ದುಬೈ: ಕೊಲ್ಲಿಯ ಪ್ರಮುಖ ರಾಷ್ಟ್ರವಾದ ಸುಲ್ತಾನೇಟ್ ಓಫ್ ಒಮಾನ್ ಇದರ ದೊರೆ ಖಾಬೂಸ್ ಬಿನ್ ಸಈದ್ ಅವರ ವಿಯೋಗದಲ್ಲಿ ಕರ್ನಾಟಕ ಕಲ್ಚರಲ್ ಫೌಂಡೇಶನ್ ಅಂತಾರಾಷ್ಟ್ರೀಯ ಸಮಿತಿ (KCF, INC) ಸಂತಾಪ ವ್ಯಕ್ತಪಡಿಸಿದೆ.
ಐದು ದಶಕಗಳಷ್ಟು ಕಾಲ ಒಮಾನ್ ಆಳಿದ ಸುಲ್ತಾನ್ ಭಾರತೀಯರಿಗೆ ಆಪ್ತರಾಗಿದ್ದು, ಕನ್ನಡಿಗರ ಸಹಿತ ಲಕ್ಷಾಂತರ ಭಾರತೀಯರು ಒಮಾನಿನಲ್ಲಿ ಉದ್ಯೋಗದಲ್ಲಿದ್ದು, ಆಧುನಿಕ ಒಮಾನ್ ನಿರ್ಮಾಣದಲ್ಲಿ ಅವರ ಸೇವೆಯನ್ನು ಖಾಬೂಸ್ ರವರು ಯಾವಾಗಲೂ ಬಹು ಕೃತಜ್ಞತೆಯೊಂದಿಗೆ ಸ್ಮರಿಸುತ್ತಿದ್ದರು.
ಜಗತ್ತಿನಾದ್ಯಂತ ಹಲವು ರಾಷ್ಟ್ರಗಳಿಂದ ಉದ್ಯೋಗ ಅರಸಿ ಬಂದವರಿಗೆ ಜೀವನೋಪಾಯವನ್ನು ನೀಡಲು ತನ್ನ ರಾಷ್ಟ್ರದ ಜನತೆಯನ್ನು ಸಜ್ಜುಗೊಳಿಸಿ, ರಾಷ್ಟ್ರದ ಕ್ಯೆಗಾರಿಕೆ ಮತ್ತು ಮೂಲಭೂತ ಸೌಕರ್ಯಗಳಲ್ಲಿ ಅತೀ ಹೆಚ್ಚಿನ ಕಾಳಜಿ ವಹಿಸಿ ಪ್ರಪಂಚದ ಮುಂಚೂಣಿ ರಾಷ್ಟ್ರವಾಗಲು ಪ್ರಯತ್ನಿಸಿದ ಅಪ್ರತಿಮ ನಾಯಕ ಸುಲ್ತಾನ್ ಖಾಬೂಸ್ ರವರ ಅಂತ್ಯವು ಒಮಾನಿಗೆ ಮಾತ್ರವಲ್ಲ ಎಲ್ಲಾ ಮನುಷ್ಯ ಸ್ನೇಹಿಗಳಿಗೆ ದುಃಖ ತಂದಿರಿಸಿದೆ ಎಂದು KCF ಸಂತಾಪ ಸೂಚಕ ಪ್ರಕಟಣೆಯಲ್ಲಿ ತಿಳಿಸಿತು.
ಅವರ ಆತ್ಮಶಾಂತಿಯನ್ನು ಆಗ್ರಹಿಸಿ ದುಆ ಕಾರ್ಯಕ್ರಮ ಸಂಘಟಿಸಲು KCF ತನ್ನೆಲ್ಲ ಘಟಕಗಳಿಗೆ ಸೂಚಿಸಲಾಗಿದೆ.















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ