ಬೀಜಿಂಗ್,ಫೆ.09: ಚೀನಾದಲ್ಲಿ ವ್ಯಾಪಕವಾಗಿರುವ ಕೊರೋನಾ ವೈರಸ್ ವ್ಯಾಧಿಯನ್ನು ನಿಯಂತ್ರಿಸಲು ಹರಸಾಹಸ ಮಾಡುತ್ತಿರುವ ಚೀನಾ, ಈಗ ಶಂಕಿತ ಕರೋನಾ ವೈರಸ್ ಪೀಡಿತರನ್ನು ಬಲವಂತವಾಗಿ ಆಸ್ಪತ್ರೆಗೆ ಎಳೆದೊಯ್ಯುವ ವಿಡಿಯೋಗಳು ಬೆಳಕಿಗೆ ಬಂದಿವೆ. ವೈರಾಣುವಿನ ಕೇಂದ್ರ ಸ್ಥಾನವಾಗಿರುವ ವುಹಾನ್ನಲ್ಲಿನ ಮನೆಯೊಂದಕ್ಕೆ ನುಗ್ಗುವ ಆರೋಗ್ಯ ಸಿಬ್ಬಂದಿಯು, ವ್ಯಕ್ತಿಯೊಬ್ಬನನ್ನು ಬಲವಂತವಾಗಿ ಎಳೆದುಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ.
真的是把人当猪 pic.twitter.com/TC2fUViIse
— 方舟子 (@fangshimin) February 6, 2020
ಈ ಮನೆಗೆ ಆಗಮಿಸುವ ಮಾಸ್ಕ್ ಧರಿಸಿದ ಸರ್ಕಾರದ ಸಿಬ್ಬಂದಿ ಮೊದಲು ಇಬ್ಬರನ್ನು ಹೊರಗೆ ಕೈಹಿಡಿದು ತರುತ್ತಾರೆ. ಆದರೆ ಮೂರನೇ ವ್ಯಕ್ತಿ ಹೊರಬರಲು ಪ್ರತಿರೋಧ ತೋರುತ್ತಾನೆ. ಮನೆ ಬಾಗಿಲಲ್ಲೇ ಕುಳಿತು ಒದ್ದಾಡಲು ಆರಂಭಿಸುತ್ತಾನೆ. ಆಗ ಇಬ್ಬರು ಸಿಬ್ಬಂದಿ ಆತನನ್ನು ಮೇಲೆತ್ತಲು ಯತ್ನಿಸಿ ವಿಫಲರಾಗುತ್ತಾರೆ. ಆಗ ಅವರಿಗೆ ಸಹಾಯ ಮಾಡಲು ಇನ್ನೂ 3 ಸಿಬ್ಬಂದಿ ಆಗಮಿಸುತ್ತಾರೆ. ಆಗ ಅವರು ಹರಸಾಹಸ ಪಟ್ಟು ಆತನನ್ನು ಮೇಲೆತ್ತಿಕೊಂಡು ಬರುತ್ತಾರೆ. ಆಸ್ಪತ್ರೆಗೆ ಎಳೆದೊಯ್ಯುತ್ತಾರೆ.
ಇನ್ನು ಇನ್ನೊಂದು ವಿಡಿಯೋದಲ್ಲಿ, ಮಾಸ್ಕ್ ಹಾಕಿಕೊಳ್ಳದ ಮಹಿಳೆಯನ್ನು ಪೊಲೀಸರು ಬಲವಂತವಾಗಿ ಎಳೆದೊಯ್ಯುವ ದೃಶ್ಯ ವೈರಲ್ ಆಗಿದೆ.
10 ಪಟ್ಟು ಹೆಚ್ಚು: ಕೊರೋನಾ ವೈರಸ್, ಚೀನಾ ಸೇರಿದಂತೆ ವಿಶ್ವದಲ್ಲಿ 34,800 ಜನರಿಗೆ ಅಂಟಿದೆ. ಆದರೆ ಅಂದುಕೊಂಡಿದ್ದಕ್ಕಿಂತ ಪೀಡಿತರ ಸಂಖ್ಯೆ 10 ಪಟ್ಟು ಹೆಚ್ಚು ಇರಬಹುದು ಎಂದು ಬ್ರಿಟನ್ನ ಮೆಡಿಸಿನ್ ಪ್ರೊಫೆಸರ್ ಜಾನ್ ಎಡ್ಮಂಡ್ಸ್ ಶಂಕಿಸಿದ್ದಾರೆ. ಅನೇಕ ಪ್ರಕರಣಗಳನ್ನು ಪತ್ತೆ ಮಾಡಲು ಸಾಧ್ಯವಾಗದೇ ಹೋಗಿರಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.















ಇನ್ನಷ್ಟು ಸುದ್ದಿಗಳು
ಇರಾನ್ ಮೇಲೆ ಮತ್ತೆ ಯುಎಸ್ ದಾಳಿ; ಬಂದರ್ ಅಬ್ಬಾಸ್ ಸೇರಿದಂತೆ ವಿವಿಧ ಕೇಂದ್ರಗಳಲ್ಲಿ ಬಾಂಬ್ ದಾಳಿ
ಇರಾಕ್ನಲ್ಲೂ ಖಾಮ್ನಈ ಅಂತ್ಯಕ್ರಿಯೆ ವಿಧಿವಿಧಾನಗಳು; ನಜಫ್ನತ್ತ ಹರಿದುಬಂದ ಜನಸಾಗರ
ವಿಕಾಸದ ಕೂಗಿನೊಂದಿಗೆ ಇತ್ತಿಹಾದ್ ರೈಲು; ಟಿಕೆಟ್ ದರ ಮತ್ತು ರಿಯಾಯಿತಿಗಳ ಘೋಷಣೆ
ಯುಎಇ: ಮುಂದುವರಿದ ಭಾರತೀಯ ಪಾಸ್ಪೋರ್ಟ್ ಸೇವಾ ಬಿಕ್ಕಟ್ಟು
ಇತ್ತಿಹಾದ್ ರೈಲಿಗೆ ಐತಿಹಾಸಿಕ ಕ್ಷಣ; ಭವ್ಯ ಆರಂಭಕ್ಕೆ ಯುಎಇನಲ್ಲಿ ಅಭೂತಪೂರ್ವ ಜನಸ್ಪಂದನ
ವಲಸಿಗರಿಗೆ ಶುಭ ಸುದ್ದಿ: ಸೌದಿ ವರ್ಕ್ ಪರ್ಮಿಟ್ ಸ್ಥಿತಿ ಸರಿಪಡಿಸಿಕೊಳ್ಳುವ ಗಡುವು ವಿಸ್ತರಣೆ
‘ಅವನು ಬದುಕಿದ್ದರೆ ನಾನು ಕೂಡ ಬದುಕುತ್ತೇನೆ’; ಭೂಕಂಪದ ಅವಶೇಷಗಳ ನಡುವೆ ಮರಣವನ್ನೇ ಗೆದ್ದು ಬಂದ ತಾಯಿ ಮತ್ತು 18 ದಿನದ ಮಗು!
ದಾಳಿಗಳು ಮುಂದುವರಿದರೆ ‘ನರಕಸದೃಶ’ ತಿರುಗೇಟು ನೀಡಲಾಗುವುದು- ಇರಾನ್ ಎಚ್ಚರಿಕೆ
ಮತ್ತೆ ಯುದ್ಧವೇ? – ಎರಡನೇ ದಿನವೂ ಇರಾನ್ ಮೇಲೆ ಯುಎಸ್ ದಾಳಿ
ಬಹ್ರೇನ್ ಮೇಲೆ ಇರಾನ್ ಡ್ರೋನ್ ದಾಳಿ: ಸೌದಿ ಅರೇಬಿಯಾ ತೀವ್ರ ಖಂಡನೆ- ಪೂರ್ಣ ಬೆಂಬಲ ಘೋಷಣೆ