janadhvani

Kannada Online News Paper

ದೆಹಲಿ ಚುನಾವಣೆಯಲ್ಲಿ ಬಳಸಲಾದ ಇವಿಎಂ ತಿರುಚಲು ಪ್ರಯತ್ನ- AAP ಆರೋಪ

ಹೊಸದಿಲ್ಲಿ: ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷವು ದಿಲ್ಲಿ ವಿಧಾನಸಭೆಯಲ್ಲಿ ಬಳಸಲಾದ ಇವಿಎಂಗಳನ್ನು ತಿರುಚಲು ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದ್ದು, ಈ ಕುರಿತ ವಿಡಿಯೋಗಳನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದೆ.

ನಿನ್ನೆ ಹಕ್ಕು ಚಲಾಯಿಸಿದ ಪಕ್ಷದ ಹಿರಿಯ ಮುಖಂಡ ಮತ್ತು ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರು ಒಂದೆರಡು ವೀಡಿಯೊಗಳನ್ನು ಟ್ವೀಟ್ ಮಾಡಿದ್ದು,.ಇವಿಎಂಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

“ಮೀಸಲು ಪಡೆ ಇವಿಎಂ ಜೊತೆ ಹೋಗಿಲ್ಲವೇ? ಬದಾರ್ ಪುರ ವಿಧಾನಸಭಾ ಕ್ಷೇತ್ರದ ಸರಸ್ವತಿ ವಿದ್ಯಾ ನಿಕೇತನ ಶಾಲೆಯಲ್ಲಿ ಇವಿಎಂ ಜೊತೆಗಿದ್ದ ಈ ಅಧಿಕಾರಿಯನ್ನು ಜನರು ಹಿಡಿದಿದ್ದಾರೆ” ಎಂದು ಟ್ವೀಟ್ ಮಾಡಿರುವ ಅವರು ವಿಡಿಯೋ ಪೋಸ್ಟ್ ಮಾಡಿದ್ದಾರೆ.


ಅವರು ಪೋಸ್ಟ್ ಮಾಡಿರುವ ಇನ್ನೊಂದು ವಿಡಿಯೋದಲ್ಲಿ ಇವಿಎಂಗಳನ್ನು ಬೀದಿಯೊಂದರಲ್ಲಿ ಕೆಲವರು ಹಿಡಿದುಕೊಂಡು ನಡೆಯುತ್ತಿರುವುದು ಕಾಣಿಸುತ್ತದೆ. “ಈ ಇವಿಎಂಗಳನ್ನು ಎಲ್ಲಿಗೆ ಸಾಗಿಸಲಾಗುತ್ತಿದೆ ಎಂದು ಚುನಾವಣಾ ಆಯೋಗ ತನಿಖೆ ನಡೆಸಲಿ” ಎಂದವರು ಹೇಳಿದ್ದಾರೆ.

ಆದರೆ ಈ ಆರೋಪಗಳನ್ನು ಚುನಾವಣಾ ಆಯೋಗವು ನಿರಾಕರಿಸಿದೆ. ಮತದಾನಕ್ಕೆ ಬಳಸಲಾದ ಎಲ್ಲಾ ಇವಿಎಂಗಳನ್ನು ಪಕ್ಷಗಳ ಏಜೆಂಟರ ಎದುರಲ್ಲೇ ಸೀಲ್ ಮಾಡಲಾಗಿದ್ದು, ಮತದಾನ ಕೇಂದ್ರದಿಂದ ನೇರವಾಗಿ ಸ್ಟ್ರಾಂಗ್ ರೂಂಗೆ ಒಯ್ಯಲಾಗಿದೆ ಎಂದು ಅದು ಹೇಳಿದೆ.

error: Content is protected !! Not allowed copy content from janadhvani.com