ಕಠ್ಮಂಡು, ಜನವರಿ 21: ನೇಪಾಳದ ದಾಮನ್ ಎಂಬಲ್ಲಿ ನಡೆದ ಹೃದಯವಿದ್ರಾವಕ ಘಟನೆಯಲ್ಲಿ ರೆಸಾರ್ಟ್ ಒಂದರ ಕೊಠಡಿಯಲ್ಲಿ ಕೇರಳದ ಎಂಟು ಮಂದಿ ಪ್ರವಾಸಿಗರು ಮೃತಪಟ್ಟಿದ್ದಾರೆ. ಅನಿಲ ಸೋರಿಕೆಯಿಂದ ಉಸಿರಾಡಲು ಸಾಧ್ಯವಾಗದೆ ಈ ಸಾಮೂಹಿಕ ಸಾವು ಸಂಭವಿಸಿದ್ದು, ಮೃತರಲ್ಲಿ ನಾಲ್ವರು ಮಕ್ಕಳು ಕೂಡ ಸೇರಿದ್ದಾರೆ.

ಮೃತರನ್ನು ಪ್ರಬಿನ್ ಕುಮಾರ್ (39), ಶರಣ್ಯ (34), ರಂಜಿತ್ ಕುಮಾರ್ ಟಿಬಿ (39), ಇಂದು ರಂಜಿತ್ (34), ಶ್ರೀ ಭದ್ರಾ (9), ಅಭಿನವ್ ಸೂರ್ಯ (9), ಅಭಿ ನಾಯರ್ (7) ಮತ್ತು ವೈಷ್ಣವ್ ರಂಜಿತ್ (2) ಎಂದು ಗುರುತಿಸಲಾಗಿದೆ.
ಒಟ್ಟು 15 ಜನರ ತಂಡವು ನೇಪಾಳಕ್ಕೆ ಪ್ರವಾಸ ಕೈಗೊಂಡಿತ್ತು. ಅವರಲ್ಲಿ ಮೃತಪಟ್ಟ ಎಂಟೂ ಮಂದಿ ತಿರುವನಂತಪುರಂ ಜಿಲ್ಲೆಯ ಚೆಂಕೊಟ್ಟುಕೊಣಂನವರಾಗಿದ್ದಾರೆ. ಅನಿಲ್ ಸೋರಿಕೆಯಿಂದ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಉಸಿರುಗಟ್ಟಿ ಒದ್ದಾಡುತ್ತಿದ್ದವರನ್ನು ಏರ್‌ಲಿಫ್ಟ್ ಮೂಲಕ ಎಚ್‌ಎಎಂಎಸ್ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ದಾಖಲು ಮಾಡುವಾಗಲೇ ಅವರೆಲ್ಲರೂ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.
ಎವೆರೆಸ್ಟ್ ಪನೋರಮಾ ಎಂಬ ರೆಸಾರ್ಟ್‌ನಲ್ಲಿ ಎಲ್ಲರೂ ಉಳಿದುಕೊಂಡಿದ್ದರು. ಒಂದು ಕೊಠಡಿಯಲ್ಲಿ ಇಬ್ಬರು ದಂಪತಿ ಮತ್ತು ಅವರ ನಾಲ್ಕು ಮಕ್ಕಳು ಇದ್ದರು. ಕೊಠಡಿ ಬೆಚ್ಚಗೆ ಇರುವಂತೆ ನೋಡಿಕೊಳ್ಳಲು ಗ್ಯಾಸ್ ಹೀಟರ್ ಆನ್ ಮಾಡಿದ್ದರು ಎನ್ನಲಾಗಿದೆ. ಆದರೆ ಹೀಟರ್ ಕೆಟ್ಟು ಗ್ಯಾಸ್ ಹೊರಬಂದಿದ್ದರಿಂದ ಕೊಠಡಿಯೊಳಗೆ ಉಸಿರುಗಟ್ಟಿ ಎಲ್ಲರೂ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರವಾಸಕ್ಕೆ ತೆರಳಿದ್ದವರು ನಾಲ್ಕು ಕೊಠಡಿಗಳನ್ನು ಬುಕ್ ಮಾಡಿಸಿದ್ದರು. ಆದರೆ ಅವರಲ್ಲಿ ಎಂಟು ಮಂದಿ ಒಂದೇ ಕೊಠಡಿಯಲ್ಲಿ ಸೇರಿಕೊಂಡಿದ್ದರು. ಚಳಿ ಇದ್ದಿದ್ದರಿಂದ ಎಲ್ಲಾ ಕಿಟಕಿ ಬಾಗಿಲುಗಳನ್ನು ಒಳಗಿನಿಂದ ಬಂದ್ ಮಾಡಿಕೊಂಡಿದ್ದರು. ಪ್ರವಾಸ ಮುಗಿಸಿ ಅವರು ತಮ್ಮ ಮನೆಗಳಿಗೆ ಹೊರಡಲು ಸಿದ್ಧತೆ ಮಾಡಿಕೊಂಡಿದ್ದರು.
ಗ್ಯಾಸ್ ಹೀಟರ್ನಿಂದ ಹೇಗೆ ಸಾವು..?
ತಜ್ಞರ ಪ್ರಕಾರ ಗ್ಯಾಸ್ ಹೀಟರ್ ಕಾರ್ಬನ್ ಮಾನಾಕ್ಸೈಡನ್ನ ರಿಲೀಸ್ ಮಾಡುತ್ತೆ. ಇದೇ, ಕಾರಣದಿಂದ ಈ ಎಲ್ಲಾ 8 ಜನರು ಉಸಿರುಗಟ್ಟಿ ಸಾವನಪ್ಪಿರುವುದಾಗಿ ಶಂಕಿಸಲಾಗಿದೆ. ಅಲ್ಲದೇ, ಕೊಠಡಿಯ ಬಾಗಿಲು ಮುಚ್ಚಿದ್ರಂತೂ ಕಾರ್ಬನ್ ಮಾನಾಕ್ಸೈಡ್ ಬಲಿ ಪಡೆದುಕೊಳ್ಳುವುದು ಪಕ್ಕಾ ಅಂತಾ ಹೇಳಲಾಗುತ್ತೆ.















ಇನ್ನಷ್ಟು ಸುದ್ದಿಗಳು
ಇರಾನ್ ಮೇಲೆ ಮತ್ತೆ ಯುಎಸ್ ದಾಳಿ; ಬಂದರ್ ಅಬ್ಬಾಸ್ ಸೇರಿದಂತೆ ವಿವಿಧ ಕೇಂದ್ರಗಳಲ್ಲಿ ಬಾಂಬ್ ದಾಳಿ
ಇರಾಕ್ನಲ್ಲೂ ಖಾಮ್ನಈ ಅಂತ್ಯಕ್ರಿಯೆ ವಿಧಿವಿಧಾನಗಳು; ನಜಫ್ನತ್ತ ಹರಿದುಬಂದ ಜನಸಾಗರ
ವಿಕಾಸದ ಕೂಗಿನೊಂದಿಗೆ ಇತ್ತಿಹಾದ್ ರೈಲು; ಟಿಕೆಟ್ ದರ ಮತ್ತು ರಿಯಾಯಿತಿಗಳ ಘೋಷಣೆ
ಯುಎಇ: ಮುಂದುವರಿದ ಭಾರತೀಯ ಪಾಸ್ಪೋರ್ಟ್ ಸೇವಾ ಬಿಕ್ಕಟ್ಟು
ಇತ್ತಿಹಾದ್ ರೈಲಿಗೆ ಐತಿಹಾಸಿಕ ಕ್ಷಣ; ಭವ್ಯ ಆರಂಭಕ್ಕೆ ಯುಎಇನಲ್ಲಿ ಅಭೂತಪೂರ್ವ ಜನಸ್ಪಂದನ
ವಲಸಿಗರಿಗೆ ಶುಭ ಸುದ್ದಿ: ಸೌದಿ ವರ್ಕ್ ಪರ್ಮಿಟ್ ಸ್ಥಿತಿ ಸರಿಪಡಿಸಿಕೊಳ್ಳುವ ಗಡುವು ವಿಸ್ತರಣೆ
‘ಅವನು ಬದುಕಿದ್ದರೆ ನಾನು ಕೂಡ ಬದುಕುತ್ತೇನೆ’; ಭೂಕಂಪದ ಅವಶೇಷಗಳ ನಡುವೆ ಮರಣವನ್ನೇ ಗೆದ್ದು ಬಂದ ತಾಯಿ ಮತ್ತು 18 ದಿನದ ಮಗು!
ದಾಳಿಗಳು ಮುಂದುವರಿದರೆ ‘ನರಕಸದೃಶ’ ತಿರುಗೇಟು ನೀಡಲಾಗುವುದು- ಇರಾನ್ ಎಚ್ಚರಿಕೆ
ಮತ್ತೆ ಯುದ್ಧವೇ? – ಎರಡನೇ ದಿನವೂ ಇರಾನ್ ಮೇಲೆ ಯುಎಸ್ ದಾಳಿ
ಬಹ್ರೇನ್ ಮೇಲೆ ಇರಾನ್ ಡ್ರೋನ್ ದಾಳಿ: ಸೌದಿ ಅರೇಬಿಯಾ ತೀವ್ರ ಖಂಡನೆ- ಪೂರ್ಣ ಬೆಂಬಲ ಘೋಷಣೆ