ಕೆಸಿಎಫ್ ದಮ್ಮಾಮ್ ನೋರ್ಥ್ ಸೆಕ್ಟರ್ ವತಿಯಿಂದ ಕೆಸಿಎಫ್ ಫೌಂಡೇಶನ್ ಡೇ ಆಚರಣೆ

ದಮ್ಮಾಮ್: ಕೆಸಿಎಫ್ ಸೌದಿ ಅರೇಬಿಯಾ ಇದರ ದಮ್ಮಾಮ್ ಝೋನ್ ಆದೀನದಲ್ಲಿರುವ ದಮ್ಮಾಮ್ ನೋರ್ಥ್ ಸೆಕ್ಟರ್ ವತಿಯಿಂದ ಕೆಸಿಎಫ್ ಫೌಂಡೇಶನ್ ಡೇ ಆಚರಣೆ ದಿನಾಂಕ 15/02/2020 ರಂದು ಬಹಳ ಅದ್ದೂರಿಯಾಗಿ ನಡೆಯಿತು.

ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಸೆಕ್ಟರ್ ಅಧ್ಯಕ್ಷರಾದ ಶಿಯಾಬುದ್ದೀನ್ ಸಖಾಫಿ ಹಿಮಮಿಯವರು ವಹಿಸಿದ್ದರು. ಕೆಸಿಎಫ್ ದಮ್ಮಾಮ್ ಝೋನ್ ಶಿಕ್ಷಣ ವಿಭಾಗದ ಚೇರ್ಮನ್ ಹಬೀಬ್ ಸಖಾಫಿ‌ಯವರು ದುಆ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಕಾರ್ಯದರ್ಶಿ ನೌಶಾದ್ ತಲಪಾಡಿ ಸರ್ವರನ್ನು ಸ್ವಾಗತಿಸಿದರು.

ಝೋನ್ ಅಧ್ಯಕ್ಷರಾದ ಅಬ್ದುಲ್ ರಶೀದ್ ಸಖಾಫಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೆಸಿಎಫ್ ಅಂತರ್ರಾಷ್ಟ್ರೀಯ ಇಹ್ಸಾನ್ ವಿಭಾಗದ ಚೇರ್ಮನ್ ಅಬೂಬಕ್ಕರ್ ರೈಸ್ಕೊ ಪಡುಬಿದ್ರಿ ಯವರು ಕೆಸಿಎಫ್ ಆರಂಭದಿಂದ ಇದುವರೆಗೆ ಮಾಡಿದ ಸಾಧನೆಯ ಬಗ್ಗೆ ಹಿನ್ನೋಟವನ್ನು ಹಾಕುತ್ತಾ ಮುಂದೆ ಸಂಘಟನೆಗೆ ಇರುವ ಸದುದ್ದೇಶಗಳ ಬಗ್ಗೆ ವಿವರಿಸಿದರು ಮತ್ತು ಉತ್ತರ ಕರ್ನಾಟಕದ ಜನರಿಗೆ ಸಂಘಟನೆ ನೀಡುತ್ತಿರುವ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣಗಳ ಕುರಿತಾದ ವಿಷಯಗಳ ಬಗ್ಗೆ ಈಗಾಗಲೇ ಚರ್ಚೆಗಳು ನಡೆಯುತ್ತಿದೆ ಎಂದು ತಿಳಿಸಿ, ಪ್ರತಿಯೊಬ್ಬರ ಸಹಕಾರ ಇದ್ದರೆ ಮಾತ್ರ ಸಾದ್ಯ ಎನ್ನುವ ಮಾತುಗಳಿಂದ ಕಾರ್ಯಕರ್ತರನ್ನು ಹುರಿದುಂಬಿಸಿದರು.

ನಂತರ ಹಿರಿಯ ಸದಸ್ಯಾರಾದ ಖಾಸಿಂ ಹಾಜಿ ಅಡ್ಡೂರು, ಉಸ್ಮಾನ್ ಮಂಜನಾಡಿಯವರು ಕೆಸಿಎಫ್ ಇದುವರೆಗೆ ಮಾಡಿದ ಕಾರ್ಯಸಾಧನೆಯನ್ನು ನೆನಪಿಸಯತ್ತಾ ತಮ್ಮ ಅನುಭವಗಳನ್ನು ನೆರೆದ ಜನಸ್ತೋಮದ ಮುಂದೆ ಬಹಳ ಭಾಹುಕರಾಗಿ ಮುಂದಿಟ್ಟು ಎಲ್ಲರನ್ನು ಮೋಟಿವೇಶನ್ ಮಾಡಿದರು.

ನಂತರ ಅಧ್ಯಕ್ಷರಾದ ಶಿಯಾಬುದ್ದೀನ್ ಸಖಾಫಿಯವರು ಮಾತನಾಡುತ್ತಾ, ಸಂಘಟನೆ ಎಂದರೆ ಏನು ಮತ್ತು ನಮ್ಮ ಸಂಘಟನೆಗೆ ಇರುವ ಉದ್ದೇಶಗಳ ಬಗ್ಗೆ ಕಾರ್ಯಕರ್ತರ ಮನಮುಟ್ಟುವ ರೀತಿಯ ತರಗತಿಯನ್ನು ನಡೆಸಿದರು, ಕಾರ್ಯಕ್ರಮದಲ್ಲಿ ಅಮಾನ್ ಕಾಟಿಪಳ್ಳರವರ ಕೆಸಿಎಫ್ ಡೆ ಕುರಿತಾದ ಹಾಡುಗಳು ಮತ್ತು ಎಲ್ಲ ಸದಸ್ಯರಿಂದ ಕುಶೋಪಲಹರಿ ಕಾರ್ಯಕ್ರಮ ನಡೆಯಿತು.

ವೇದಿಕೆಯಲ್ಲಿ ಕರೀಂ ಲತೀಫಿ ಬೇಂಗಿಲ, ಉಮರುಲ್ ಫಾರೂಖ್ ಕಾಟಿಪಳ್ಳ,ಮುಹಮ್ಮದ್ ಮಲೆಬೆಟ್ಟು, ಇಬ್ರಾಹಿಂ ವಳವೂರು ಉಪಸ್ತಿತರಿದ್ದರು.

Leave a Reply

Your email address will not be published. Required fields are marked *

error: Content is protected !!