janadhvani

Kannada Online News Paper

ಪುದು : SSF ಫರಂಗಿಪೇಟೆ ಸೆಕ್ಟರ್ ವತಿಯಿಂದ SSLC ಹಾಗೂ PUC ವಿದ್ಯಾರ್ಥಿಗಳಿಗೆ How to face exam ಎಂಬ ವಿಷಯದಲ್ಲಿ ಮಾಹಿತಿ ಶಿಬಿರ ಇತ್ತೀಚೆಗೆ ಸುನ್ನೀ ಸೆಂಟರ್ ಪೇರಿಮಾರ್ ನಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು SSF ಫರಂಗಿಪೇಟೆ ಸೆಕ್ಟರ್ ಅಧ್ಯಕ್ಷರಾದ ಅಶ್ರಫ್ ಫಾಳಿಲಿ ವಹಿಸಿದರು. SSF ಫರಂಗಿಪೇಟೆ ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ಲುಕುಮಾನ್ ಸ-ಅದಿ ಉದ್ಘಾಟಿಸಿ ಮಾತನಾಡಿದರು. ನಾಸಿರ್ ಫಾಳಿಲಿ ಬಜಾಲ್ (Child Remediator) ತರಗತಿ ನಡೆಸಿದರು. SSF ಫರಂಗಿಪೇಟೆ ಸೆಕ್ಟರ್ ಕೋಶಾಧಿಕಾರಿ ಫಾರೂಕ್ ಅಡ್ಯಾರ್ ಪದವು, ಜೊತೆ ಕಾರ್ಯದರ್ಶಿ ಅಮೀನ್ ತುಂಬೆ, ಸದಸ್ಯರಾದ ಅಮೀನ್ ಮಾಲಿಕ್ ಉಪಸ್ಥಿತರಿದ್ದರು. SSF ಫರಂಗಿಪೇಟೆ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಉನೈಸ್. ಬಿ ಸ್ವಾಗತಿಸಿ, ಕೃತಜ್ಞತೆ ಸಲ್ಲಿಸಿದರು.

error: Content is protected !!
%d bloggers like this: