಯವಾಗಿದೆ. ಫ್ಲಾಟ್ ಮತ್ತು ಬೆಡ್‌ಸ್ಪೇಸ್‌ನಿಂದ ಹಿಡಿದು ಬಡ್ಡಿ ವ್ಯವಹಾರದ ವರೆಗೆ ಜಾಹಿರಾತುಗಳಲ್ಲಿ ಪ್ರತ್ಯಕ್ಷಗೊಳ್ಳುತ್ತದೆ. ಇನ್ನು ಮುಂದೆ ಯಾವುದೇ ರೀತಿಯ ಜಾಹೀರಾತು, ವಿತರಕರು ಮತ್ತು ಜಾಹೀರಾತಿನ ಮಾಲೀಕರು ಮುನಿಸಿಪಾಲಿಟಿಯ ಅನುಮತಿಯಿಲ್ಲದೆ ಜಾಹಿರಾತು ಅಂಟಿಸಿದಲ್ಲಿ ಕಾನೂನು ಬಾಹಿರ ಕ್ರಮವಾಗಲಿದೆ. ಕಾನೂನುಬಾಹಿರವಾಗಿ ಪೋಸ್ಟ್ ಅಂಟಿಸುವವರನ್ನು ಗಡೀಪಾರು ಮಾಡಲಾಗುವುದು ಎಂದು ಶಾರ್ಜಾ ಪೊಲೀಸರು ತಿಳಿಸಿದ್ದಾರೆ.

ಅನುಮತಿಯಿಲ್ಲದೆ ಸ್ಪಾ ಅಥವಾ ಮಸಾಜ್ ಸೆಂಟರ್ ಕಾರ್ಡ್‌ಗಳನ್ನು ವಿತರಿಸುವವರನ್ನು ಮತ್ತು ಅನುಮತಿಯಿಲ್ಲದೆ ಪೋಸ್ಟರ್‌ಗಳನ್ನು ನೀಡುವವರನ್ನು ಬಂಧಿಸಲಾಗುವುದು. ಅಂತಹ ವ್ಯಕ್ತಿಗಳ ಮೇಲ್ವಿಚಾರಣೆಗಾಗಿ ನಗರದಲ್ಲಿ 50 ಪರಿಶೋಧಕರನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂತಹ ಯಾವುದೇ ಉಲ್ಲಂಘನೆಗಾಗಿ 901 ಮತ್ತು 993 ಸಂಖ್ಯೆಗೆ ಕರೆ ಮಾಡಲು ಪೊಲೀಸರು ಸೂಚಿಸಿದ್ದಾರೆ.

error: Content is protected !! Not allowed copy content from janadhvani.com