janadhvani

Kannada Online News Paper

ಪ್ರವಾದಿ ನಿಂದಕ ಮಧುಗಿರಿ ಅತುಲ್ ಕುಮಾರ್ ವಿರುದ್ದ SSF ಬೆಳ್ತಂಗಡಿ ಡಿವಿಷನ್ ನಿಂದ ದೂರು ದಾಖಲು

ಬೆಳ್ತಂಗಡಿ; ಪ್ರವಾದಿ ಯವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿ ಧರ್ಮ ನಿಂದನೆ ಮತ್ತು ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡಿದ ಅತುಲ್ ಕುಮಾರ್ ಯಾನೆ ಮಧುಗಿರಿ ಮೋದಿ ಎಂಬವರ ವಿರುದ್ಧ SSF ಬೆಳ್ತಂಗಡಿ ಡಿವಿಷನ್ ವತಿಯಿಂದ ಇಂದು ಬೆಳ್ತಂಗಡಿ ‌ದೂರು ದಾಖಲಿಸಲಾಯಿತು.

ಠಾಣಾಧಿಕಾರಿ ನಂದಕುಮಾರ್‌ ಅವರನ್ನು ಭೇಟಿ‌ ಮಾಡಿದ ನಿಯೋಗ ಮನವಿ ಸಲ್ಲಿಸಿ, ಕಠಿಣ ಕಾನೂನುಕ್ರಮ‌ಕ್ಕೆ ಒತ್ತಾಯಿಸಿತು.

ಈ ಸಂಧರ್ಭ SSF ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಎಂ. ಶರೀಫ್ ಬೆರ್ಕಳ, ಗುರುವಾಯನಕೆರೆ ಸೆಕ್ಟರ್ ಕಾರ್ಯದರ್ಶಿ ಪಯಾಝ್ ಗೇರುಕಟ್ಟೆ, ಕೋಶಾಧಿಕಾರಿ ಅಬ್ದುಲ್ ನಾಸರ್ ಸುನ್ನತ್ ‌‌‌ಕೆರೆ, ಸೆಕ್ಟರ್ ನಾಯಕರಾದ ನಾಸಿರ್ ಜಾರಿಗೆಬೈಲು, ರವೂಫ್ ಮದ್ದಡ್ಕ, ಹಾರಿಸ್ ಅಹ್ಮದ್ ಪರಪ್ಪು ಮೊದಲಾದವರು ಉಪಸ್ಥಿತರಿದ್ದರು.

ವರದಿ‌: ಎಂ.ಎಸ್.ಬಿ.