janadhvani

Kannada Online News Paper

ಜ.9 ಇಂದು ಬೆಳಂದೂರಿಗೆ ಬಾಯಾರ್ ತಂಙಳ್-ಮೀಲಾದ್ ಸಮಿತಿ ಯಶಸ್ವಿಗೆ ಕರೆ

ಪುತ್ತೂರು: ಮೀಲಾದ್ ಸಮಿತಿ ಬೆಳಂದೂರು ಇದರ ಆಶ್ರಯದಲ್ಲಿ 7ನೇ ವರ್ಷದ ಬೃಹತ್ ಹುಬ್ಬುರ್ರಸೂಲ್ ಕಾನ್ಪರೆನ್ಸ್ ಕಾರ್ಯಕ್ರಮ ಇಂದು ರಾತ್ರಿ 7: ಕ್ಕೆ ಬೆಳಂದೂರು ATC ಮೈದಾನದಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ನೂರುಸ್ಸಾದಾತ್ ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಇಂಬಿಚ್ಚಿಕೋಯ ತಂಙಳ್ ಬಾಯಾರ್,ಖ್ಯಾತ ವಾಗ್ಮಿ ಅಶ್ರಫ್ ಜೌಹರಿ ಎರುಮಾಡ್, ಸ್ವಾದಿಖ್ ಸಖಾಫಿ ಕರಿಂಬಿಲ್ ಮುದರ್ರಿಸ್ ಬೈತಡ್ಕ ಹಾಗೂ ಇನ್ನಿತರ ಹಲವಾರು ಉಲಮಾ, ಸಾದಾತುಗಳು ಉಮರಾ ನಾಯಕರು ಭಾಗವಹಿಸಲಿದ್ದಾರೆ.

ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಪ್ರಕಟನೆಯಲ್ಲಿ ಕೋರಲಾಗಿದೆ.