ನವದೆಹಲಿ: ಭಾರತೀಯ ನಾಗರಿಕ ವಿಮಾನಯಾನ ಸಚಿವಾಲಯವು ಈ ವರ್ಷದ ಹಜ್ ವಿಮಾನಗಳ ಸೇವೆಗಳನ್ನು ಮಾರ್ಪಡಿಸಿದೆ. ಹೆಚ್ಚಿನ ವಿಮಾನಗಳು ಜಿದ್ದಾದ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಾರಾಟ ನಡೆಸಲಿವೆ. ಮದೀನಾ ವಿಮಾನ ನಿಲ್ದಾಣದಲ್ಲಿ ವಿಮಾನಗಳನ್ನು ಇಳಿಸಲು ಸಮಯದ ಸ್ಲಾಟ್ಗಳನ್ನು ಅನುಮತಿಸಲಾಗದ ಕಾರಣಕ್ಕಾಗಿ ಈ ಬದಲಾವಣೆಗೆ ಎನ್ನಲಾಗಿದೆ.
ಭಾರತದ 22 ಹಜ್ ಪ್ರಯಾಣ ಕೇಂದ್ರಗಳಿಂದ ಯಾತ್ರಿಕರು ಹೊರಡಲಿದ್ದಾರೆ. 11 ಕೇಂದ್ರಗಳಿಂದ ಜಿದ್ದಾಗೆ ಮತ್ತು 11ಕೇಂದ್ರಗಳಿಂದ ಮದೀನಾಕ್ಕೆ ಸೇವೆಗಳ ಕಾರ್ಯನಿರ್ವಹಿಸಲು ಟೆಂಡರ್ ಆಹ್ವಾನಿಸಲಾಗಿದ್ದು, ಮದೀನಾ ವಿಮಾನ ನಿಲ್ದಾಣದಿಂದ ಲ್ಯಾಂಡಿಂಗ್ ಅವಕಾಶ ಕೊರತೆಯಿಂದಾಗಿ, ಮದೀನಾಕ್ಕೆ ಕರೆಯಲಾದ ನಾಲ್ಕು ಟೆಂಡರ್ಗಳನ್ನು ಜಿದ್ದಾಗೆ ಸ್ಥಳಾಂತರಿಸಿ ಟೆಂಡರ್ ಅನ್ನು ಮರು ನಿಗದಿಪಡಿಸಲಾಯಿತು. ಜಿದ್ದಾಗೆ ಹಾರಬೇಕಿದ್ದ ಎರಡು ಕೇಂದ್ರಗಳ ಸೇವೆಗಳನ್ನು ಮದೀನಾಕ್ಕೂ ವರ್ಗಾಯಿಸಲಾಯಿತು.
ಹಳೆಯದಾದ ವಿಮಾನಗಳನ್ನು ಹಜ್ ಸೇವೆಗೆ ಬಳಸಬಾರದು. ಒಂದು ಲಕ್ಷಕ್ಕೂ ಹೆಚ್ಚು (1,25,025) ಪ್ರಯಾಣಿಕರು ಪ್ರಯಾಣ ಬೆಳೆಸಲು ಮತ್ತು ಮರಳಲು ಸೌಕರ್ಯ ಒದಗಿಸುವ ನಿಬಂಧನೆಗಳೊಂದಿಗೆ ಟೆಂಡರ್ ಆಹ್ವಾನಿಸಲಾಗಿದೆ. ಏರ್ ಇಂಡಿಯಾ ಎಲ್ಲಾ ಹಜ್ ಕೇಂದ್ರಗಳಿಂದ ಸೇವೆ ನಿರ್ವಹಿಸಲು ಪ್ರಯತ್ನಿಸುತ್ತಿದೆ. ಆದರೆ, ಸೌದಿ ವಿಮಾನಯಾನ ಸಂಸ್ಥೆಗಳು ಪ್ರಸ್ತುತ ಸೇವೆ ನೀಡುತ್ತಿರುವ ಕೋಝಿಕೋಡ್ ಮತ್ತು ಕೊಚ್ಚಿಯನ್ನು ಮಾತ್ರ ಗುರಿಯಾಗಿರಿಸಿಕೊಂಡಿವೆ. ನಾಸ್ ಏರ್ ಕೂಡ ಟೆಂಡರ್ ನೀಡುವ ಸನ್ನಾಹದಲ್ಲಿದೆ.















ಇನ್ನಷ್ಟು ಸುದ್ದಿಗಳು
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ: ಏರ್ ಇಂಡಿಯಾ ಮತ್ತು ಇಂಡಿಗೋ ವಿಮಾನ ಹಾರಾಟ ರದ್ದು
ಚೀನಾದಲ್ಲಿ HMPV ವೈರಸ್ ವ್ಯಾಪಕ,ಆಸ್ಪತ್ರೆಗಳು ಫುಲ್: ಆತಂಕ ಬೇಡ- ಕೇಂದ್ರ ಸರ್ಕಾರ
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಅಲ್ಪಸಂಖ್ಯಾತರ ಧಾರ್ಮಿಕ ಸ್ಥಳಗಳ ಮೇಲಿನ ದಾಳಿ ಖಂಡನೀಯ: ತೆಲಂಗಾಣ ಸಿಎಂಗೆ ಎ ಪಿ ಉಸ್ತಾದ್ ಪತ್ರ
ಲಂಚ: ಮೇಘಾ ಇಂಜಿನಿಯರಿಂಗ್ ವಿರುದ್ಧ ಸಿಬಿಐ ಪ್ರಕರಣ – 966 ಕೋಟಿ ಮೌಲ್ಯದ ಎಲೆಕ್ಟೋರಲ್ ಬಾಂಡ್ಗಳನ್ನು ಖರೀದಿಸಿದ್ದ ಕಂಪನಿ ಮೇಘಾ
ಸಮಗ್ರ ಅಭಿವೃದ್ಧಿ ಗೆ ಅಂಬೇಡ್ಕರ್ ತತ್ವ ಪಾಲನೆ ಅಗತ್ಯ : ದ್ರೌಪದಿ ಮುರ್ಮು
ಹರಿಯಾಣ : ಶಾಲಾ ಬಸ್ ಪಲ್ಟಿ; ಆರು ಮಕ್ಕಳು ಸಾವು ಈದ್ ರಜೆಯಲ್ಲೂ ತೆರೆದಿದ್ದ ಶಾಲೆ!
ಭಜರಂಗದಳ ಮಾಜಿ ರಾಜ್ಯ ಸಂಚಾಲಕ ರಘು ಪರಾರಿ
ಮುಸ್ಲಿಂ 2ಬಿ ಮೀಸಲು ರದ್ಧತಿ ಮತಬ್ಯಾಂಕ್ ಭದ್ರಪಡಿಸುವ ಸರಕಾರದ ನಡೆ ಖಂಡನೀಯ- ಎಸ್ ವೈ ಎಸ್
ದೇವಸ್ಥಾನಕ್ಕೆ ಮಾಂಸ ಎಸೆದು, ಕೋಮುಗಲಭೆ- ಪ್ರಮುಖ ಆರೋಪಿ ಚಂಚಲ್ ತ್ರಿಪಾಠಿ ಬಂಧನ